More

    ಪಾಕಿಸ್ತಾನ ಸಂಸತ್ತಿನಲ್ಲಿ ಕಾಶ್ಮೀರದ್ದೇ ಚರ್ಚೆ; ಭಾರತದ ವಿರುದ್ಧ ಜಿಹಾದ್​ ಸಾರಲು ಪಾಕ್​ ರಾಜಕೀಯ ಮುಖಂಡರ ಆಗ್ರಹ, ಪ್ರಧಾನಿ ಇಮ್ರಾನ್​ ಖಾನ್​ ಮೌನ…

    ಇಸ್ಲಮಾಬಾದ್​: ಭಾರತದ ವಿರುದ್ಧ ಧರ್ಮಯುದ್ಧ (ಜಿಹಾದ್​) ಸಾರಬೇಕು ಎಂದು ಅಲ್ಲಿನ ಕೆಲವು ರಾಜಕೀಯ ಮುಖಂಡರು ಪ್ರಧಾನಿ ಇಮ್ರಾನ್​ ಖಾನ್ ಅವರನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ.

    ಅಲ್ಲಿನ ಮಾಧ್ಯಮವೊಂದು ಈ ಬಗ್ಗೆ ವರದಿ ಮಾಡಿದೆ. ಭಾರತದ ವಿರುದ್ಧ ಜಿಹಾದ್ ಸಾರಬೇಕು ಎಂದು ಜಾಮಿಯತ್ ಉಲೆಮಾ-ಇ-ಇಸ್ಲಾಂ-ಫಝ್ಲ್​ ಪಕ್ಷ ಪಾಕ್​ ಸಂಸತ್ತಿನಲ್ಲಿಯೇ ಸರ್ಕಾರವನ್ನು ಒತ್ತಾಯಿಸಲಾಗಿದೆ ಎಂದು ಹೇಳಲಾಗಿದೆ.
    ಅಷ್ಟೇ ಅಲ್ಲ ಫೆ.10ರ ನಂತರ ಈ ಜಿಹಾದ್​ ಪ್ರಾರಂಭವಾಗಲಿದೆ ಎಂದು ಕೂಡಲೇ ಘೋಷಣೆ ಮಾಡಿ ಎಂದು ಪ್ರಧಾನಿ ಇಮ್ರಾನ್​ ಖಾನ್​ಗೆ ಪಕ್ಷದ ಮುಖಂಡ ಮೌಲಾನಾ ಅಬ್ದುಲ್​ ಅಕ್ಬರ್​ ಚಿತ್ರಾಲಿ ಸಲಹೆ ನೀಡಿದ್ದಾರೆ.

    ನಾವು ಭಾರತದ ವಿರುದ್ಧ ಸಾರುವ ಧರ್ಮಯುದ್ಧದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮುದಾಯ ಮಧ್ಯಪ್ರವೇಶ ಮಾಡುತ್ತದೆ. ಇದರಿಂದಾಗಿ ಹಲವು ದಶಕಗಳ ಹಳೆಯದಾದ ಕಾಶ್ಮೀರಿ ಸಮಸ್ಯೆಯನ್ನೂ ನಾವು ಬಗೆ ಹರಿಸಿಕೊಳ್ಳಬಹುದು ಎಂದು ಮೌಲಾನಾ ಚಿತ್ರಾಲಿ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಅವರ ಮಾತಿಗೆ ಹಲವು ರಾಜಕೀಯ ಮುಖಂಡರು ಅಸ್ತು ಎಂದಿದ್ದಾರೆ ಎಂದು ಪಾಕ್ ಮಾಧ್ಯಮದಲ್ಲಿ ವರದಿಯಾಗಿದೆ.

    ಅಷ್ಟೇ ಅಲ್ಲ, ಕಾಶ್ಮೀರದ ಜನರನ್ನು ಸ್ವತಂತ್ರಗೊಳಿಸಲು, ಕಾಶ್ಮೀರ ವಿಭಜನೆ ಮಾಡಲು ಯುದ್ಧವೇ ಏಕೈಕ ಸೂಕ್ತ ಆಯ್ಕೆ ಎಂದು ಕೂಡ ಸಂಸತ್ತಿನಲ್ಲಿ ಅಭಿಪ್ರಾಯ ಮಂಡನೆಯಾಗಿದೆ.

    ಇದೇ ವೇಳೆ ಉಳಿದ ಮುಸ್ಲಿಂ ದೇಶಗಳ ವಿರುದ್ಧ ಪಾಕ್​ ನಾಯಕರು ಕಿಡಿಕಾರಿದ್ದಾರೆ. ಕಾಶ್ಮೀರದಲ್ಲಿರುವ ಮುಸ್ಲಿಮರ ಸುರಕ್ಷತೆಗೆ ಯಾರೂ ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ ಎನ್ನಲಾಗಿದೆ.

    ನಿನ್ನೆ ಪಾಕ್ ಸಂಸತ್ತಿನಲ್ಲಿ ಸುಮಾರು ಮೂರು ತಾಸು ಭಾರತದ ಬಗ್ಗೆಯೇ ಚರ್ಚೆಯಾಗಿದೆ. ಕೊನೆಯಲ್ಲಿ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ಅಲಿ ಮೊಹಮ್ಮದ್ ಖಾನ್ ಅವರು ಭಾವನಾತ್ಮಕರಾಗಿದ್ದಲ್ಲದೆ, ಇಂಡಿಯಾ ವಿರುದ್ಧ ದಾಳಿ ಮಾಡಲು ಯೋಜನೆ ರೂಪಿಸಿ, ಜಮ್ಮುಕಾಶ್ಮೀರವನ್ನು ವಶಕ್ಕೆ ಪಡೆದುಕೊಳ್ಳಿ ಎಂದು ಪ್ರಧಾನಿಯನ್ನು ಒತ್ತಾಯಿಸಿದ್ದಾರೆ. ಆದರೆ ಇಮ್ರಾನ್​ ಖಾನ ಮಾತ್ರ ಭಾರತದ ವಿರುದ್ಧದ ಜಿಹಾದ್​ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.(ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts