More

    ಬೆಟಗೇರಿ ರಂಗಾವಧೂತರ ರಥೋತ್ಸವ

    ವಿಜಯವಾಣಿ ಸುದ್ದಿಜಾಲ ಗದಗ
    ಬೆಟಗೇರಿಯ ರಂಗಾವಧೂತರ ತಪೋ ಭೂಮಿಯಲ್ಲಿ ಅಮವಾಸ್ಯೆಯ ದಶಮಿ ದಿನವಾದ ಸೋಮವಾರ ಸಂಜೆ ರಂಗಾವಧೂತರ ಹಾಗೂ ವೀರಪ್ಪಜ್ಜನವರ ಜೋಡು ರಥೋತ್ಸವವು ಸಹಸ್ರಾರು ಸದ್ಭಕ್ತರ ಹಷೋರ್ದ್ಘಾರಗಳ ಮಧ್ಯೆ ಶ್ರದ್ಧಾಭಕ್ತಿಯಿಂದ ನೆರವೇರಿತು.
    ಜಾತ್ರೆಯಲ್ಲಿ ಸೇರಿದ್ದ ಭಕ್ತರು ರಥೋತ್ಸವ ಪ್ರಾರಂಭವಾಗುತ್ತಿದ್ದಂತೆ, “ರಂಗಪ್ಪಜ್ಜ ಮಹರಾಜಕಿ ಜೈ’, “ವೀರಪ್ಪಜ್ಜ ಮಹರಾಜಕಿ ಜೈ, ನಾಗಮ್ಮತಾಯಿ ಮಹಾರಾಜಕಿ ಜೈ, ಹರಹರ ಮಹಾದೇವ ಎಂಬ ಹಷೋರ್ದ್ಘಾರಗಳು ಮುಗಿಲು ಮುಟ್ಟಿದ್ದವು.
    ನರಸಾಪೂರದಲ್ಲಿ ಅಲಕೃತಗೊಂಡ ರಂಗಪ್ಪಜ್ಜನ ಥೇರು, ರಂಗಪ್ಪಜ್ಜನ ಮಠದಲ್ಲಿ ಸಿದ್ದಗೊಂಡ ವೀರಪಜ್ಜನ ತೇರು ವಿಶೇಷ ವಿದ್ಯುತ್​ ದೀಪಗಳ ಅಲಂಕಾರದಿಂದ ಕೂಡಿದ್ದವು. ಎರಡು ಥೇರುಗಳು ರಂಗಪ್ಪಜ್ಜನ ಮಠದಲ್ಲಿ ವಿಲೀನ ಗೊಂಡಾಗ ಅಲ್ಲಿದ್ದ ಸದ್ಭಕ್ತರ ಸಂತಸ ಇಮ್ಮಡಿ ಯಾಗಿತ್ತು.
    ಜಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​, ರಂಗಾವಧೂತರ ತಪೋಭೂಮಿಯ ಸುತ್ತಮುತ್ತಲಿನ ಪ್ರದೇಶದ ಯುವಕರು ಉತ್ಸಾಹದಿಂದ ಶ್ರಮಿಸಿ, ಸಹಕಾರ ನೀಡಿದ್ದಾರೆ. ಈಭಾಗದ ಪುಣ್ಯ ಕ್ಷೇತ್ರಗಳಲ್ಲಿ ರಂಗಾವಧೂತರ ಮಠವು ಒಂದಾಗಿದೆ.” ಯಾವುದು ಹೌದು ಅದು ಅಲ್ಲ, ಯಾವುದು ಅಲ್ಲ ಅದು ಹೌದು ಎನ್ನು ಸಂದೇಶ ಸತ್ಯದ ಅನಾವರಣ ಗೊಳಿಸುತ್ತದೆ. ಈ ಔಆಗದಲ್ಲಿ ನೆಮ್ಮದಿ ನೆಲಸಿರಲು ರಂಗಾವಧೂರ ಆಶಿರ್ವಾದ ಕಾರಣ ಎಂದು ವೈಶಾಲಿ ಎಂ.ಎಲ್​. ಅಭಿಪ್ರಾಯಪಟ್ಟರು.
    ಸಾನ್ನಿಧ್ಯ ವಹಿಸಿ ಮಾತನಾಡಿದ ನಂದಿವೇರಿ ಮಠದ ಶಿವಕುಮಾರ ಶ್ರೀಗಳು ಮಾತನಾಡಿದರು. ಗದಗ ಬೆಟಗೇರಿ ನಗರಸಭಾ ಸ್ಥಾಯಿ ಸಮಿತಿ ಮಾಜಿ ಅಧ್ಯ ರಾವೇಂದ್ರ ಯಳವತ್ತಿ ಇದ್ದರು.
    ಬಂದಂತಹ ಸಹಸ್ರಾರು ಭಕ್ತರಿಗೆ ಕುಡಿಯುವ ನೀರು ಸೇರಿ ವಿವಿಧ ವ್ಯವಸ್ಥೆ ಕಲ್ಪಿಸಲಾಗಿತ್ತು. ಪೊಲೀಸ್​ ಇಲಾಖೆ ಸೂಕ್ತ ಬಂದೊಬಸ್ತ ಕೈಗೊಂಡಿತ್ತು.
    ಈ ಸಂದರ್ಭದಲ್ಲಿ ಸ್ಥಳಿಯ ಮುಖಂಡ ಎಸ್​. ಆರ್​. ಬಸವಾ, ಅಮರೇಶ ಚ್ಯಾಗಿ, ನಿಂಗಪ್ಪ ಚೇಗೂರ, ಮೈಲಾರಪ್ಪ ಅರಣಿ, ರುದ್ರಪ್ಪ ಬಾದರದಿನ್ನಿ, ಭೋಜಪ್ಪ ಹೆಗ್ಗಡಿ, ಮಹದೇಹಸಾ ಮೇರವಾಡೆ, ಹೇಮಂತಗೌಡ ಬೆನಹಾಳ, ರಾಜು ಕಟಗಿ, ರಾಮಣ್ಣ ಗಡಗಿ, ಚಿದಾನಂದ ಕಾಕಿ, ಮಲ್ಲೇಶಪ್ಪ ಐಲಿ, ವಿಜಯ ಕಬಾಡಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts