More

    10ನೇ ಕ್ಲಾಸ್ ಪಾಸಾಗಿದ್ದೀರಾ? ಭಾರತೀಯ ಅಂಚೆ ಇಲಾಖೆಯಲ್ಲಿ ಉದ್ಯೋಗವೇನಿದೆ ನೋಡಿ

    ನವದೆಹಲಿ: ಇಂಡಿಯಾ ಪೋಸ್ಟ್ ಆಫೀಸ್ ಗ್ರಾಮೀಣ್ ಡಾಕ್ ಸೇವಕ್ಸ್ (ಜಿಡಿಎಸ್), ವಿವಿಧ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಿದೆ.
    ಒಟ್ಟು 3262 ಖಾಲಿ ಹುದ್ದೆಗಳಿವೆ.  2020ರ ಜೂನ್ 22 ಕ್ಕೆ ಅನ್ವಯಿಸುವಂತೆ ಕನಿಷ್ಠ 18 ವರ್ಷ, ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.
    ವಿವಿಧ ವರ್ಗಗಳಿಗೆ ಗರಿಷ್ಠ ವಯೋಮಿತಿ ಹೀಗಿದೆ- ಎಸ್‌ಸಿ / ಎಸ್‌ಟಿ: 5 ವರ್ಷ, ಒಬಿಸಿ: 3 ವರ್ಷ, ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು.

    ಇದನ್ನೂ ಓದಿ: ಪತ್ನಿಯ ಮಾತಿಗೆ ಕ್ಯಾರೇ ಅನ್ನದೆ ಆತ ಮಾಂಸದಡುಗೆ ಮಾಡಿಯೇ ಬಿಟ್ಟ… ಮುಂದೇನಾಯ್ತು ನೋಡಿ…!

    ಅಭ್ಯರ್ಥಿ ಮಾನ್ಯತೆ ಪಡೆದ ಶಾಲಾ ಶಿಕ್ಷಣ ಮಂಡಳಿಯಿಂದ 10 ನೇ ತರಗತಿಯಲ್ಲಿ ಪಾಸಾಗಿರಬೇಕು. ಮೊದಲ ಪ್ರಯತ್ನದಲ್ಲೇ 10 ನೇ ತರಗತಿ ಪಾಸಾದ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಸ್ಥಳೀಯ ಭಾಷಾ ಜ್ಞಾನ ಹೊಂದಿರಬೇಕು. ಜಿಡಿಎಸ್ ಪರೀಕ್ಷಾ ಅರ್ಜಿ ಶುಲ್ಕ 100 ರೂ. ಇದ್ದು, ನಿಗದಿತ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಇರುತ್ತದೆ.  ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 21 ರೊಳಗಾಗಿ appost.in ನಲ್ಲಿ ಅರ್ಜಿ ಸಲ್ಲಿಸಬಹುದು.

    ಗುಡ್ ನ್ಯೂಸ್…! ಒಂದು ಕೋಟಿ ಜನರಿಗೆ ಉದ್ಯೋಗ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಲು ಮುಂದಾಗಿದೆ ಈ ರಾಜ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts