More

    ಪಶು ವೈದ್ಯಕೀಯ ಪರೀಕ್ಷಕರಾಗಲು ಅರ್ಹತೆಗಳೇನಿವೆ?

    ಬೆಂಗಳೂರು: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಡಿ ಕಲ್ಯಾಣ ಕರ್ನಾಟಕ ಪ್ರದೇಶದ ಸ್ಥಳೀಯ ವೃಂದದ 32 ಪಶು ವೈದ್ಯಕೀಯ ಪರೀಕ್ಷಕರ ಹಾಗೂ 83 ಪಶುವೈದ್ಯಕೀಯ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಆನ್​ಲೈನ್ ಅರ್ಜಿ ಆಹ್ವಾನಿಸಲಾಗಿದೆ.
    ಪಶುವೈದ್ಯಕೀಯ ಪರೀಕ್ಷಕರ ಹುದ್ದೆಗೆ ಬಿಎಸ್ಸಿ ಪದವಿಯಲ್ಲಿ ಪ್ರಾಣಿಶಾಸ್ತ್ರ ವಿಷಯವನ್ನು ಐಚ್ಛಿಕ ವಿಷಯವಾಗಿ ಹೊಂದಿರುವ ಪದವಿಯ ಅಂಕಗಳ ಆಧಾರದ ಮೇಲೆ ಹಾಗೂ ರೋಸ್ಟರ್ ವಿಧಾನವನ್ನು ಅನುಸರಿಸಿ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು,.
    ಅಗತ್ಯ ಖಾಲಿ ಹುದ್ದೆಗಳಿಗಾಗಿ ಬಿಎಸ್ಸಿ (ಪ್ರಾಣಿಶಾಸ್ತ್ರ) ಅಭ್ಯರ್ಥಿಗಳು ಲಭ್ಯವಿಲ್ಲದಿದ್ದಲ್ಲಿ ಯಾವುದೇ ವಿಜ್ಞಾನ ವಿಷಯದಲ್ಲಿ ಪದವಿ ಪಡೆದಿರುವ ಮತ್ತು ಪಿಯುಸಿಯಲ್ಲಿ ಐಚ್ಛಿಕ ವಿಷಯವಾಗಿ ಜೀವಶಾಸ್ತ್ರವನ್ನು ಅಭ್ಯಸಿಸಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

    ಇದನ್ನೂ ಓದಿ: ಕೋವಿಡ್​-19 ಪಿಡುಗಿನ ನಡುವೆಯೂ ರಾಜಕೀಯ; ಠಾಕ್ರೆ ಸರ್ಕಾರ ಬೀಳಿಸಲು ಬಿಜೆಪಿ ನಡೆಸಿದೆಯಂತೆ ಹುನ್ನಾರ

    ಪಶು ವೈದ್ಯಕೀಯ ಸಹಾಯಕ ಹುದ್ದೆಗೆ ಕರ್ನಾಟಕ ಪಶು ವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿವಿ ಅಥವಾ ಯಾವುದೇ ಇತರೆ ವಿವಿ ನಡೆಸಲಾದ ಪಶು ಆರೋಗ್ಯ (ಪಶು ಸಂಗೋಪನೆ) ಡಿಪ್ಲೊಮಾ ಪರೀಕ್ಷೆ ಪಾಸಾಗಿರಬೇಕು.
    ಡೈರಿಗೆ ಸಂಬಂಧಿಸಿದ 2 ವರ್ಷಗಳ ಉದ್ಯೋಗ ಆಧಾರಿತ ಕೋರ್ಸ್ ಪಾಸಾಗಿರಬೇಕು.  ಅಭ್ಯರ್ಥಿ ಕನಿಷ್ಠ 18 ವರ್ಷ, ಗರಿಷ್ಠ 35 ವರ್ಷ ವಯೋಮಿತಿ ಪೂರೈಸಿರಬೇಕು. ಅರ್ಹ ಅಭ್ಯರ್ಥಿಗಳಿಗೆ ಸೂಕ್ತ ವಯೋ ಸಡಿಲಿಕೆ ಇರುತ್ತದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆಗಸ್ಟ್ 14 ರೊಳಗಾಗಿ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಹತೆ, ವಯೋಮಿತಿ, ಅರ್ಜಿಶುಲ್ಕ ಇತ್ಯಾ‘ದಿ ವಿವರಗಳಿಗೆ http://ahvs.kar.nic.in ನಲ್ಲಿ ಸಂಪೂರ್ಣ ಅಧಿಸೂಚನೆ ನೋಡಬಹುದು.

    ಈ ರಾಜ್ಯದಲ್ಲಿ ಮಾಸ್ಕ್​ ಧರಿಸದೇ ಇದ್ದರೆ ಬೀಳುತ್ತೆ 10 ಸಾವಿರ ರೂಪಾಯಿ ಜುಲ್ಮಾನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts