More

    ಕಿವೀಸ್ ಗೆದ್ದರೂ ಸಂಭ್ರಮಿಸಲಿಲ್ಲ ನೀಶಾಮ್, ಕಾರಣವೇನು ಗೊತ್ತೇ?

    ಅಬುಧಾಬಿ: ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ ಕೊನೇ 4 ಓವರ್‌ಗಳಲ್ಲಿ 57 ರನ್ ಗಳಿಸಬೇಕಾದ ಸವಾಲು ಎದುರಿಸುತ್ತಿದ್ದಾಗ ಕಣಕ್ಕಿಳಿದು ಆರ್ಭಟಿಸಿದ ಜೇಮ್ಸ್ ನೀಶಾಮ್ (27 ರನ್, 11 ಎಸೆತ, 1 ಬೌಂಡರಿ, 3 ಸಿಕ್ಸರ್) ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಡೆರಿಲ್ ಮಿಚೆಲ್ ಜತೆಗೂಡಿ ನೀಶಾಮ್ 17 ಎಸೆತಗಳಲ್ಲೇ 40 ರನ್ ದೋಚಿದರು. ಇದರಿಂದಾಗಿ ಕಿವೀಸ್ ಇನ್ನೊಂದು ಓವರ್ ಬಾಕಿ ಇರುವಂತೆಯೇ ಗೆದ್ದು ಚುಟುಕು ಕ್ರಿಕೆಟ್ ವಿಶ್ವ ಸಮರದಲ್ಲಿ ಮೊದಲ ಬಾರಿಗೆ ಫೈನಲ್‌ಗೇರಿತು. ವಿಜಯದ ರನ್ ಸಿಡಿದಾಗ ರನ್ ಸಿಡಿದಾಗ ಎಲ್ಲರೂ ಸಂಭ್ರಮಿಸುತ್ತಿದ್ದರೆ, ನೀಶಾಮ್ ಮಾತ್ರ ಸಪ್ಪೆ ಮೋರೆ ಹಾಕಿ ಕುಳಿತಿದ್ದರು.

    ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ತಂಡದ ಐತಿಹಾಸಿಕ ಸಾಧನೆಯ ನಡುವೆಯೂ ನೀಶಾಮ್ ಯಾಕೆ ನಿರ್ಲಿಪ್ತರಾಗಿದ್ದರು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ನೀಶಾಮ್, ‘ಕೆಲಸ ಪೂರ್ಣಗೊಂಡಿದೆಯೇ? ನನಗೆ ಹಾಗನಿಸುತ್ತಿಲ್ಲ’ ಎಂದು ಟ್ವೀಟಿಸಿದ್ದಾರೆ. ಈ ಮೂಲಕ ಫೈನಲ್‌ನಲ್ಲಿ ಪ್ರಶಸ್ತಿ ಜಯಿಸುವುದೇ ತಮಗೆ ಹೆಚ್ಚು ಸಂಭ್ರಮ ತರುತ್ತದೆ ಎಂದು ಸಾರಿದ್ದಾರೆ. 2019ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಪ್ರಶಸ್ತಿ ಕೈತಪ್ಪಿದಾಗ ನೀಶಾಮ್​ ಸಾಕಷ್ಟು ನೊಂದುಕೊಂಡಿದ್ದರು. ಹೀಗಾಗಿ ಈ ಸಲ ಟಿ20 ವಿಶ್ವಕಪ್​ಗಾದರೂ ಚುಂಬಿಸುವುದು ಅವರ ಹಂಬಲವಾಗಿದೆ.

    ಕಿವೀಸ್ ಡಗೌಟ್‌ನ ಚಿತ್ರದಲ್ಲಿ ಇತರರು ಎರಡೂ ಕೈ ಮೇಲೆತ್ತಿ ವಿಜಯೋತ್ಸವ ಆಚರಿಸುತ್ತಿದ್ದರೆ, ನಾಯಕ ಕೇನ್ ವಿಲಿಯಮ್ಸನ್ ಕೂಡ ಬರೀ ನಗುಮೊಗವಷ್ಟೇ ತೋರಿರುವುದು ಗಮನಸೆಳೆದಿದೆ.

    ಶೂಟೌಟ್ ಗಾಳಿ ಸುದ್ದಿಯಿಂದಾಗಿ ಭಾರಿ ಸಂಚಲನ ಮೂಡಿಸಿದ್ದ ಕುಸ್ತಿಪಟು ನಿಶಾ ದಹಿಯಾಗೆ ಸ್ವರ್ಣ ಪದಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts