More

    ಇಸ್ರೇಲ್​ ಬೆಂಬಲಕ್ಕೆ ನಾವಿದ್ದೇವೆ ಎಂದ ಜೋ ಬೈಡೆನ್​; ಖಂಡಿಸುವ ಜತೆಗೆ ಎಚ್ಚರಿಕೆಯನ್ನೂ ನೀಡಿದ ಅಮೆರಿಕ

    ನವದೆಹಲಿ: ಇಸ್ರೇಲ್ ಮೇಲೆ ಹಮಾಸ್ ಉಗ್ರರ ದಾಳಿಯನ್ನು ವಿವಿಧ ರಾಷ್ಟ್ರಗಳು ಖಂಡಿಸುವ ಜತೆಗೆ ಇಸ್ರೇಲ್​ಗೆ ಬೆಂಬಲವನ್ನೂ ಘೋಷಿಸಿವೆ. ಆ ಪೈಕಿ ಭಾರತವೂ ಇದ್ದು, ಅಮೆರಿಕ ಕೂಡ ಈ ಪ್ರಕರಣವನ್ನು ಖಂಡಿಸಿದ್ದು, ಇಸ್ರೇಲ್​ಗೆ ಬೆಂಬಲವನ್ನು ಘೋಷಿಸಿದೆ.

    ಗಾಜಾದಿಂದ ಹಮಾಸ್ ಭಯೋತ್ಪಾದಕರು ಇಸ್ರೇಲ್ ವಿರುದ್ಧ ನಡೆಸುತ್ತಿರುವ ಭಯಾನಕ ದಾಳಿಯನ್ನು ಯುನೈಟೆಡ್ ಸ್ಟೇಟ್ಸ್ ನಿಸ್ಸಂದಿಗ್ಧವಾಗಿ ಖಂಡಿಸುತ್ತದೆ ಮತ್ತು ಇಸ್ರೇಲ್ ಸರ್ಕಾರ ಹಾಗೂ ಜನರಿಗೆ ಎಲ್ಲಾ ಸೂಕ್ತ ಬೆಂಬಲ ನೀಡಲು ಸಿದ್ಧ ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ.

    ಇಸ್ರೇಲ್​ ಪ್ರಧಾನಿ ನೆತನ್ಯಾಹು ಅವರಿಗೆ ಇಂದು ಕರೆ ಮಾಡಿ ಮಾತನಾಡಿದ್ದಾಗಿ ಹೇಳಿದ ಬೈಡೆನ್​, ಅವರೊಂದಿಗೆ ನಡೆಸಿದ್ದ ಸಂಭಾಷಣೆಯನ್ನು ಉಲ್ಲೇಖಿಸಿ ಈ ವಿಷಯ ತಿಳಿಸಿದ್ದಾರೆ. ಇಂದು ಬೆಳಗ್ಗೆ ನಾನು ಇಸ್ರೇಲ್​ನಲ್ಲಿ ನಡೆಯುತ್ತಿರುವ ಭೀಕರ ದಾಳಿಗಳ ಬಗ್ಗೆ ಪ್ರಧಾನಿ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದೇನೆ. ಭಯೋತ್ಪಾದನೆಯನ್ನು ಎಂದಿಗೂ ಸಮರ್ಥಿಸಲಾಗುವುದಿಲ್ಲ. ಇಸ್ರೇಲ್ ತನ್ನನ್ನು ಮತ್ತು ತನ್ನ ಜನರನ್ನು ರಕ್ಷಿಸುವ ಹಕ್ಕನ್ನು ಹೊಂದಿದೆ. ಈ ಪರಿಸ್ಥಿತಿಯಲ್ಲಿ ಲಾಭ ಪಡೆಯಲು ಇಸ್ರೇಲ್​ಗೆ ಪ್ರತಿಕೂಲವಾಗಿರುವ ಇತರ ಯಾವುದೇ ಪಕ್ಷದ ವಿರುದ್ಧ ಯುನೈಟೆಡ್ ಸ್ಟೇಟ್ಸ್ ಎಚ್ಚರಿಕೆ ನೀಡುತ್ತದೆ. ಇಸ್ರೇಲ್​ನ ಭದ್ರತೆಗೆ ನಮ್ಮ ಆಡಳಿತದ ಸಂಪೂರ್ಣ ಬೆಂಬಲ ಇದೆ ಎಂಬ ಭರವಸೆ ನೀಡಿದ್ದಾಗಿ ತಿಳಿಸಿದ್ದಾರೆ.

    ಇದನ್ನೂ ಓದಿ: ಇಬ್ಬರು ಮಕ್ಕಳನ್ನು ನೋಡಿಕೊಳ್ಳೋ ಆಯಾಗೆ 80 ಲಕ್ಷ ರೂ. ಸಂಬಳ ಕೊಡ್ತಾರಂತೆ!

    ಈ ಹಿಂಸಾಚಾರದಿಂದ ಸಂತ್ರಸ್ತರಾದ ಎಲ್ಲಾ ಕುಟುಂಬಗಳ ಕುರಿತು ಪ್ರಾರ್ಥಿಸುವುದಾಗಿ ಹೇಳಿರುವ ಬೈಡೆನ್​, ಸಾವಿಗೀಡಾದವರ ಬಗ್ಗೆ ಸಂತಾಪ ಸೂಚಿಸಿ, ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಆಶಿಸಿದ್ದಾರೆ. ತಮ್ಮ ತಂಡ ಮತ್ತು ನಾನು ಈ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಅಲ್ಲಿನ ಪ್ರಧಾನಿ ನೆತನ್ಯಾಹು ಜತೆ ನಿಕಟ ಸಂಪರ್ಕದಲ್ಲಿರುವುದಾಗಿ ಬೈಡೆನ್ ತಿಳಿಸಿದ್ದಾರೆ.

    ಇಸ್ರೇಲ್​ನ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದಿರುವ ಯುಎಸ್​ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಜೆ ಆಸ್ಟಿನ್​ ||| ಕೂಡ ಘಟನೆಯನ್ನು ಖಂಡಿಸಿ, ಇಸ್ರೇಲ್​ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಯುಎಸ್​ನ ಸೆಕ್ರೆಟರಿ ಆಫ್ ಸ್ಟೇಟ್​ ಕೂಡ ಇಸ್ರೇಲ್ ಮೇಲಿನ ದಾಳಿಯನ್ನು ಖಂಡಿದ್ದು, ಭಯೋತ್ಪಾದನೆಯನ್ನು ಸಹಿಸುವುದಿಲ್ಲ ಎಂದಿದ್ದಾರೆ. ಎನ್​ಎಸ್​ಸಿ ವಕ್ತಾರರಾದ ಅಡ್ರಿನ್ನೇ ವಾಟ್ಸನ್​ ಕೂಡ ಇಸ್ರೇಲ್ ಮೇಲಿನ ಉಗ್ರ ದಾಳಿಯನ್ನು ಖಂಡಿಸಿ ಬೆಂಬಲ ಘೋಷಿಸಿದ್ದಾರೆ.

    ಇರುಳಾದರೂ ಮುಗಿಯದ ಕದನ; ಹಮಾಸ್​ ದಾಳಿಗೆ ನೂರಕ್ಕೂ ಅಧಿಕ ಇಸ್ರೇಲಿಗರು ಬಲಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts