More

    ತಾಂಜಾನಿಯಾ ಆಧ್ಯಕ್ಷೆಗೆ ಜೆಎನ್​ಯು ಗೌರವ ಡಾಕ್ಟರೇಟ್​ ಪ್ರದಾನ

    ನವದೆಹಲಿ: ತಾಂಜೇನಿಯಾ ರಾಷ್ಟ್ರದ ಅಧ್ಯಕ್ಷೆ ಸಮಿಯಾ ಸುಲುಹು ಹಸನ್​ ಅವರಿಗೆ ಜವಾಹರಲಾಲ್​ ನೆಹರು ವಿಶ್ವವಿದ್ಯಾನಿಲಯವು (ಜೆಎನ್​ಯು) ಗೌರವ ಡಾಕ್ಟರೇಟ್​ ಪ್ರದಾನ ಮಾಡಿದ್ದು, ಈ ಮೂಲಕ ಈ ಗೌರವಕ್ಕೆ ಪಾತ್ರರಾದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ.

    ಸಮಿಯಾ ಅವರು ನಾಲ್ಕು ದಿನಗಳ ಭೇಟಿಗಾಗಿ ಭಾನುವಾರ ಭಾರತಕ್ಕೆ ಆಗಮಿಸಿದ್ದಾರೆ. ಆಫ್ರಿಕಾದ ಹಳ್ಳಿಯೊಂದರ ಕುಟುಂಬದಲ್ಲಿ ಜನಿಸಿದ ಸಮಿಯಾ ಅವರು, ತಾಂಜಾನಿಯಾದ ಮೊದಲ ಮಹಿಳಾ ಅಧ್ಯೆಯಾಗಿದ್ದಾರೆ.

    “ಭಾರತದೊಂದಿಗೆ ಪ್ರೀತಿಯಲ್ಲಿ ಬೀಳಲು ಯಾವುದೇ ಮಧ್ಯದ ಮಾರ್ಗವಿಲ್ಲ ಎಂದು ಜಗತ್ತು ಹೇಳುತ್ತದೆ. ಅದು ಭಾರತೀಯ ಹಾಡು, ಭಾರತೀಯ ಚಲನಚಿತ್ರ ಅಥವಾ ಭಾರತೀಯ ಪಾಕ ಪದ್ಧತಿಯಾಗಿರಬಹುದು; ಭಾರತೀಯ ಮೋಡಿಯನ್ನು ವಿರೋಧಿಸುವುದು ತುಂಬಾ ಕಷ್ಟ. 1998ರಲ್ಲಿ ಹೈದರಾಬಾದ್​ನಲ್ಲಿ ಅಧ್ಯಯನ ಮಾಡಲು ನಾನು ಮೊದಲ ಬಾರಿಗೆ ಭಾರತಕ್ಕೆ ಬಂದಾಗ ನಾನು ಇದನ್ನು ಅನುಭವಿಸಿದೆ’ ಎಂದು ಅವರು ಪದವಿ ಸ್ವೀಕಾರ ಭಾಷಣದಲ್ಲಿ ಹೇಳಿದರು.

    ಸಮಾರಂಭದಲ್ಲಿ ಕೇಂದ್ರ ಶಿಣ ಮತ್ತು ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವ ಧಮೇರ್ಂದ್ರ ಪ್ರಧಾನ್​ ಮತ್ತು ವಿದೇಶಾಂಗ ಸಚಿವ ಎಸ್​. ಜೈಶಂಕರ್​ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts