More

    ಜೆಸಿಐ ಸೇವಾಕಾರ್ಯ ಶ್ಲಾಘನೀಯ

    ರಾಮದುರ್ಗ: ಸಮಾಜ ಸೇವೆಯ ಜತೆಗೆ ರಾಷ್ಟ್ರದ ಪ್ರಗತಿಗೆ ಪೂರಕವಾಗಬಲ್ಲ ಯುವ ಶಕ್ತಿಯ ವ್ಯಕ್ತಿತ್ವ ವಿಕಸನ ಮಾಡುವ ನಿಟ್ಟಿನಲ್ಲಿ ರಾಮದುರ್ಗ ಜೆಸಿಐ ಸಂಸ್ಥೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಬೆಳಗಾವಿ ಜಿಲ್ಲಾ ಅಂಚೆ ಅಧೀಕ್ಷಕ ವಿಜಯ ವಾದೋನಿ ಹರ್ಷ ವ್ಯಕ್ತಪಡಿಸಿದರು.

    ಪಟ್ಟಣದ ಮರಾಠ ಕಲ್ಯಾಣ ಮಂಟಪದಲ್ಲಿ ಶನಿವಾರ ಏರ್ಪಡಿಸಿದ್ದ ಜೆಸಿಐ ತಾಲೂಕು ಘಟಕದ 2024ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಜೆಸಿಐ ರಾಷ್ಟ್ರೀಯ ಸಂಯೋಜಕಿ ಸವಿತಾ ರಮೇಶ ಮಾತನಾಡಿದರು. ಜೆಸಿಐ ಸಂಸ್ಥೆಯ ನೂತನ ಅಧ್ಯಕ್ಷರಾಗಿ ತುಕಾರಾಮ ಪಮ್ಮಾರ ಅಧಿಕಾರ ಸ್ವೀಕರಿಸಿದರು. ವಲಯ 24ರ ವಲಯಾಧ್ಯಕ್ಷ ಚನ್ನವಿರೇಶ ಎಚ್., ಉಪಾಧ್ಯಕ್ಷ ರವಿಕುಮಾರ ಡಿ.ಪ್ರಮಾಣವಚನ ಬೋಧಿಸಿದರು. ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲಣ್ಣ ಯಾದವಾಡ, ಅಶೋಕ ಕುಲಗೋಡ, ರವೀಂದ್ರ ಹರವಿ, ಮಹಾಂತೇಶ ಹೊಳಿಮಠ, ಸುರೇಶ ಹುಚ್ಚನ್ನವರ, ಮುರುಳಿ ಸುಳೆಬಾವಿ, ಶಿವು ಗೊರವನಕೊಳ್ಳ, ನರಸಿಂಹ ಮಾನಶೆಟ್ಟಿ, ವಿನೋದಗೌಡ ಪಾಟೀಲ, ಮದುಸೂಧನ ಮಾಳದಕರ, ಮಹಾಂತೇಶ ಹೊಸಮನಿ ಇತರರಿದ್ದರು. ಅಮೂಲ ಮುರುಡಿ ಸ್ವಾಗತಿಸಿದರು. ಕಾರ್ಯದರ್ಶಿ ವಸಂತ ವಾಲಿಕಾರ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts