More

    ಮಂಡ್ಯದ ಸಮಗ್ರ ಅಭಿವೃದ್ಧಿಗೆ ಪಣ: ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಮನವಿ

    ಮಂಡ್ಯ: ಮಂಡ್ಯದ ಸಮಗ್ರ ಅಭಿವೃದ್ಧಿಗೆ ಪಣ ತೊಟ್ಟಿದ್ದೇನೆ. ಅದನ್ನು ಸಾಕಾರಗೊಳಿಸಿ ಮತದಾರರು ಚುನಾವಣೆಯಲ್ಲಿ ನನ್ನನ್ನು ಬೆಂಬಲಿಸಿ ಎಂದು ಜೆಡಿಎಸ್ ಅಭ್ಯರ್ಥಿ ಬಿ.ಆರ್.ರಾಮಚಂದ್ರು ಮನವಿ ಮಾಡಿದರು.
    ನಗರದ ತಾವರೆಗೆರೆ, ಹಾಲಹಳ್ಳಿ, ಸ್ಲಂ ಬೋರ್ಡ್, ಬೋವಿ ಕಾಲನಿ ವ್ಯಾಪ್ತಿಯಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ, ಜಿಲ್ಲಾಕೇಂದ್ರ ಸ್ಥಾನವನ್ನು ಹೊಂದಿರುವ ಮಂಡ್ಯ ವಿಧಾನಸಭಾ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ರೂಪಿಸುವ ಕನಸು ಹೊತ್ತಿದ್ದೇನೆ. ಆರೋಗ್ಯ ಸೇವೆ ಗುಣಮಟ್ಟ ಸುಧಾರಣೆ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಸಮಸ್ಯೆ ಹಾಗೂ ಚಿಕ್ಕಮಂಡ್ಯ ಕೆರೆಯಂಗಳದ ಬೀಡಿ ಕಾರ್ಮಿಕರ ಕಾಲನಿ ಸಮಸ್ಯೆ ನಿವಾರಣೆ ನನ್ನ ಮೊದಲ ಆದ್ಯತೆ ಎಂದು ಹೇಳಿದರು.
    ಕ್ಷೇತ್ರದಲ್ಲಿ ಈಗಲೂ ಎಷ್ಟೋ ಕುಟುಂಬಗಳಿಗೆ ಸ್ವಂತ ಮನೆ ಇಲ್ಲ. ದಶಕಗಳಿಂದ ವಾಸಿಸುತ್ತಿರುವ ಸ್ಥಳಗಳಿಗೆ ಸಂಬಂಧಿಸಿದ ಹಕ್ಕುಪತ್ರಗಳಿಲ್ಲ. ಅಂತಹ ಜನರಿಗೆ ಹಕ್ಕಪತ್ರ ಕೊಡಿಸಲು ಅವರ ನೆಲದಲ್ಲಿ ಭದ್ರಗೊಳಿಸಲು ಉದ್ದೇಶಿಸಿದ್ದೇನೆ. ಮಂಡ್ಯ ನಗರದ ಸುತ್ತ ರಿಂಗ್ ರಸ್ತೆ ನಿರ್ಮಿಸಿ, ನಗರವನ್ನು ಹಸಿರು ನಗರವಾಗಿ ವ್ಯವಸ್ಥಿತವಾಗಿ ರೂಪಿಸುವುದು ನನ್ನ ಗುರಿಯಾಗಿದೆ ಎಂದರು.
    ಪ್ರತ್ಯೇಕ ಬೈಕ್ ರ‌್ಯಾಲಿ: ನಗರದಲ್ಲಿ ಎರಡು ಕಡೆ ಪ್ರತ್ಯೇಕವಾಗಿ ಬೈಕ್ ರ‌್ಯಾಲಿ ಮೂಲಕ ಮತಯಾಚನೆ ಮಾಡಲಾಯಿತು. ನಗರದ ಕಾಳಿಕಾಂಬ ದೇವಾಲಯ ಆವರಣದಲ್ಲಿ ಅಭ್ಯರ್ಥಿ ಬಿ.ಆರ್.ರಾಮಚಂದ್ರು, ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ರ‌್ಯಾಲಿಗೆ ಚಾಲನೆ ನೀಡಿದರು. ಅಲ್ಲಿಂದ ಹೊರಟ ರ‌್ಯಾಲಿ ಕೆರೆಯಂಗಳ ಬೀಡಿಕಾರ್ಮಿಕರ ಕಾಲನಿ, ಶಂಕರಮಠ, ಕಲ್ಲಹಳ್ಳಿ, ವಿ.ವಿ.ನಗರ, ಮರೀಗೌಡ ಬಡಾವಣೆ, ಚಾಮುಂಡೇಶ್ವರನಗರ, ನೂರಡಿ ರಸ್ತೆ, ತಾವರೆಗೆರೆ, ಹಾಲಹಳ್ಳಿಯಲ್ಲಿ ರ‌್ಯಾಲಿ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts