More

    ನುಡಿದಂತೆ ನಡೆಯದ ಸರ್ಕಾರ, ಹೆಜ್ಜೆಹೆಜ್ಜೆಗೂ ಎಡವಿ ಬೀಳುತ್ತಿದೆ: ಜೆಡಿಎಸ್​

    ಬೆಂಗಳೂರು: ರಾಜ್ಯ ಕಾಂಗ್ರೆಸ್​ ಸರ್ಕಾರದ ಮಹತ್ವಾಕಾಂಕ್ಷೆ ಗ್ಯಾರಂಟಿಗಳಲ್ಲಿ ಒಂದಾದ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ನೇರ ನಗದು ವರ್ಗಾವಣೆ (DBT)ಗೆ ಸರ್ವರ್​ ಸಮಸ್ಯೆಯಿಂದಾಗಿ ಕೊಕ್ಕೆ​ ಹಾಕಲಾಗಿದೆ.

    ಇನ್ನು ಈ ವಿಚಾರ ವಿಪಕ್ಷಗಳ ಕಣ್ಣು ಕೆಂಪಾಗಿಸಿದ್ದು, ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಜೆಡಿಎಸ್​ ನುಡಿದಂತೆ ನಡೆಯದ ಸರಕಾರ, ಹೆಜ್ಜೆಹೆಜ್ಜೆಗೂ ಎಡವಿ ಬೀಳುತ್ತಿದೆ ಎಂದು ಕಿಡಿಕಾರಿದೆ.

    ಅನ್ನಭಾಗ್ಯ ಯೋಜನೆ ಆರಂಭದಲ್ಲಿಯೇ ಹಳ್ಳ ಹಿಡಿಯುವ ಎಲ್ಲಾ ಸೂಚನೆಗಳು ಕಾಣುತ್ತಿವೆ. ಏಕೆಂದರೆ ಒಂದು ತಿಂಗಳು ನಡೆದ ಡಿಬಿಟಿ ಶಾಸ್ತ್ರ 2ನೇ ತಿಂಗಳಿಗೆ ಕೈಕೊಟ್ಟಿದೆ. ಮೂರನೇ ತಿಂಗಳ ಕಥೆ ಏನೋ ಗೊತ್ತಿಲ್ಲ. 29 ಲಕ್ಷ ಕುಟುಂಬಗಳು ಮೊಬೈಲ್ ಸಂದೇಶಕ್ಕಾಗಿ ಚಾತಕ ಪಕ್ಷಿಗಳಂತೆ ಕಾಯುತ್ತಿವೆ.

    ಸಮರ್ಪಕ ಪೂರ್ವಸಿದ್ಧತೆಯ ಕೊರತೆ, ತಾಂತ್ರಿಕ ಸಮಸ್ಯೆ ಸೇರಿ ಹಲವು ನೆಪಗಳನ್ನು ಸರಕಾರವೇ ಸೃಷ್ಟಿ ಮಾಡಿಕೊಂಡು ಅನ್ನಭಾಗ್ಯದ ಹಣ ನೀಡಲು ಮೀನಾಮೇಷ ಎಣಿಸುತ್ತಿದೆ. ನುಡಿದಂತೆ ನಡೆಯದ ಸರಕಾರ, ಹೆಜ್ಜೆಹೆಜ್ಜೆಗೂ ಎಡವಿ ಬೀಳುತ್ತಿದೆ ಎಂದು ಟೀಕಿಸಿದೆ.

    ಅನ್ನದ ವಿಷಯದಲ್ಲಿ ಸರಕಾರ ಕಾರಣ ಹೇಳುವಂತಿಲ್ಲ. ತಾಂತ್ರಿಕ ದೋಷಗಳಿದ್ದರೆ ಸಮರೋಪಾದಿಯಲ್ಲಿ ಸರಿ ಮಾಡಿಕೊಳ್ಳಬೇಕು. ತಡಮಾಡದೆ ಜನರಿಗೆ ಹಣ ನೀಡಬೇಕು. ದಿನಕ್ಕೊಂದು ನೆಪ ಹೇಳಿದರೆ ಅದು ಸರಕಾರಕ್ಕೂ ಲಾಯಕ್ಕಲ್ಲ. ಅನ್ನಭಾಗ್ಯವು ಹತಭಾಗ್ಯ ಆಗದಿರಲಿ ಎಂದು ರಾಜ್ಯ ಕಾಂಗ್ರೆಸ್​ ಸರ್ಕಾರದ ವಿರುದ್ಧ ಜೆಡಿಎಸ್​ ಸಾಮಾಜಿಕ ಜಾಲತಾನ ಎಕ್ಸ್​ನಲ್ಲಿ ವಾಗ್ದಾಳಿ ನಡೆಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts