More

    ಮಾ.5ರಂದು ನಗರದಲ್ಲಿ ಜಯರಾಮೋತ್ಸವ: ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಅಶೋಕ್ ಜಯರಾಂ ಮಾಹಿತಿ

    ಮಂಡ್ಯ: ದಿ.ಎಸ್.ಡಿ.ಜಯರಾಂ ಅವರ 25ನೇ ವರ್ಷದ ಸಂಸ್ಮರಣೆ ಅಂಗವಾಗಿ ಮಾ.5ರಂದು ನಗರದ ಮಂಡ್ಯ ವಿಶ್ವವಿದ್ಯಾಲಯದ ಆವರಣದಲ್ಲಿ ಎಸ್.ಡಿ.ಜಯರಾಂ-25 ಸಂಸ್ಮರಣ ಕಾರ್ಯಕ್ರಮ ‘ಜಯರಾಮೋತ್ಸವ’ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್.ಡಿ.ಜಯರಾಂ ಸಮಗ್ರ ಗ್ರಾಮೀಣಾಭಿವೃದ್ದಿ ಸಂಸ್ಥೆ ಅಧ್ಯಕ್ಷ ಅಶೋಕ್ ಜಯರಾಂ ತಿಳಿಸಿದರು.
    ಎಸ್.ಡಿ.ಜಯರಾಂ ಅಭಿಮಾನಿಗಳ ಬಳಗ, ಎಸ್.ಡಿ.ಜಯರಾಂ ಗ್ರಾಮೀಣಾಭಿವೃದ್ದಿ ಸಂಸ್ಥೆ ಹಾಗೂ ಎಸ್.ಡಿ.ಜಯರಾಂ ಯುವಜನ ಸಮುದಾಯ ಅಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ ಸಮಾರಂಭ ಆಯೋಜಿಸಲಾಗಿದೆ. ಜನ ಸಮುದಾಯದ ಅಭಿವೃದ್ದಿಯಲ್ಲಿ ತೊಡಗಿಸಿಕೊಂಡಿರುವ ಯುವಜನರನ್ನು ಗುರುತಿಸಿ ಎಸ್.ಡಿ.ಜಯರಾಂ ಯುವ ಪ್ರಶಸ್ತಿ, ಸಮುದಾಯ ಸೇವಾ ಪ್ರಶಸ್ತಿ ಹಾಗೂ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
    ಮಧ್ಯಾಹ್ನ 1 ಗಂಟೆಗೆ ನಗರದ ಹೊಸಹಳ್ಳಿ ಎಸ್.ಡಿ.ಜಯರಾಂ ಆಟೋ ನಿಲ್ದಾಣದಿಂದ ಬೆಳ್ಳಿ ರಥದಲ್ಲಿ ಜಯರಾಂ ಅವರ ಭಾವಚಿತ್ರ ಸೇರಿದಂತೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಭಾವಚಿತ್ರದ ಮೆರವಣಿಗೆಯನ್ನು ವೇದಿಕೆವರೆಗೆ ನಡೆಸಲಾಗುವುದು. ಮಧ್ಯಾಹ್ನ 3ಕ್ಕೆ ಕಲಾವಿದರಿಂದ ಜಾನಪದ ಝೇಂಕಾರ ಹಾಗೂ ರಂಗಭೂಮಿ ಕಲಾವಿದರಿಂದ ರಂಗಸಂಭ್ರಮ ನಡೆಯಲಿದೆ. ನಂತರ ಸಂಗೀತ ನಿರ್ದೇಶಕ ವಿಜಯ ಪ್ರಕಾಶ್, ಅರ್ಜುನ್ ಜನ್ಯ ತಂಡದಿಂದ ವಿಜಯಾರ್ಜುನ ಗಾನ ವೈಭವ ಸಂಗೀತ, ಗಾಯನ, ನೃತ್ಯ ಕಿರುನಾಟಕ ನಡೆಯಲಿದೆ. ಆದ್ದರಿಂದ ಸಾರ್ವಜನಿಕರು ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
    ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕಾರಸವಾಡಿ ಮಹದೇವು, ನಾಗೇಂದ್ರ, ಧರ್ಮ, ಬೇಲೂರು ಸೋಮಶೇಖರ್, ಸುಜಾತಾಕೃಷ್ಣ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts