More

    ಐದು ಸಾವಿರ ಉದ್ಯೋಗ ಸೃಷ್ಟಿ ಗುರಿ

    ಚಿತ್ರದುರ್ಗ: ಆಹಾರದಿಂದಲೇ ಸಂಪೂರ್ಣ ಆರೋಗ್ಯ ಪಡೆಯುವ ದೃಷ್ಟಿಯಿಂದ ರಾಜ್ಯದಲ್ಲೇ ಪ್ರಥಮ ಬಾರಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲೂಕಿನ 360ಕ್ಕೂ ಹೆಚ್ಚು ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಶಿವಮೊಗ್ಗದ ಯೋಗ ವಿಸ್ಮಯ ಟ್ರಸ್ಟ್‌ನ ಅನಂತ್ ತಿಳಿಸಿದರು.

    ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊಸದುರ್ಗ ತರೀಕೆರೆ ರಸ್ತೆಯ ರಾಗಿ ಡಾಲರ್ಸ್‌ ಕಾಲನಿಯಲ್ಲಿ ವಿಸ್ಮಯ ಆರ್ಗ್ಯಾನಿಕ್ ಘಟಕವನ್ನು ಜ.22 ಬೆಳಗ್ಗೆ 10ಕ್ಕೆ ಉದ್ಘಾಟಿಸಲಾಗುತ್ತಿದೆ. ಈ ಮೂಲಕ ಸಾವಯವ ಕೃಷಿಗೆ ಒತ್ತು ನೀಡಿ 5 ವರ್ಷದೊಳಗೆ ಆರೋಗ್ಯಪೂರ್ಣ ತಾಲೂಕಾಗಿ ಬದಲಾವಣೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

    2023 ಅನ್ನು ಸಿರಿಧಾನ್ಯಗಳ ವರ್ಷವಾಗಿ ಟ್ರಸ್ಟ್ ಪರಿಗಣಿಸಿದೆ. ಕಾರ್ಯಕ್ರಮವೂ ಗೋ ಮಾತೆಯ ಪೂಜೆಯೊಂದಿಗೆ ಆರಂಭವಾಗಲಿದೆ. ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾದ 1 ಸಾವಿರ ಮಂದಿ ಭಾಗವಹಿಸಲಿದ್ದಾರೆ ಎಂದರು.

    ಗ್ರಾಮೀಣ ಭಾಗದ 5 ಸಾವಿರ ಮಂದಿಗೆ ಉದ್ಯೋಗ ದೊರಕಿಸಿಕೊಡುವ ಉದ್ದೇಶದೊಂದಿಗೆ ಘಟಕ ಸ್ಥಾಪಿಸಲಾಗುತ್ತಿದೆ. ಇದರಲ್ಲಿ ಅಂಗವಿಕಲರು, ತೃತೀಯ ಲಿಂಗಿಗಳಿಗು ಆದ್ಯತೆ ನೀಡಲಾಗುವುದು. ಬೆಳೆಗಳಿಗೆ ರೈತರೇ ನಿಗದಿಗೊಳಿಸಿದ ಬೆಲೆಗೆ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಕೂಡ ಕಲ್ಪಿಸಲಾಗುವುದು ಎಂದು ವಿವರಿಸಿದರು.
    ರೈತ ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ಮಲ್ಲಿಕಾರ್ಜುನ್, ರಾಮರೆಡ್ಡಿ, ಪ್ರವೀಣ್ ಇತರರಿದ್ದರು.

    *ಕೋಟ್
    ಅಸಾಧ್ಯ ಎಂದುಕೊಂಡರೆ ಯಾವುದು ಸಾಧ್ಯವಿಲ್ಲ. ಹೀಗಾಗಿ ಟ್ರಸ್ಟ್‌ನ ಕಾರ್ಯಕ್ಕೆ ರಾಜ್ಯ ರೈತಸಂಘ ಹಾಗೂ ಹಸಿರುಸೇನೆ ಸಂಘಟನೆಯಿಂದ ಬೆಂಬಲ ಸೂಚಿಸುತ್ತಿದ್ದೇವೆ. ಸಫಲರಾಗುತ್ತಾರೆ ಎನ್ನುವ ವಿಶ್ವಾಸವಿದೆ.
    ಈಚಘಟ್ಟ ಸಿದ್ದವೀರಪ್ಪ
    ರಾಜ್ಯ ಕಾರ್ಯಾಧ್ಯಕ್ಷ, ರೈತಸಂಘ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts