More

    ಹುದ್ದೆಗಳ ಕಡಿತದ ಅವೈಜ್ಞಾನಿಕ ಪ್ರಸ್ತಾವನೆ ಕೈಬಿಡಿ

    ಸಿಂಧನೂರು: ನೌಕರ ವಿರೋಧಿ ನೀತಿಗಳನ್ನು ವಿರೋಧಿಸಿ ರಾಜ್ಯ ಸರ್ಕಾರಿ ನೌಕರರ ಒಕ್ಕೂಟದಿಂದ ಮಿನಿವಿಧಾನಸೌಧ ಮುಂದೆ ಪ್ರತಿಭಟಿಸಿ ಮಂಗಳವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು.

    ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಜನವರಿ 2020 ರಿಂದ ಜೂನ್ 2021 ರವರೆಗೆ ತುಟ್ಟಿಭತ್ಯೆ ಹೆಚ್ಚಳ ದರ ಸ್ಥಗಿತಗೊಳಿಸಿರುವ ಆದೇಶ ರದ್ದು ಪಡಿಸಬೇಕು. ಕರೊನಾ ವಾರಿಯರ್ಸ್‌ ಆಗಿ ಕೆಲಸ ಮಾಡುತ್ತಿರುವ ನೌಕರರಿಗೆ ಕೆಎಸ್‌ಎಸ್ ಅಧಿಕಾರಿಗಳಿಗೆ ನೀಡುತ್ತಿರುವ ವಿಶೇಷ ಭತ್ಯೆ ಮತ್ತು ಗಳಿಕೆ ರಜೆ ನಗದೀಕರಣ ಸೌಲಭ್ಯ ನೀಡುವುದು, 2020ನೇ ಸಾಲಿನ ನೌಕರರ ಗಳಿಕೆ ರಜೆ ನಗದೀಕರಣ ಸೌಲಭ್ಯ ಮರು ಸ್ಥಾಪಿಸಿವುದು, ರಾಜ್ಯ ಸರ್ಕಾರದ ಹುದ್ದೆಗಳನ್ನು ಕಡಿತ ಮಾಡುವ ಅವೈಜ್ಞಾನಿಕ ಪ್ರಸ್ತಾವನೆ ಕೈಬಿಡಬೇಕು. ಕರೊನಾ ಸೇನಾನಿ ನೌಕರರಿಗೆ ರೂ.50 ಲಕ್ಷ ರೂ. ವಿಮೆ ನೀಡುವುದು ಮತ್ತು ಮಾಸಿಕ ವಿಶೇಷ ಭತ್ಯೆ ನೀಡಬೇಕೆಂದು ಒತ್ತಾಯಿಸಿದರು.

    ಒಕ್ಕೂಟ ತಾಲೂಕು ಅಧ್ಯಕ್ಷ ಚಂದ್ರಶೇಖರ ಕಗ್ಗೋಡ್, ಪ್ರಧಾನ ಕಾರ್ಯದರ್ಶಿ ಶಕೀಲ ಅಹ್ಮದ್, ಬಸವರಾಜ ಬಿರಾದರ್, ಲಿಂಗಪ್ಪ, ಎಂ.ಡಿ.ಮೌಲಾಸಾಬ, ಪಿ.ಎಲ್.ಪಾತ್ರೋಟಿ, ಅಮರಯ್ಯ ಪತ್ರಿಮಠ, ದೊಡ್ಡಬಸವ ಗುಂಜಳ್ಳಿ, ಮಹ್ಮದ್ ಮೌಲಾಸಾಬ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts