More

    ಪೆನ್ಸಿಲ್ವೇನಿಯಾದಲ್ಲೂ ತಿರುವು ಪಡೆದ ಫಲಿತಾಂಶ; ಬಿಡೆನ್​ಗೆ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ

    ವಾಷಿಂಗ್ಟನ್​: ಅಮೆರಿಕದ ಚುನಾವಣಾ ಫಲಿತಾಂಶ ರೋಚಕ ತಿರುವುಗಳನ್ನು ಪಡೆದುಕೊಳ್ಳುತ್ತಾ ಮುಂದೆ ಸಾಗಿದೆ. ಕೇವಲ ಐದು ರಾಜ್ಯಗಳ ಫಲಿತಾಂಶ ಬಾಕಿಯಿರುವ ಈ ಸಮಯದಲ್ಲಿ, ಮುನ್ನೆಡೆಯಲ್ಲಿದ್ದವರು ಹಿನ್ನೆಡೆ, ಹಿನ್ನೆಡೆಯಲ್ಲಿದ್ದವರು ಮುನ್ನೆಡೆ ಸಾಧಿಸುವಂತಾಗಿದೆ. ಆರಂಭದಿಂದಲೂ ಟ್ರಂಪ್​ನತ್ತ ವಾಲಿದ್ದ ಪೆನ್ಸಿಲ್ವೇನಿಯಾ ಇದೀಗ ನಿಧಾನವಾಗಿ ಬಿಡೆನ್​ನತ್ತ ವಾಲಲಾರಂಭಿಸಿದೆ.

    ಸದ್ಯ ರಿಪಬ್ಲಿಕನ್​ ಪಕ್ಷದ ಡೊನಾಲ್ಡ್​ ಟ್ರಂಪ್​ಗೆ 214 ಸ್ಥಾನ ಸಿಕ್ಕಿದೆ. ಅವರ ಪ್ರತಿಸ್ಪರ್ಧಿ ಡೆಮಾಕ್ರಟಿಕ್​ ಪಕ್ಷದ ಬಿಡೆನ್​ಗೆ 264 ಸ್ಥಾನ ಸಿಕ್ಕಿದೆ. 270 ಸ್ಥಾನ ಸಿಕ್ಕವರು ಅಧ್ಯಕ್ಷ ಸ್ಥಾನಕ್ಕೇರಲಿದ್ದಾರೆ. ಫಲಿತಾಂಶ ಪ್ರಕಟವಾಗುವುದು ಬಾಕಿಯಿರುವ ಐದು ರಾಜ್ಯಗಳಲ್ಲಿ ನಾಲ್ಕು ಪ್ರಮುಖ ರಾಜ್ಯಗಳಲ್ಲಿ ಇಂದು ಸಂಜೆಯವರೆಗೂ ಟ್ರಂಪ್​ ಮುನ್ನೆಡೆ ಸಾಧಿಸಿದ್ದರು. ಕೇವಲ ನೆವೆಡಾ ರಾಜ್ಯದಲ್ಲಿ ಬಿಡೆನ್​ ಮುನ್ನಡೆಯಿದ್ದರು.

    ಇದನ್ನೂ ಓದಿ: ನಾವಿಬ್ರು ಮದ್ವೆಯಾಗೋಣ ನಾಗಚೈತನ್ಯಗೆ ಡಿವೋರ್ಸ್​ ಕೊಡಿ ಎಂದ ಫ್ಯಾನ್: ಸಮಂತಾ ಉತ್ತರಕ್ಕೆ ಭಾರಿ ಮೆಚ್ಚುಗೆ!

    ಒಂದು ಪಕ್ಷ ಆ ನಾಲ್ಕು ರಾಜ್ಯಗಳು ಟ್ರಂಪ್​ಗೆ ಒಲಿದು, ನೆವೆಡಾ ಮಾತ್ರ ಬಿಡೆನ್​ ಪಾಲಿನದ್ದಾಗಿದ್ದರೆ, ಟ್ರಂಪ್​ 268 ಮತ್ತು ಬಿಡೆನ್​ 270 ಸ್ಥಾನ ಗಳಿಸಿದಂತಾಗುತ್ತಿತ್ತು. ಆದರೆ ಸಂಜೆ ರೋಚಕ ತಿರುವ ಪಡೆದ ಜಾರ್ಜಿಯ ಫಲಿತಾಂಶ, ಬಿಡೆನ್​ಗೆ ಮುನ್ನಡೆ ನೀಡಿದೆ. ಆ ಹಿನ್ನೆಲೆಯಲ್ಲಿ 270ರ ಜತೆ ಜಾರ್ಜಿಯಾದ 16 ಸ್ಥಾನಗಳೂ ಬಿಡೆನ್​ ತೆಕ್ಕೆಗೆ ಹೋಗುವ ಸಾಧ್ಯತೆಯುಂಟಾಗಿತ್ತು. ರಾತ್ರಿಯಾದಂತೆ ಇನ್ನಷ್ಟು ತಿರುವು ಸಿಕ್ಕಿದ್ದು, ಇದೀಗ ಪೆನ್ಸಿಲ್ವೇನಿಯಾ ಫಲಿತಾಂಶವೂ ಬಿಡೆನ್​ ಕಡೆಗೆ ಸಾಗಿದೆ. ಈ ರಾಜ್ಯದ 20 ಸ್ಥಾನಗಳೂ ಬಿಡೆನ್​ ಪಾಲಿಗೆ ಸಿಕ್ಕುಬಿಟ್ಟರೆ, ಭಾರೀ ಮುನ್ನಡೆಯೊಂದಿಗೆ ಬಿಡೆನ್​ ಜಯಭೇರಿ ಸಾಧಿಸುವ ಸಾಧ್ಯತೆಯಿದೆ. ಹಾಗಿದ್ದರೂ ಇಬ್ಬರ ನಡುವಿನ ಅಂತರ ಕಡಿಮೆಯಿರುವುದರಿಂದಾಗಿ ಈಗಲೇ ಫಲಿತಾಂಶವನ್ನು ನಿರ್ಧರಿಸಲಾಗುವುದಿಲ್ಲ ಎನ್ನುವುದು ಅನೇಕರ ಅಭಿಪ್ರಾಯ. (ಏಜೆನ್ಸೀಸ್​)

    ಚುನಾವಣೆ ಗೆದ್ದರೆ ಹೊಸ ಬಿಹಾರ ನಿರ್ಮಿಸ್ತಾರಂತೆ ರಾಹುಲ್​ ಗಾಂಧಿ

    ಪಟಾಕಿ ಮಾರಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ; ಮುಸ್ಲಿಂ ಪಟಾಕಿ ಅಂಗಡಿಗೆ ಹಿಂದೂ ಯುವಕರ ವಾರ್ನಿಂಗ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts