More

    ಯೂಕ್ರೇನ್​ನ 2 ವಲಯಗಳನ್ನು ಸ್ವತಂತ್ರ ರಾಜ್ಯಗಳೆಂದು ಘೋಷಿಸಿದ ಪುಟಿನ್​: ಅಮೆರಿಕದಿಂದಲೂ ಮಹತ್ವದ ಹೆಜ್ಜೆ

    ಕೈವ್​: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಸಂಘರ್ಷ ಮತ್ತಷ್ಟು ತಾರಕಕ್ಕೇರಿರುವ ಲಕ್ಷಣಗಳು ಗೋಚರಿಸುತ್ತಿವೆ. ಯೂಕ್ರೇನ್ ವಿಚಾರದಲ್ಲಿ ತಮ್ಮ ಪಟ್ಟು ಸಡಿಲಿಸದ ರಷ್ಯಾ, ಯುದ್ಧಕ್ಕೆ ಸನ್ನದ್ಧವಾಗಿ ನಿಂತಿದೆ. ಇದರ ನಡುವೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ತೆಗೆದುಕೊಂಡಿರುವ ನಿರ್ಧಾರ ಭಾರೀ ಸಂಚಲನವನ್ನೇ ಸೃಷ್ಟಿಸಿದೆ.

    ಯೂಕ್ರೇನ್​ನಲ್ಲಿ ಬಂಡಾಯ ಎದ್ದಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಲಯಗಳನ್ನು ಪುಟಿನ್​ ಸ್ವತಂತ್ರ ರಾಜ್ಯಗಳೆಂದು ಘೋಷಣೆ ಮಾಡಿದ್ದಾರೆ. ಅಲ್ಲದೆ, ಈ ಸಂಬಂಧ ಸುಗ್ರೀವಾಜ್ಞೆಗೂ ಸಹ ಸಹಿ ಹಾಕಲಾಗಿದೆ. ಈ ಎರಡು ರಾಜ್ಯಗಳಿಗೆ ತಕ್ಷಣ ರಷ್ಯಾ ಸೇನೆ ತೆರಳುವಂತೆ ಆದೇಶವನ್ನು ಮಾಡಲಾಗಿದೆ.

    ಇನ್ನೊಂದೆಡೆ ರಷ್ಯಾ ನಿರ್ಧಾರವನ್ನು ಅಮೆರಿಕ ತೀವ್ರವಾಗಿ ಖಂಡಿಸಿದೆ. ಅಲ್ಲದೆ, ಅಮೆರಿಕ ಅಧ್ಯಕ್ಷ ಜೋ ಬೈಡೆನ್​ ಕೂಡ ಒಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಬಂಡಾಯ ಎದ್ದಿರುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಲಯಗಳಿಗೆ ಆರ್ಥಿಕ ಸಹಾಯವನ್ನು ನಿರ್ಬಂಧಿಸಿದ್ದಾರೆ.

    ರಷ್ಯಾ ನಿರ್ಧಾರವನ್ನು ಟೀಕಿಸಿರುವ ಅಮೆರಿಕ ರಾಜ್ಯ ಕಾರ್ಯದರ್ಶಿ ಅಂಟೋನಿ ಬ್ಲಿಂಕನ್​, ಪೀಪಲ್ಸ್​ ರಿಪಬ್ಲಿಕ್​ ಎಂದು ಕರೆಯಲ್ಪಡುವ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ವಲಯಗಳನ್ನು ಸ್ವತಂತ್ರ ರಾಜ್ಯಗಳೆಂದು ಘೋಷಿಸಿರುವ ರಷ್ಯಾ ಅಧ್ಯಕ್ಷ ಪುಟಿನ್​ ನಿರ್ಧಾರವನ್ನು ಖಂಡಿಸುತ್ತೇನೆ ಎಂದಿದ್ದಾರೆ. ರಷ್ಯಾ ನಿರ್ಧಾರವು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಎಂದು ಯುರೋಪಿಯನ್​ ಒಕ್ಕೂಟ ಸಹ ಖಂಡಿಸಿದೆ.

    ಯಾವುದೇ ಸಂದರ್ಭದಲ್ಲಿ ಯೂಕ್ರೇನ್​ ಅನ್ನು ರಷ್ಯಾ ಆಕ್ರಮಿಸಿಕೊಳ್ಳಲಿದೆ ಮತ್ತು ಪೂರ್ವ ಉಕ್ರೇನ್‌ನಲ್ಲಿನ ಸಂಘರ್ಷವನ್ನು ಆಕ್ರಮಣಕ್ಕೆ ಬಳಸಿಕೊಳ್ಳಬಹುದೆಂದು ಭೀತಿ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಕಾಡತೊಡಗಿದೆ. ಪುಟಿನ್​ ಈಗಾಗಲೇ ಸ್ವತಂತ್ರ ರಾಜ್ಯಗಳು ಎಂದು ಘೋಷಿಸಲ್ಪಟ್ಟ ಎರಡು ರಾಜ್ಯಗಳಲ್ಲಿ ಸೇನೆಯನ್ನು ಜಮಾವಣೆಗೊಳ್ಳಲು ಆದೇಶಿಸಿದ್ದಾರೆ.

    ಇತ್ತ ಉತ್ತರ ಗಡಿಯಲ್ಲಿರುವ ಬೆಲಾರಸ್‌ನಲ್ಲಿ ಉಕ್ರೇನ್ 30,000 ಸೈನಿಕರನ್ನು ನಿಯೋಜಿಸಿದೆ. ಇದರ ಜೊತೆಗೆ, ಉಕ್ರೇನ್ 150,000 ಸೈನಿಕರು, ಯುದ್ಧವಿಮಾನಗಳು ಮತ್ತು ಇತರ ಉಪಕರಣಗಳನ್ನು ಗಡಿಯುದ್ದಕ್ಕೂ ನಿಯೋಜಿಸಿದೆ. ಯಾವುದೇ ಸಂದರ್ಭದಲ್ಲಿ ಎರಡು ರಾಷ್ಟ್ರಗಳ ನಡುವೆ ಸಮರ ಏರ್ಪಡುವ ಲಕ್ಷಣಗಳು ಕಾಣಿಸುತ್ತಿವೆ. (ಏಜೆನ್ಸೀಸ್​)

    ಅಪರೂಪದ ಮೀನು ಹಿಡಿದು ವಾಟ್ಸ್​ಆ್ಯಪ್​ ಗ್ರೂಪ್​ನಲ್ಲಿ ಫೋಟೋ ಶೇರ್​: ಪ್ರತಿಕ್ರಿಯೆ ನೋಡಿ ಬೆರಗಾದ ಮೀನುಗಾರರು!

    ಮಕ್ಕಳ ಲಸಿಕೆ ಕೊರ್ಬಿವ್ಯಾಕ್ಸ್ ತುರ್ತು ಬಳಕೆಗೆ ಅನುಮತಿ; 2022ರಲ್ಲಿ ಮಹಾಮಾರಿ ಅಂತ್ಯ ಎಂದ ಡಬ್ಲ್ಯುಎಚ್​ಒ

    ನಾಯಕರ ಪ್ರಲಾಪ, ನಡೆಯದ ಕಲಾಪ: ಮೇಲ್ಮನೆಯಲ್ಲೂ ಮುಂದುವರಿದ ಧ್ವಜ ಪ್ರಕರಣ ಹಗ್ಗಜಗ್ಗಾಟ; ಸಭಾಪತಿ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts