More

    ಪೊಲೀಸ್​ ಇನ್ಸ್​ಪೆಕ್ಟರ್​, ಕಾನ್ಸ್​ಟೇಬಲ್​ಗೆ ಹಾಡಹಗಲೇ ಬೆಂಕಿ ಹಚ್ಚಿದ ಗುಂಪು: ಇಬ್ಬರ ಸ್ಥಿತಿಯೂ ಗಂಭೀರ!

    ಹೈದರಾಬಾದ್​: ಉದ್ರಿಕ್ತ ಜನರ ಗುಂಪೊಂದು ಹಚ್ಚಿದ ಬೆಂಕಿಗೆ ಓರ್ವ ಪೊಲೀಸ್​ ಇನ್ಸ್​ಪೆಕ್ಟರ್​ ಮತ್ತು ಕಾನ್ಸ್​ಟೇಬಲ್ ಸುಟ್ಟ ಗಂಭೀರ ಗಾಯಗಳಿಂದ ಬಳಲುತ್ತಿರುವ ಘಟನೆ ಹೈದಾರಾಬಾದ್​ನ ಬಾಲಾಜಿನಗರದಲ್ಲಿ ಗುರುವಾರ ನಡೆದಿದೆ.

    ಇನ್ಸ್​ಪೆಕ್ಟರ್​ ಪಿ. ಬಿಕ್ಷಪತಿ ರಾವ್​ ಮತ್ತು ಕಾನ್ಸ್​ಟೇಬಲ್​ ಬಿ. ಅರುಣ್​ ಗಂಭೀರ ಗಾಯಗಳಿಂದ ಬಳಲುತ್ತಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಕಟ್ಟಡ ಧ್ವಂಸ ಕಾರ್ಯಾಚರಣೆಯ ಕರ್ತವ್ಯಕ್ಕೆ ತೆರಳಿದ್ದಾಗ ಗುಂಪೊಂದು ಅವರತ್ತ ಉರಿಯುವ ದ್ರವವನ್ನು ಎಸೆದು ಬೆಂಕಿ ಹಚ್ಚಿದ್ದಾರೆ.

    ಇದನ್ನೂ ಓದಿ: ಸೆಕ್ಸ್​ ಡಾಲ್​ ಮದ್ವೆಯಾಗಿ ಇದೀಗ ಕಣ್ಣೀರಿಡುತ್ತಿರುವ ಬಾಡಿಬಿಲ್ಡರ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ..!

    ಘಟನೆಯ ವಿವರಣೆಗೆ ಬರುವುದಾದರೆ ಜವಹರ್​ನಗರ ಇನ್ಸ್​ಪೆಕ್ಟರ್ ಬಿಕ್ಷಪತಿ ರಾವ್​ಗೆ ಗುರುವಾರ ಮುನ್ಸಿಪಲ್​ ಕಮಿಷನರ್​ ಎನ್​. ಮಂಗಮ್ಮ ಅವರಿಂದ ಕರೆಯೊಂದು ಬರುತ್ತದೆ. ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಿರುವ ಕಟ್ಟಡವನ್ನು ತೆರವುಗೊಳಿಸಲು ಕಮಿಷನರ್​, ಇನ್ಸ್​ಪೆಕ್ಟರ್​ ನೆರವು ಕೇಳುತ್ತಾರೆ. ​

    ಪೊಲೀಸ್​ ಪಡೆಯೊಂದಿಗೆ ಮುನ್ಸಿಪಲ್​ ಮತ್ತು ಕಂದಾಯ ಅಧಿಕಾರಿಗಳು ಕಾರ್ಯಾಚರಣೆಯ ಸ್ಥಳವನ್ನು ತಲುಪಿದಾಗ ಗುಂಪಿನ ಸದಸ್ಯರಾದ ಪೂನಮ್​ ಚಾಂದ್​, ನಿಹಾಲ್​ ಚಾಂದ್​, ಶಾಂತೆ ಜಿ ದೇವಿ, ನಿರ್ಮಲ್​ ಬಲ್ಸಿಂಗ್​, ಚಿನರ್ಮಪಟೇಲ್​, ಗೀತಾ, ಗೋದಾವರಿ, ಯೋಗಿ ಕಮಲ್​, ಮದನ್​ ಲಾಲ್​ ಸೇರಿದಂತೆ ಕೆಲ ಸ್ಥಳೀಯ ರಾಜಕಾರಣಿಗಳಾದ ರಂಗುಲಾ ಶಂಕರ್​, ಶೋಭಾ ರೆಡ್ಡಿ ಮತ್ತವರ ಬೆಂಬಲಿಗರು ಸೇರಿ ಸರ್ಕಾರಿ ಅಧಿಕಾರಿಗಳನ್ನು ತಡೆದು ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಲು ಯತ್ನಿಸುತ್ತಾರೆ. ಅಲ್ಲದೆ, ಅಧಿಕಾರಿಗಳನ್ನು ಅಸಭ್ಯ ಪದಗಳಿಂದ ನಿಂದಿಸಿ, ಅವರ ಮೇಲೆ ಖಾರದಪುಡಿಯನ್ನೂ ಎರಚಿ ಮೃಗಗಳಂತೆ ವರ್ತಿಸಿದ್ದಾರೆ.

    ಇದನ್ನೂ ಓದಿ: ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!

    ಅಷ್ಟರಲ್ಲಾಗಲೇ ನಿವಾಹಲ್​ ಚಾಂದ್​, ಶಾಂತಿ ದೇವಿ ಮತ್ತು ನಿರ್ಮಲಾ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡದೊಳಗೆ ಸೇರಿ ಒಳಗಿನಿಂದ ಲಾಕ್​ ಮಾಡಿಕೊಂಡಿದ್ದರು. ಇದ್ದಕ್ಕಿದ್ದಂತೆ ಕಟ್ಟದಿಂದ ಭಾರಿ ಪ್ರಮಾಣದಲ್ಲಿ ಹೊಗೆ ಮತ್ತು ಬೆಂಕಿ ಹೊರಬರಲು ಶುರುವಾಯಿತು. ಅಷ್ಟರಲ್ಲಾಗಲೇ ಒಳಗಿರುವವರು ಬೆಂಕಿ ಹಂಚಿಕೊಂಡಿದ್ದಾರೆಂಬ ವದಂತಿ ಹರಿದಾಡುತ್ತಿದ್ದಂತೆ ಇನ್ಸ್​ಪೆಕ್ಟರ್​ ಬಿಕ್ಷುಪತಿ ಮತ್ತು ಕಾನ್ಸ್​ಟೇಬಲ್​ ಅರುಣ್​ ಬಾಗಿಲು ಮುರಿಯಲು ಯತ್ನಿಸಿದ್ದಾರೆ. ಆದರೆ, ಒಳಗಿದ್ದ ನಿಹಾಲ್​ ಚಾಂದ್​, ಶಾಂತಿ ದೇವಿ ಮತ್ತು ನಿರ್ಮಲ ಪೊಲೀಸರ ಮೇಲೆಯೇ ಉರಿಯುವ ದ್ರವವನ್ನು ಸುರಿದು ಬೆಂಕಿ ಹಚ್ಚಿದ್ದಾರೆ. ಘಟನೆಯಲ್ಲಿ ಪೊಲೀಸರಿಬ್ಬರಿಗೂ ಗಂಭೀರ ಗಾಯಗಳಾಗಿವೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಸದ್ಯ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಶೇಷ ಪೊಲೀಸ್​ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ಆರಂಭವಾಗಿದೆ. (ಏಜೆನ್ಸೀಸ್​)

    ಇದನ್ನೂ ಓದಿ: PHOTOS| ರಾಜನ ಪತ್ನಿಯ ಅಶ್ಲೀಲ ಚಿತ್ರಗಳನ್ನು ಹರಿಬಿಟ್ಟು ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಥೈಲ್ಯಾಂಡ್​ ಕಾರ್ಯಕರ್ತ!

    ಮೊದಲು ಕಾಶ್ಮೀರ ವಶಪಡಿಸ್ತೇವೆ, ನಂತರ ಭಾರತದ ಮೇಲೆ ದಾಳಿ ಮಾಡ್ತೇವೆ ಅಂದ್ರು ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ​

    ತಾಳಿ ಕಟ್ಟುವಷ್ಟರಲ್ಲಿ ಪೊಲೀಸರಿಗೆ ಕರೆ ಮಾಡಿ ಕೈಕೊಟ್ಟ ವಧು: ಚಿಂತಿಸದ ವರನಿಂದ ಒಳ್ಳೆಯ ನಿರ್ಧಾರ!

    ಪರಿಚಯಸ್ಥ ಯುವಕನ ಮಾತು ನಂಬಿ ಕೆಲಸಕ್ಕಾಗಿ ರೆಸ್ಯೂಮ್ ಹಿಡಿದುಕೊಂಡು ಹೋದ ಯುವತಿಗೆ ಕಾದಿತ್ತು​ ಶಾಕ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts