More

    ಈ ಜೆಡಿಎಸ್ ಅಭ್ಯರ್ಥಿ ಬರೋಬ್ಬರಿ 206 ಕೋಟಿ ರೂ. ಆಸ್ತಿ ಒಡೆಯ!

    ಬೆಂಗಳೂರು: ಈ ಜೆಡಿಎಸ್ ಅಭ್ಯರ್ಥಿ ಬರೋಬ್ಬರಿ 206 ಕೋಟಿ ರೂ. ಆಸ್ತಿಯ ಒಡೆಯ! ಈ ವಿಚಾರ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

    ಈ ಜೆಡಿಎಸ್ ಅಭ್ಯರ್ಥಿ ಮತ್ಯಾರೂ ಅಲ್ಲ, ಯಶವಂತಪುರ ಕ್ಷೇತ್ರದ ಟಿ.ಎನ್.ಜವರಾಯಿಗೌಡ! ಜೆಡಿಎಸ್ ಪಕ್ಷದಿಂದ ಚುನಾವಣೆ ಎದುರಿಸಲಿರುವ ಜವರಾಯಿಗೌಡ ಚುನಾವಣಾ ಆಯೋಗಕ್ಕೆ ಸಲ್ಲಿಕೆ ಮಾಡಿರುವ ಆಸ್ತಿ ವಿವರದಲ್ಲಿ ಈ ಮಾಹಿತಿ ಲಭಿಸಿದ್ದು ಅವರ ಹೆಸರಲ್ಲಿ 15.56 ಕೋಟಿ ರು. ಮೌಲ್ಯದ ಚರಾಸ್ತಿ ಇದ್ದು 56.71 ಕೋಟಿ ರು ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.  

    ಇದನ್ನೂ ಓದಿ: ಅರಸಿಕೆರೆಯಿಂದ ಬಿಎಸ್​ವೈ ಸಂಬಂಧಿ ಸಂತೋಷ್​, ವರುಣಾದಿಂದ ಭಾರತಿ ಶಂಕರ್​ಗೆ ಜೆಡಿಎಸ್ ಟಿಕೆಟ್ ಘೋಷಣೆ

    ಅವರ ಪತ್ನಿ ಟಿ.ಎ.ಗಾಯತ್ರಿ ಹೆಸರಲ್ಲಿ 11,61 ಕೋಟಿ ರೂ. ಮೌಲ್ಯದ ಚರಾಸ್ತಿ, ಇದ್ದು 87.10 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ. ಸಂತೋಷ್ ಎಂಟರ್ ಪ್ರೆಸ್‌ಸ್ ಹೆಸರಲ್ಲಿ 14.33 ಕೋಟಿ ರೂ ಚರಾಸ್ತಿ ಹಾಗೂ 8.94 ಕೋಟಿ ರು. ಮೌಲ್ಯದ ಸ್ಥಿರಾಸ್ತಿ ಇದೆ.

    ಇದನ್ನೂ ಓದಿ: ಜೆಡಿಎಸ್ ಉತ್ತರಕನ್ನಡದಲ್ಲಿ ಬಲಿಷ್ಠ

    ಅವಿಭಜಿತ ಕುಟುಂಬದ ಆಸ್ತಿಯಲ್ಲಿ 6.26 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 5.33 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಜವರಾಯಿಗೌಡ 18.54 ಕೋಟಿ ರೂ. ಸಾಲ ಹೊಂದಿದ್ದು, ಅವರ ಪತ್ನಿ 31.81 ಕೋಟಿ ರೂ. ಸಾಲ ಹೊಂದಿದ್ದಾರೆ. ಅವರು ಇನ್ನೂ 2.96 ಕೋಟಿ ರೂ. ಸರ್ಕಾರಕ್ಕೆ ತೆರಿಗೆ ಪಾವತಿಸುವುದನ್ನು ಬಾಕಿ ಉಳಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts