More

    ಐಸಿಸಿ ಚೇರ್ಮನ್‌ ಹುದ್ದೆ ಮೇಲೆ ಜಯ್‌ ಶಾ ಕಣ್ಣು !

    ನವದೆಹಲಿ: ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಈ ವರ್ಷದ ನವೆಂಬರ್‌ನಲ್ಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

    ಇದನ್ನೂ ಓದಿ:ಹಾಸ್ಟೆಲ್ ಮೇಲೆ ದಾಳಿ ನಡೆಸಿದವರಿಗೆ ಕಠಿಣ ಕಾನೂನು ಕ್ರಮಕ್ಕೆ ಒತ್ತಾಯ: ಶೋಷಿತ ಸಮುದಾಯಗಳ ಮಹಾಒಕ್ಕೂಟದಿಂದ ಎಸ್ಪಿಗೆ ಮನವಿ

    ಪ್ರಸ್ತುತ ನ್ಯೂಜಿಲೆಂಡ್‌ನ ಗ್ರೆಗ್ ಬಾರ್ಕ್ಲೇ ಐಸಿಸಿ ಅಧ್ಯಕ್ಷರಾಗಿದ್ದು, 2020ರ ನವೆಂಬರ್‌ನಿಂದ ಈ ಅಧಿಕಾರದಲ್ಲಿದ್ದಾರೆ. ಜಯ್ ಶಾ ಆಯ್ಕೆಯಾದರೆ, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ನಂತರ ಅವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗುವ ಮೂರನೇ ಭಾರತೀಯ ಎನಿಸಿಕೊಳ್ಳಲಿದ್ದಾರೆ.

    ಇತ್ತೀಚೆಗೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ), ಕಾರ್ಯದರ್ಶಿ ಜಯ್ ಶಾ ಅವರನ್ನು ಸಿಐಐ ಸ್ಪೋರ್ಟ್ಸ್ ಬ್ಯುಸಿನೆಸ್ ಅವಾರ್ಡ್ಸ್ 2023 ರಲ್ಲಿ ವರ್ಷದ ಪ್ರತಿಷ್ಠಿತ ಕ್ರೀಡಾ ಉದ್ಯಮ ನಾಯಕ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

    ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಯ ವಾರ್ಷಿಕ ಸಾಮಾನ್ಯ ಸಭೆಗಳು (ಎಜಿಎಂ) ಮುಂದಿನ ಎರಡು ದಿನಗಳಲ್ಲಿ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿವೆ. ಈ ಎರಡು ದಿನಗಳ ಕೂಟದಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಬಹುದು. ಜಯ್​ ಶಾ ಸೇರಿದಂತೆ ಕಾಂಟಿನೆಂಟಲ್ ಅಸೋಸಿಯೇಷನ್‌ನ ಎಲ್ಲಾ ಸದಸ್ಯರ ಭಾಗವಹಿಸುವಿಕೆಯೊಂದಿಗೆ AGM ಅನ್ನು ಜನವರಿ 31 ರ ಬುಧವಾರಕ್ಕೆ ನಿರ್ದಿಷ್ಟವಾಗಿ ನಿಗದಿಪಡಿಸಲಾಗಿದೆ.

    ಸಿಐಐ ರಾಷ್ಟ್ರೀಯ ಕ್ರೀಡಾ ಸಮಿತಿಯ ಅಧ್ಯಕ್ಷ ಚಾಣಕ್ಯ ಚೌಧರಿ ಅವರು ಪ್ರಶಸ್ತಿ ಪ್ರದಾನ ಮಾಡಿದರು, ಭಾರತೀಯ ಕ್ರಿಕೆಟ್ ಅನ್ನು ಅಭೂತಪೂರ್ವ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಶಾ ಅವರ ಪ್ರಮುಖ ಪಾತ್ರವನ್ನು ಒತ್ತಿಹೇಳಿದರು. ಜಯ್‌ ಶಾ ಅವರ ಸಾರಥ್ಯದಲ್ಲಿ, ಇತ್ತೀಚೆಗೆ ಮುಕ್ತಾಯಗೊಂಡ ಐಸಿಸಿ ಪುರುಷರ ವಿಶ್ವಕಪ್ ಟೂರ್ನಿ ದೊಡ್ಡ ಮಟ್ಟದ ಯಶಸ್ಸು ಕಂಡಿತ್ತು. ಗರಿಷ್ಠ ಮಂದಿ ವೀಕ್ಷಿಸಿದ ಐಸಿಸಿ ವಿಶ್ವಕಪ್‌ ಟೂರ್ನಿ ಎನ್ನುವ ಹೆಗ್ಗಳಿಕೆ ಇದರದಾಗಿದೆ.

    ಇನ್ನು ಜಯ್‌ ಶಾ ಅವರ ನೇತೃತ್ವದಲ್ಲಿಯೇ ಭಾರತದ ಪುರುಷ ಹಾಗೂ ಮಹಿಳಾ ತಂಡಡದ ಆಟಗಾರರಿಗೆ ಸಮಾನ ವೇತನ ಪದ್ಧತಿ ಜಾರಿಯಾಗಿದೆ. ಈ ನಿಟ್ಟಿನಲ್ಲಿ ಇದ್ದ ಎಲ್ಲಾ ಅಡೆತಡೆಗಳನ್ನು ಅವರು ನಿವಾರಿಸಿದ್ದಾರೆ. ಭಾರತದಲ್ಲಿ ಪುರುಷ ಹಾಗೂ ಮಹಿಳಾ ಕ್ರಿಕೆಟಿಗರು ಸಮಾನವಾದ ವೇತನ ಪಡೆದುಕೊಳ್ಳಲಿದ್ದಾರೆ ಎಂದು ಜಯ್‌ ಷಾ ಘೋಷಣೆ ಮಾಡುವ ಮೂಲಕ, ಭಾರತೀಯ ಕ್ರೀಡಾಕ್ಷೇತ್ರದಲ್ಲಿ ಹೊಸ ಬದಲಾವಣೆಗೆ ಕಾರಣರಾಗಿದ್ದರು.

    ಲೋಕಸಭೆ ಚುನಾವಣೆ: 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಾರ್ಟಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts