More

    ಬಿಹಾರ ಚುನಾವಣೆ: 115 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಜೆಡಿಯು

    ಪಟನಾ: ಬಿಹಾರ ವಿಧಾನಸಭಾ ಚುನಾವಣೆ ನಾಮಪತ್ರ ಸಲ್ಲಿಕೆಗೆ ಇನ್ನೆರಡು ದಿನ ಬಾಕಿ ಇದೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ಜಂಟಿಯಾಗಿ ಚುನಾವಣೆ ಎದುರಿಸಲಿದ್ದು  ನಿನ್ನೆಯಷ್ಟೇ ಬಿಜೆಪಿ ತನ್ನ ಪಾಲಿನ 121 ಸೀಟ್​ಗಳಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಇದೀಗ ಜೆಡಿಯು ಕೂಡ ತನ್ನ 115 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಆಗಸ್ಟ್​​ನಲ್ಲಿ ರಾಷ್ಟ್ರೀಯ ಜನತಾ ದಳ್​ (ಆರ್​ಜೆಡಿ)ದಿಂದ ಜೆಡಿಯುಗೆ ಸೇರಿದ್ದ ತೇಜ್​ ಪ್ರತಾಪ್​ ಯಾದವ್​ ಮಾವ ಚಂದ್ರಿಕಾ ರೈ ಅವರು ಪಾರ್ಸಾ ವಿಧಾನ ಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲಿದ್ದಾರೆ. ಇದನ್ನೂ ಓದಿ: ಈ ಊರಲ್ಲಿ ಒಕ್ಕಲಿಗರು ಬಿಟ್ಟು ಬೇರೆ ಸಮುದಾಯ ವಾಸಕ್ಕೆ ಬಂದ್ರೆ ಆಪತ್ತು ಖಚಿತ: ಇದು ನಿಗೂಢ ಗ್ರಾಮವಂತೆ..!?

    ಒಟ್ಟು 243 ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 121ರಲ್ಲಿ ಬಿಜೆಪಿ ಮತ್ತು 122ರಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸುತ್ತಾರೆ. ಜೆಡಿಯು ತನ್ನ ಪಾಲಿನೆ 122 ಸೀಟ್​ಗಳಲ್ಲಿ 7 ಕ್ಷೇತ್ರಗಳನ್ನು ಹಿಂದುಸ್ತಾನ್ ಅವಾಮಿ ಮೋರ್ಚಾಗೆ ಬಿಟ್ಟುಕೊಟ್ಟಿದ್ದು, ಆ ಪಕ್ಷ ಕೂಡ ಶೀಘ್ರದಲ್ಲೇ ಲಿಸ್ಟ್​ ಬಿಡುಗಡೆ ಮಾಡಲಿದೆ.
    ಈ ಬಾರಿಯೂ ಬಿಜೆಪಿ-ಜೆಡಿಯು ಮೈತ್ರಿ ಗೆದ್ದರೆ ಬಿಹಾರದಲ್ಲಿ ಮತ್ತೊಮ್ಮೆ ನಿತೀಶ್​ ಕುಮಾರ್ ಮತ್ತೊಮ್ಮೆ ಮುಖ್ಯಮಂತ್ರಿಯಾಗಲಿದ್ದಾರೆ. (ಏಜೆನ್ಸೀಸ್)

    ಬಿಹಾರ ಚುನಾವಣೆ: 121 ಸ್ಥಾನಗಳಲ್ಲೂ ಬಿಜೆಪಿ ಸ್ಪರ್ಧೆ- ಮತ್ತೆ ಪಾಲು ಇಲ್ವೇ ಇಲ್ವಂತೆ- ಇನ್ಸಾನ್​ ಪಾರ್ಟಿಗೆ ನಿರಾಸೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts