More

    ಸುವರ್ಣರ ಆದರ್ಶ ಸಮಾಜದ ಪ್ರಗತಿಪಥ, ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿಕೆ

    ಮೂಲ್ಕಿ: ಸಮಾಜದ ಅನರ್ಘ್ಯ ರತ್ನ ಜಯ ಸಿ.ಸುವರ್ಣರ ಆದರ್ಶ ನಮಗೆ ದಾರಿದೀಪ. ಅವರು ಬಿಟ್ಟು ಹೋದ ಘನ ಕಾರ್ಯಗಳನ್ನು ಮುಂದುವರಿಸುವ ಮೂಲಕ ಸಂಘಟಿತರಾಗಿ ಅಭಿವೃದ್ಧಿ ಕಡೆಗೆ ಗಮನ ಹರಿಸೋಣ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
    ಹೆಜಮಾಡಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಗುರುವಾರ ಬಿಲ್ಲವ ಮುಖಂಡ ಜಯ ಸಿ.ಸುವರ್ಣ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು.

    ಶಾಸಕ ಉಮಾನಾಥ ಕೋಟ್ಯಾನ್, ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ರಮಾನಾಥ ರೈ, ಕೆ.ಅಭಯಚಂದ್ರ ಜೈನ್, ಯು.ಟಿ.ಖಾದರ್, ಪ್ರಮೋದ್ ಮಧ್ವರಾಜ್ ಮತ್ತು ಕೃಷ್ಣ ಜೆ.ಪಾಲೆಮಾರ್, ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ಪುತ್ರ ಮಧು ಬಂಗಾರಪ್ಪ, ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ ಮತ್ತು ಕೆ.ಹರೀಶ್ ಕುಮಾರ್, ಮಾಜಿ ಶಾಸಕ ಡಾ.ಬಿ.ಎ. ಮೊದೀನ್ ಬಾವ, ಸಾಯಿರಾಧಾ ಗ್ರೂಪ್‌ನ ಮನೋಹರ ಶೆಟ್ಟಿ, ಕುದ್ರೊಳಿ ಕ್ಷೇತ್ರದ ಪದ್ಮರಾಜ್, ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಭಾರತ್ ಬ್ಯಾಂಕ್ ಮಾಜಿ ಅಧ್ಯಕ್ಷ ವಾಸುದೇವ ಕೋಟ್ಯಾನ್, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮುಂಬೈ ಬಂಟರ ಸಂಘ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಕರ್ನಿರೆ ವಿಶ್ವನಾಥ ಶೆಟ್ಟಿ, ಡಾ.ಎಂ.ಅಚ್ಯುತ ಕುಡ್ವ ನುಡಿನಮನ ಸಲ್ಲಿಸಿದರು.

    ಜಯ ಸಿ.ಸುವರ್ಣರ ಪತ್ನಿ ಲೀಲಾವತಿ ಜಯ ಸುವರ್ಣ, ಮಕ್ಕಳಾದ ಸೂರ್ಯ ಜೆ.ಸುವರ್ಣ, ಸುಭಾಸ್ ಜೆ.ಸುವರ್ಣ, ದಿನೇಶ್ ಜೆ.ಸುವರ್ಣ ಮತ್ತು ಯೋಗೀಶ್ ಜೆ.ಸುವರ್ಣ, ಬೆಂಗಳೂರು ಬಿಲ್ಲವರ ಸಂಘದ ವೇದಕುಮಾರ್, ಕಟಪಾಡಿ ಹರಿಶ್ಚಂದ್ರ ಅಮೀನ್, ಜಗದೀಶ್ ಅಧಿಕಾರಿ, ಮಹಾಮಂಡಲದ ಮಾಜಿ ಉಪಾಧ್ಯಕ್ಷ ಗಂಗಾಧರ ಪೂಜಾರಿ, ಬನ್ನಂಜೆ ಬಾಬು ಅಮೀನ್, ಎಸ್.ಕೆ.ಸಾಲ್ಯಾನ್, ಬಿಲ್ಲವರ ಅಸೋಸಿಯೇಶನ್‌ನ ಚಂದ್ರಶೇಖರ ಪೂಜಾರಿ, ರವಿ ಶೆಟ್ಟಿ ಸಾಯಿರಾಧಾ, ಪ್ರವೀಣ್ ಭಟ್ ಮುಂಬೈ, ಜಿಪಂ ಸದಸ್ಯರಾದ ಗೀತಾಂಜಲಿ ಸುವರ್ಣ ಮತ್ತು ಶಶಿಕಾಂತ್ ಪಡುಬಿದ್ರಿ ಮತ್ತಿತರರು ಉಪಸ್ಥಿತರಿದ್ದರು.
    ಹರೀಶ್ ಹೆಜಮಾಡಿ ಕಾರ್ಯಕ್ರಮ ನಿರ್ವಹಿಸಿದರು. ಡಾ.ಗಣೇಶ್ ಅಮೀನ್ ಸಂಕಮಾರ್ ಪ್ರಸ್ತಾವಿಸಿದರು. ಭಾಸ್ಕರ ಎಂ.ಸಾಲ್ಯಾನ್ ವಂದಿಸಿದರು. ಒಂದು ನಿಮಿಷ ಮೌನ ಪ್ರಾರ್ಥನೆ ಬಳಿಕ ಜಯ ಸುವರ್ಣರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

    ಸತ್ಯ, ಧರ್ಮ ಪರಿಪಾಲಕ: ಸಮಾನತೆ, ಸತ್ಯ, ನ್ಯಾಯ, ಧರ್ಮಗಳ ಪರಿಪಾಲಕ ಜಯ ಸುವರ್ಣರ ಅಗಲಿಕೆ ತುಂಬಲಾರದ ನಷ್ಟ ಎಂದು ಡಾ.ಎಂ.ಮೋಹನ ಆಳ್ವ ಹೇಳಿದರು. ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ಅಸಂಘಟಿತರನ್ನು ಒಗ್ಗೂಡಿಸಿ ಅವರ ಅಭಿವೃದ್ಧಿಗೆ ಶ್ರಮಿಸಿದವರು ಜಯ ಸುವರ್ಣರು. ಅವರು ಬದುಕಿದ್ದು ಸಮಾಜಕ್ಕೋಸ್ಕರ. ಅವರ ಕನಸುಗಳನ್ನು ನನಸು ಮಾಡುವ ಅವರಿಗೆ ಮೂಲಕ ಗೌರವ ಸಲ್ಲಿಸೋಣ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts