More

    ಜವಾರಿ ಬದಲು ಹೈಬ್ರಿಡ್ ಸಸಿ ವಿತರಣೆ

    ರಾಯಬಾಗ: ಖಾಸಗಿ ಕಂಪನಿಯೊಂದು ಜವಾರಿ ಬದಲು ಹೈಬ್ರಿಡ್ ಬಾಳೆ ಸಸಿ ನೀಡಿ ಮೋಸ ಮಾಡಿದೆ ಎಂದು ತಾಲೂಕಿನ ನಿಡಗುಂದಿ ರೈತ ಕಲ್ಲಪ್ಪ ಗುರುಲಿಂಗ ಮಗದುಮ್ಮ ಆರೋಪಿಸಿದ್ದಾರೆ.

    ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಸೋಮವಾರ ತಮ್ಮ ತೋಟದಲ್ಲಿ ಬೆಳೆದ ಬಾಳೆ ಸಸಿಗಳನ್ನು ಪ್ರದರ್ಶಿಸಿ ಮಾತನಾಡಿದ ರೈತ ಕಲ್ಲಪ್ಪ, ಜಮಖಂಡಿ ತಾಲೂಕಿನ ಹಳಿಂಗಳಿ ಗ್ರಾಮದ ಖಾಸಗಿ ಕಂಪನಿಯಿಂದ ಕಳೆದ ಡಿಸೆಂಬರ್ ತಿಂಗಳಿನಲ್ಲಿ 24 ರೂ.ಗೆ ಒಂದರಂತೆ 27 ಸಾವಿರ ರೂ.ನೀಡಿ 1,125 ಜವಾರಿ ಬಾಳೆ ಸಸಿ ಖರೀದಿಸಿ ನಾಟಿ ಮಾಡಿದ್ದೆ. ಆದರೆ, 5-6 ತಿಂಗಳ ನಂತರ ನಾಟಿ ಮಾಡಿದ ಬಾಳೆ ಸಸಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಹೈಬ್ರಿಡ್ ಸಸಿಗಳಿರುವುದು ಗಮನಕ್ಕೆ ಬಂದಿದೆ. 1,125 ಸಸಿಗಳಲ್ಲಿ 525 ಜವಾರಿ ಇದ್ದು, ಉಳಿದ 600 ಸಸಿಗಳು ಹೈಬ್ರಿಡ್ ಇವೆ.

    ಇದರಿಂದ ನನಗೆ : ನಷ್ಟವಾಗಿದೆ. ಕಂಪನಿಯವರು ನಷ್ಟ ಭರಿಸಿಕೊಡಬೇಕು. ಇಲ್ಲವಾದರೆ ಕಂಪನಿ ವಿರುದ್ಧ ದೂರು ದಾಖಲಿಸುತ್ತೇನೆ ಎಂದು ರೈತರ ಕಲ್ಲಪ್ಪ ಮಗದುಮ್ಮ ಎಚ್ಚರಿಕೆ ನೀಡಿದ್ದಾರೆ.

    ಬಾಳೆ ಸಸಿ ನೀಡಲು ನಾವು ಬುಕ್ಕಿಂಗ್ ಮಾಡಿಕೊಂಡಿದ್ದೇವೆ. ಆದರೆ, ಸಕಾಲಕ್ಕೆ ಸಸಿ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಬೇರೆಯವರ ಮಾತು ಕೇಳಿ ರೈತರು ಸುಳ್ಳು ಆರೋಪ ಮಾಡುತ್ತಿದ್ದಾರೆ.
    | ಧನಪಾಲ ಯಲ್ಲಟ್ಟಿ ಖಾಸಗಿ ಕಂಪನಿ ಮಾಲೀಕ

    ರೈತ ಕಲ್ಲಪ್ಪ ಖಾಸಗಿ ಕಂಪನಿ ವಿರುದ್ಧ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು
    | ಎಂ.ಆರ್.ಕಳ್ಳಿಮನಿ
    ತೋಟಗಾರಿಕೆ ಇಲಾಖೆ ಅಧಿಕಾರಿ, ರಾಯಬಾಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts