More

    ಜೇನುಕಲ್ ಸಿದ್ದೇಶ್ವರಸ್ವಾಮಿ ಅದ್ದೂರಿ ತಿಂಗಳ ಜಾತ್ರೆ

    ಅರಸೀಕೆರೆ ಗ್ರಾಮಾಂತರ: ಸಾವಿರಾರು ವರ್ಷಗಳ ಇತಿಹಾಸವುಳ್ಳ ಶ್ರೀಜೇನುಕಲ್ ಸಿದ್ದೇಶ್ವರಸ್ವಾಮಿಯ ತಿಂಗಳ ಹುಣ್ಣಿಮೆ ಜಾತ್ರೆ ಗುರುವಾರ ಅದ್ದೂರಿಯಾಗಿ ನೆರವೇರಿತು.


    ರಾಜ್ಯದ ಮೂಲೆ ಮೂಲೆಗಳಿಂದಲೂ ಭಕ್ತರು ಆಗಮಿಸಿ ಶ್ರೀಜೇನುಕಲ್ಲು ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ, ದೇವರ ದರ್ಶನ ಪಡೆದರು. ಅರಸೀಕೆರೆ ತಾಲೂಕು ಪಡಿತರ ವಿತರಕರ ಸಂಘದ ವತಿಯಿಂದ ತಿಂಗಳ ಹುಣ್ಣಿಮೆಯ ಪೂಜೆ, ಪ್ರಸಾದ ವ್ಯವಸ್ಥೆ ನೆರವೇರಿತು.


    ಅರಸೀಕೆರೆ ತಾಲೂಕು ಪಡಿತರ ವಿತರಕರ ಸಂಘದ ಅಧ್ಯಕ್ಷ ವೇದಮೂರ್ತಿ, ಕಾರ್ಯದರ್ಶಿ ರಾಮಸ್ವಾಮಿ, ಖಜಾಂಚಿ ಬಾಣಾವರ ಜಯಣ್ಣ, ಸಂಘದ ನಿರ್ದೇಶಕರಾದ ಚನ್ನಾಪುರ ಶಿವರಾಜ್, ಪ್ರೇಮಮ್ಮ, ಹಿರಿಯ ಪಡಿತರ ವಿತರಕರಾದ ಶಂಕ್ರಪ್ಪ, ಕೇಶವಮೂರ್ತಿ ಮತ್ತಿತರರು ಪಾಲ್ಗೊಂಡು ಭಕ್ತಿ ಮೆರೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts