More

    ಭಾರತೀಯ ಪರಂಪರೆಯ ಪುನರಾವರ್ತನೆ ಅಗತ್ಯ

    ಧಾರವಾಡ: ಆಧುನಿಕ ಯುಗದಲ್ಲಿ ಹೆಚ್ಚುತ್ತಿರುವ ವೃದ್ಧಾಶ್ರಮ ಶಮನಕ್ಕಾಗಿ ನಮ್ಮ ಹಿರಿಯರು ಹಾಕಿಕೊಟ್ಟ ಹಾದಿಯಲ್ಲಿ ನಡೆಯಬೇಕು. ಸಂಸ್ಕೃತಿ, ಪರಂಪರೆಯ ಪುನರಾವರ್ತನೆ ಆಗಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಹೇಳಿದರು.
    ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಜೀವಣ್ಣಗೌಡ- ಲೀಲಾತಾಯಿ ಪಾಟೀಲಕುಲಕರ್ಣಿ ದತ್ತಿ ಕಾರ್ಯಕ್ರಮದ ಅಂಗವಾಗಿ ಜೀವಣ್ಣಗೌಡರ 101ನೇ ಜಯಂತಿ ಪ್ರಯುಕ್ತ ಹೊರತಂದ ‘ಜೀವ- ಲೀಲಾ’ ಪುಸ್ತಕವನ್ನು ಭಾನುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
    ಜೀವಣ್ಣಗೌಡ- ಲೀಲಾತಾಯಿ ದಂಪತಿಯ ಪುಟ್ಟ ಚರಿತ್ರೆ ಈ ಪುಸ್ತಕವಾಗಿದೆ. ಅವರು ಬಾಳಿ ಬದುಕಿದ ಹಾಗೂ ಸ್ವಾತಂತ್ರ್ಯ ಹೋರಾಟದಲ್ಲಿಯ ಅವರ ನೆನಪುಗಳನ್ನು ಹಾಗೂ ಸಕ್ರಿಯ ಪಾತ್ರವನ್ನು ಇಂದಿನ ಪೀಳಿಗೆಗೆ ಮನದಟ್ಟು ಮಾಡಿಕೊಡಬೇಕು ಎಂದರು.
    ಶಿಕ್ಷಣ ಇಲಾಖೆಯ ನಿವತ್ತ ಜಂಟಿ ನಿರ್ದೇಶಕ ಶಿವಶಂಕರ ಹಿರೇಮಠ, ಲೇಖಕಿ ಸರೋಜಾ ರಾಮರಾವ ಕುಲಕರ್ಣಿ, ಹಿರಿಯ ನಟ ಡಾ. ಗೋವಿಂದ ಮಣ್ಣೂರ, ನಿವೃತ್ತ ಮುಖ್ಯಾಧ್ಯಾಪಕ ಕೆ.ಬಿ. ಪಾಟೀಲಕುಲಕರ್ಣಿ, ಮನೋಜ ಪಾಟೀಲ, ಬಸವಪ್ರಭು ಹೊಸಕೇರಿ, ಬಿ.ಎಲ್. ಪಾಟೀಲ. ಶ್ರೀಶೈಲ ಜತ್ತಿ, ಸಿ.ಎಸ್. ಪೊಲೀಸ್‌ಪಾಟೀಲ, ಎಂ.ಬಿ. ಕಟ್ಟಿ, ಚನಬಸಪ್ಪ ಮರದ, ನಿಂಗಣ್ಣ ಕುಂಟಿ, ಚನಬಸಪ್ಪ ಕರಗಣ್ಣವರ, ದುಷ್ಯಂತ ನಾಡಗೌಡ, ನರಸಿಂಹ ಪರಾಂಜಪೆ, ಡಾ. ಲಿಂಗರಾಜ ಅಂಗಡಿ, ಡಾ. ಮಂದಾಕಿನಿ ಪುರೋಹಿತ, ಡಾ. ಬಸವರಾಜ ನಾಗೂರ, ಸದಾಶಿವ ಚೌಶೆಟ್ಟಿ, ಈರಣ್ಣ ಇಜಗಣ್ಣವರ, ನಾಗೇಶ ಕಲಬುರ್ಗಿ, ಡಾ. ಬಾಳಪ್ಪ ಚಿನಗುಡಿ, ಇತರರಿದ್ದರು.
    ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಕನ್ನಡದ ಪರಿಪೂರ್ಣ ಕಾರ್ಯಕರ್ತ ಎಂಬ ಗೌರವದೊಂದಿಗೆ ರಾಮದುರ್ಗ ತಾಲೂಕು ಸಾಲಹಳ್ಳಿ ಸುರೇಶ ದೇಸಾಯಿ ಅವರನ್ನು ಸನ್ಮಾನಿಸಲಾಯಿತು.
    ಶಿವಾನಂದ ಭಾವಿಕಟ್ಟಿ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರು ಹಿರೇಮಠ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts