More

  ಲೋಕಸಭೆ ಚುನಾವಣೆ: 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಾರ್ಟಿ!

  ಉತ್ತರಪ್ರದೇಶ: ಮುಂಬರುವ ಲೋಕಸಭೆ ಚುನಾವಣೆಗೆ 16 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸಮಾಜವಾದಿ ಪಕ್ಷ (ಎಸ್‌ಪಿ) ಮಂಗಳವಾರ ಪ್ರಕಟಿಸಿದೆ.
  ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರ ಪತ್ನಿ ಮತ್ತು ಸಂಸದೆ ಡಿಂಪಲ್ ಯಾದವ್ ಮತ್ತೆ ಮೈನ್‌ಪುರಿ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ.

  ಇದನ್ನೂ ಓದಿ:ನಾಯಿ, ಇಲಿಗಳಿಗೆ ಸಂಗೀತ ಸಂಯೋಜನೆ; ಈತನ ಆದಾಯ ಕೇಳಿದ್ರೆ ಶಾಕ್​ ಆಗ್ತೀರ!

  ಮೈನ್‌ಪುರಿ ಯಾದವ್ ಕುಟುಂಬದ ಭದ್ರಕೋಟೆಯಾಗಿದ್ದು, ಈ ಕ್ಷೇತ್ರವನ್ನು ಉತ್ತರ ಪ್ರದೇಶದ ಮಾಜಿ ಸಿಎಂ ಮತ್ತು ಡಿಂಪಲ್ ಅವರ ಮಾವ ಮುಲಾಯಂ ಸಿಂಗ್ ಯಾದವ್ ಅವರು ಈ ಹಿಂದೆ ಪ್ರತಿನಿಧಿಸಿದ್ದರು.

  ಲೋಕಸಭೆ ಚುನಾವಣೆ: 16 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಸಮಾಜವಾದಿ ಪಾರ್ಟಿ!

  ಯುಪಿಯ ಕ್ಯಾಬಿನೆಟ್‌ನ ಮಾಜಿ ಸಚಿವ ರವಿದಾಸ್ ಮೆಹ್ರೋತ್ರಾ ಅವರು ರಾಜ್ಯದ ರಾಜಧಾನಿ ಲಕ್ನೋದಿಂದ ಸ್ಪರ್ಧಿಸಲಿದ್ದಾರೆ. ಅಂಬೇಡ್ಕರ್ ನಗರದಿಂದ ಲಾಲ್ಜಿ ವರ್ಮಾ ಅವರನ್ನು ಕಣಕ್ಕಿಳಿಸಿದೆ. 93 ವರ್ಷದ ಶಫೀಕರ್ ರಹಮಾನ್ ಬಾರ್ಕ್ ಅವರು ಪ್ರಸ್ತುತ ಲೋಕಸಭೆಯಲ್ಲಿ ಪ್ರತಿನಿಧಿಸುತ್ತಿರುವ ಕ್ಷೇತ್ರ ಸಂಭಾಲ್‌ನಿಂದ ಕಣಕ್ಕಿಳಿದಿದ್ದಾರೆ.

  ಅಭ್ಯರ್ಥಿಗಳ ಪಟ್ಟಿಯಲ್ಲಿ ಫಿರೋಜಾಬಾದ್‌ನಿಂದ ಅಕ್ಷಯ್ ಯಾದವ್, ಇಟಾಹ್‌ನಿಂದ ದೇವೇಶ್ ಶಕ್ಯಾ, ಬುಡೌನ್‌ನಿಂದ ಧರ್ಮೇಂದ್ರ ಯಾದವ್, ಖೇರಿಯಿಂದ ಉತ್ಕರ್ಷ್ ವರ್ಮಾ, ಧೌರಾಹ್ರಾದಿಂದ ಆನಂದ್ ಭದೌರಿಯಾ, ಉನ್ನಾವ್‌ನಿಂದ ಅನು ಟಂಡನ್, ಫರೂಖಾಬಾದ್‌ನಿಂದ ನವಲ್ ಕಿಶೋರ್ ಶಕ್ಯ, ಅಕ್ಬರ್‌ಪುರದಿಂದ ರಾಜರಾಮ್ ಪಾಲ್ ಬಂದಾ, ಫೈಜಾಬಾದ್‌ನಿಂದ ಅವಧೇಶ್ ಪ್ರಸಾದ್, ಬಸ್ತಿಯಿಂದ ರಾಮಪ್ರಸಾದ್ ಚೌಧರಿ ಮತ್ತು ಗೋರಖ್‌ಪುರದಿಂದ ಕಾಜಲ್ ನಿಶಾದ್ ಸ್ಪರ್ಧಿಸಲಿದ್ದಾರೆ.

  ಅಖಿಲೇಶ್ ಯಾದವ್ ಅವರು ಸೀಟು ಹಂಚಿಕೆ ಚರ್ಚೆಯ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ರಹಸ್ಯ ಪೋಸ್ಟ್ ರಾಜಕೀಯ ವಲಯಗಳಲ್ಲಿ ಬಲವಾದ ಊಹಾಪೋಹಗಳಿಗೆ ಕಾರಣವಾಗಿದೆ.

  ಎರಡು ಪಕ್ಷಗಳ ನಡುವೆ ಸೀಟು ಹಂಚಿಕೆಯ ಮಾತುಕತೆ ಆರಂಭವಾದಾಗ, ಕಾಂಗ್ರೆಸ್ 2009 ರ ಲೋಕಸಭೆ ಚುನಾವಣೆಯಲ್ಲಿ ಯುಪಿಯಲ್ಲಿ ಗೆದ್ದಿದ್ದ 21 ಸೀಟುಗಳು ಸೇರಿದಂತೆ 30 ಸ್ಥಾನಗಳಿಗಳಿಗಾಗಿ ಬೇಡಿಕೆ ಇಟ್ಟಿತ್ತು. , ಆದರೆ 13 ಕ್ಕಿಂತ ಹೆಚ್ಚು ಸ್ಥಾನಗಳು ಕಾಂಗ್ರೆಸ್‌ಗೆ ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹೇಳಿತ್ತು.

  ದೇಶದಲ್ಲೇ ಉತ್ತರ ಪ್ರದೇಶವು ಅತಿ ಹೆಚ್ಚು 80 ಲೋಕಸಭಾ ಸ್ಥಾನಗಳನ್ನು ಹೊಂದಿದೆ. 2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮಿತ್ರ ಪಕ್ಷವಾದ ಅಪ್ನಾ ದಳ (ಸೋನೇಲಾಲ್) 80 ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದಿತ್ತು. ಬಿಜೆಪಿಗೆ ಸವಾಲಾಗಿ ಪರಿಣಮಿಸಲಿದೆ ಎಂದು ನಿರೀಕ್ಷಿಸಲಾಗಿದ್ದ ಸಮಾಜವಾದಿ ಪಕ್ಷ-ಬಹುಜನ ಸಮಾಜ ಪಕ್ಷ ಮೈತ್ರಿಯು ಅಪೇಕ್ಷಿತ ಫಲಿತಾಂಶವನ್ನು ನೀಡಲಿಲ್ಲ, ಕೇವಲ 15 ಸ್ಥಾನಗಳನ್ನು (ಎಸ್‌ಪಿ 5 ಮತ್ತು ಬಿಎಸ್‌ಪಿ 10) ಗೆದ್ದುಕೊಂಡರೆ, ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಮಾತ್ರ ಗೆಲ್ಲಲು ಸಾಧ್ಯವಾಗಿತ್ತು.

  ಉನ್ನತ ಶಿಕ್ಷಣ ಸಚಿವರ ತವರು ಜಿಲ್ಲೆಯಲ್ಲಿ ಮತ್ತೊಂದು ಹೀನ ಕೃತ್ಯ; ಮಕ್ಕಳಿಂದ ಶೌಚಗೃಹ ಕ್ಲೀನಿಂಗ್ ವಿಡಿಯೋ ವೈರಲ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts