More

    ಜವರಾಯಿಗೌಡ ಆಸ್ತಿ 206 ಅಲ್ಲ, 350 ಕೋಟಿ ರೂ.; 150 ಕೋಟಿ ರೂ. ಆಸ್ತಿ, ಕ್ರಿಮಿನಲ್ ಕೇಸ್ ವಿವರ ಮುಚ್ಚಿಟ್ಟ ಆರೋಪ

    ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಟಿ.ಜೆ. ಜವರಾಯಿಗೌಡಗೆ ಸಂಕಷ್ಟ ಎದುರಾಗಿದೆ. ನಾಮಪತ್ರ ಸಲ್ಲಿಸುವಾಗ ಲಗತ್ತಿರುವ ಆಸ್ತಿ ವಿವರದಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಮತ್ತು ಕ್ರಿಮಿನಲ್ ಪ್ರಕರಣಗಳ ವಿವರ ಮುಚ್ಚಿಟ್ಟಿರುವ ಆರೋಪ ಕೇಳಿಬಂದಿದೆ.

    ಈ ಕುರಿತು ಯಶವಂತಪುರ ಬಿಜೆಪಿ ಅಭ್ಯರ್ಥಿ ಪರ ವಕೀಲ ಎಂ. ಕೃಷ್ಣದಾಸ್, ಚುನಾವಣಾಧಿಕಾರಿಗೆ ಶುಕ್ರವಾರ ದೂರು ಸಲ್ಲಿಸಿದ್ದಾರೆ. 2018ರ ಸಾರ್ವತ್ರಿಕ ಚುನಾವಣೆ ಸಮಯದಲ್ಲಿ ಸಲ್ಲಿಸಿರುವ ಆಸ್ತಿ ಘೋಷಣಾ ಪ್ರಮಾಣಪತ್ರದಲ್ಲಿ ಜವರಾಯಿಗೌಡ, ತನ್ನ ಮಾಲೀಕತ್ವದ ನಿಜಗುಣ ಲ್ಯಾಂಡ್ ಡೆವಲಪರ್ ಆ್ಯಂಡ್ ಬಿಲ್ಡರ್ಸ್​ ಕಂಪನಿ ಹೆಸರಿನಲ್ಲಿ ಯಶವಂತಪುರ ಹೋಬಳಿ ಸಜ್ಜೇಪಾಳ್ಯ ಸರ್ವೇ ನಂಬರ್ 15ರಲ್ಲಿ 17 ಎಕರೆ 20 ಗುಂಟೆ ಕೃಷಿಯೇತರ ಭೂಮಿಯನ್ನು ಉಲ್ಲೇಖಿಸಿದ್ದರು.

    ಇದನ್ನೂ ಓದಿ: ಭೀಕರ ಅಪಘಾತ: ಅಪ್ಪ-ಅಮ್ಮ ಸ್ಥಳದಲ್ಲೇ ಸಾವು, ಮಕ್ಕಳಿಬ್ಬರ ಪರಿಸ್ಥಿತಿ ಗಂಭೀರ

    2005ರ ಆಗಸ್ಟ್ 31ರಂದು 2,01,38,401 ರೂ.ಗೆ ಅದನ್ನು ಖರೀದಿ ಮಾಡಿದ್ದಾಗಿ ಹೇಳಿದ್ದರು. ಅಂದಿನ ಮಾರುಕಟ್ಟೆ ಮೌಲ್ಯ 65.62 ಕೋಟಿ ರೂ. ಆಗಿತ್ತು. ಆದರೆ, 2023ರ ಚುನಾವಣೆ ಪ್ರಮಾಣಪತ್ರದಲ್ಲಿ ಈ ಆಸ್ತಿಯನ್ನು ಉಲ್ಲೇಖ ಮಾಡಿಲ್ಲ. ಇಂದಿನ ಮಾರುಕಟ್ಟೆ ಮೌಲ್ಯ ಅಂದಾಜು 150 ಕೋಟಿ ರೂ. ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ: ‘ಈ ಸಲ ಯಾರಿಗೆ ಮತ ಹಾಕಲಿ?’ ಎಂದು ಕೇಳಿದರೆ ಇದು ಏನನ್ನುತ್ತೆ?: ಕೃತಕ ಬುದ್ಧಿಮತ್ತೆಯ ಬುದ್ಧಿಮಾತು!

    ಇದಲ್ಲದೆ, ಸಿಟಿ ಸಿವಿಲ್ ಕೋರ್ಟ್‌ನಲ್ಲಿ ನಡೆಯುತ್ತಿರುವ ಕ್ರಿಮಿನಲ್ ಕೇಸ್ 294/2021ರ ಮತ್ತು 343/2023 ಪ್ರಸ್ತುತ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಮಾಹಿತಿಯನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಿಲ್ಲ. ಆಸ್ತಿ ವಿವರ ಮತ್ತು ಕ್ರಿಮಿನಲ್ ಕೇಸ್ ಮುಚ್ಚಿಡುವ ಮೂಲಕ ಚುನಾವಣಾ ಕಾಯ್ದೆಯನ್ನು ಉಲ್ಲೇಖಿಸಿದ್ದಾರೆ ಎಂದು ದೂರಿನಲ್ಲಿ ವಕೀಲ ಕೃಷ್ಣದಾಸ್ ಆರೋಪಿಸಿದ್ದಾರೆ. ಇದರ ಮೇರೆಗೆ ಜೆಡಿಎಸ್ ಅಭ್ಯರ್ಥಿ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಒತ್ತಾಯ ಮಾಡಿದ್ದಾರೆ.

    ಗೂಂಡಾ ಕಾಯ್ದೆಯಡಿ ಬಂಧಿತ ಆಪ್ತನ ಮನೆಗೆ ಮಾಜಿ ಸಿಎಂ ಜಗದೀಶ ಶೆಟ್ಟರ್ ಭೇಟಿ!

    ದ್ವಿತೀಯ ಪಿಯುಸಿ ದಾಖಲೆಯ ಫಲಿತಾಂಶ; ದಾಖಲೆಗೆ ಕಾರಣವೇನು? ಈ ಸಲದ ರಿಸಲ್ಟ್​ ವಿಶೇಷಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts