More

    ಜೀಜಾಮಾತಾ ಎಲ್ಲ ತಾಯಂದಿರಿಗೆ ಪ್ರೇರಣೆ

    ಸಂಕೇಶ್ವರ: ಒಬ್ಬ ಆದರ್ಶ ಮಗನಾಗಿ ಶಿವಾಜಿಯನ್ನು ಬೆಳೆಸಿದ ಜೀಜಾಮಾತಾ ಎಲ್ಲ ತಾಯಂದಿರಿಗೆ ಪ್ರೇರಣೆಯಾಗಬೇಕು ಎಂದು ಶಾಸಕಿ ಶಶಿಕಲಾ ಜೊಲ್ಲೆ ಹೇಳಿದರು.

    ಪಟ್ಟಣದ ಎಸ್‌ಡಿವಿಎಸ್ ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಸದ ಸಾಂಸ್ಕೃತಿಕ ಮಹೋತ್ಸವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಜೀವನ ಚರಿತ್ರೆ ಆಧಾರಿತ ‘ಶಿವಗರ್ಜನೆ’ ಮರಾಠಿ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು, ತನ್ನ ಪ್ರಜೆಗಳ ರಕ್ಷಣೆಗಾಗಿ ಶಿವಾಜಿ ಮಹಾರಾಜರು ಹೋರಾಡಿ ಜನಮಾನಸದಲ್ಲಿ ಅಚಲವಾಗಿ ಉಳಿದಿದ್ದಾರೆ. ಅವರ ಶೌರ್ಯ, ಸಾಹಸ, ದೇಶಭಕ್ತಿ ಇಂದಿಗೂ ಅಚ್ಚಳಿಯದೆ ಉಳಿದಿವೆ ಎಂದರು.

    ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಉತ್ತಮ ಸಂಗೀತ, ನೃತ್ಯ, ನಾಟಕಗಳನ್ನು ಕೇವಲ ಮನರಂಜನೆಗಾಗಿ ನೋಡದೇ ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಪುರಸಭೆ ಸದಸ್ಯ ಅಮರ ನಲವಡೆ ಮಾತನಾಡಿ, ಪೌರಾಣಿಕ ನಾಟಕಗಳು ಮನುಷ್ಯನ ಬದುಕಿನ ಮೇಲೆ ಪ್ರಭಾವ ಬೀರುವುದರ ಜತೆಗೆ ಹತ್ತಿರವಾಗಿವೆ. ಜೊಲ್ಲೆ ಗ್ರೂಪ್ ವತಿಯಿಂದ ಸಾಮಾಜಿಕ ಸೇವೆ ಜತೆಗೆ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮ ನಡೆಸುತ್ತಿರುವುದು ಶಾಘ್ಲನೀಯ ಎಂದರು.

    ಯುವ ನಾಯಕ ಬಸವಪ್ರಸಾದ ಜೊಲ್ಲೆ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೊಲ್ಲೆ ದಂಪತಿಯನ್ನು ವಿವಿಧ ಸಂಘ-ಸಂಸ್ಥೆಗಳಿಂದ ಹಾಗೂ ಗ್ರಾಮಸ್ಥರಿಂದ ಸತ್ಕರಿಸಲಾಯಿತು. ಆಶಾಜ್ಯೋತಿ ಬುದ್ಧಿಮಾಂದ್ಯ ಮಕ್ಕಳ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಮುಖಂಡರಾದ ಅಪ್ಪಾಸಾಹೇಬ ಶಿರಕೋಳಿ, ಶಂಕರರಾವ ಹೆಗಡೆ, ಶ್ರೀಕಾಂತ ಹತನೂರೆ, ಸಂಜಯ ಶಿರಕೋಳಿ, ಅಜಿತ ಕರಜಗಿ, ರವಿಂದ್ರ ಹಂಜಿ, ಬಸವರಾಜ ಹುಂದ್ರಿ, ರಾಚಯ್ಯ ಹಿರೇಮಠ, ಮಹೇಶ ಭಾತೆ, ಅಶೋಕ ಚಂದಪ್ಪಗೋಳ, ಪರಗೌಡ ಪಾಟೀಲ, ಪವನ ಪಾಟೀಲ, ರಾಜು ಮುನ್ನೋಳ್ಳಿ, ಚೇತನ ಪಾಟೀಲ, ಮಹಾವೀರ ಬಾಗಿ, ಹನುಮಂತರಾವ ಇನಾಮದಾರ, ಗುರು ಪಾಟೀಲ, ಮಧುಕರ ಕರನಿಂಗ, ಶ್ರೀಶೈಲ ಯಮಕನಮರಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts