More

    ಅಭ್ಯಾಸದ ವೇಳೆ ಸ್ಟಾರ್​ ಬ್ಯಾಟ್ಸ್​ಮನ್​ಗೆ ಗಾಯ; ಲೀಗ್​ ಹಂತದಲ್ಲಿ ಟೀಂ ಇಂಡಿಯಾಗೆ ಮತ್ತೊಂದು ಹಿನ್ನಡೆ

    ಬೆಂಗಳೂರು: ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ರೋಹಿತ್​ ಶರ್ಮಾ ನೇತೃತ್ವದ ಭಾರತ ಕ್ರಿಕೆಟ್​ ತಂಡವು ತಾನಾಡಿರುವ 8 ಪಂದಗ್ಯಗಳಲ್ಲಿ ಜಯ ಗಳಿಸುವ ಮೂಲಕ ಅಜೇಯವಾಗಿ ಸೆಮಿಫೈನಲ್​ ಪ್ರವೇಶಿಸಿದೆ. ನವೆಂಬರ್​ 12ರಂದು ನಡೆಯುವ ಲೀಗ್​ ಹಂತದ ಕೊನೆ ಪಂದ್ಯದಲ್ಲಿ ಭಾರತ ನೆದರ್ಲೆಂಡ್​ ತಂಡವನ್ನು ಎದುರಿಸಲಿದೆ.

    ಈಗಾಗಲೇ ಗಾಯದ ಸಮಸ್ಯೆಯಿಮದಾಗಿ ಕಂಗೆಟ್ಟಿರುವ ಟೀಂ ಇಂಡಿಯಾಗೆ ಈಗ ದೊಡ್ಡ ಆಘಾತ ಒಂದು ಉಂಟಾಗಿದೆ. ಅಭ್ಯಾಸದ ವೇಳೆ ತಂಡದ ಬ್ಯಾಟ್ಸ್​ಮನ್​ ಒಬ್ಬರು ಗಾಯಗೊಂಡಿದ್ದು, ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವುದು ಡೌಟ್​ ಎಂದು ಹೇಳಲಾಗುತ್ತಿದೆ.

    ನೆದರ್ಲೆಂಡ್​ ವಿರುದ್ಧದ ಪಂದ್ಯದಲ್ಲಿ ತಂಡದ ಕೆಲ ಹಿರಿಯ ಆಟಗಾರರು ವಿಶ್ರಾಂತಿ ತೆಗೆದುಕೊಳ್ಳಲಿದ್ದು, ಯುವ ಆಟಗಾರರಿಗೆ ಅವಕಾಶ ನೀಡಬಹುದು ಎಂದು ಹೇಳಲಾಗಿದೆ. ಇದರಲ್ಲಿ ವಿಕೆಟ್​ ಕೀಪರ್, ಬ್ಯಾಟ್ಸ್​ಮನ್​ ಇಶಾನ್​ ಕಿಶನ್​ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ.

    Jasprit Kishan

    ಇದನ್ನೂ ಓದಿ: ಮತ್ತೊಮ್ಮೆ ವಿರಾಟ್​ ಕೊಹ್ಲಿಯನ್ನು ಸ್ವಾರ್ಥಿ ಎಂದ ಪಾಕ್​ ಮಾಜಿ ಕ್ರಿಕೆಟಿಗ; ನೆಟ್ಟಿಗರಿಂದ ತೀವ್ರ ತರಾಟೆ

    ಬುಧವಾರ (ನವೆಂಬರ್ 8) ಬೆಂಗಳೂರಿನಲ್ಲಿ ಭಾರತೀಯ ಆಟಗಾರರು ಅಭ್ಯಾಸ ನಡೆಸುವಾಗ, ಜಸ್​ಪ್ರಿತ್ ಬುಮ್ರಾ ಅವರ ಬೌಲಿಂಗ್​ನಲ್ಲಿ ಇಶಾನ್ ಕಿಶನ್ ಇಂಜುರಿಗೆ ತುತ್ತಾಗಿದ್ದಾರೆ. ಬುಮ್ರಾ ಬೌಲಿಂಗ್​ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿದ್ದ ಯುವ ವಿಕೆಟ್ ಕೀಪರ್, ಬ್ಯಾಟ್ಸ್​ಮನ್ ಇಶಾನ್ ಕಿಶನ್ ಗಾಯಗೊಂಡಿದ್ದಾರೆ.

    ಬುಮ್ರಾ ವೇಗವಾಗಿ ಎಸೆದ ಚೆಂಡು ಇಶಾನ್ ಕಿಶನ್ ಅವರ ಹೊಟ್ಟೆಗೆ ಬಲವಾಗಿ ಬಡಿದಿದೆ. ಇದರಿಂದ ಇಶಾನ್ ಒಂದು ಕ್ಷಣ ನೆಲಕ್ಕೆ ಕುಸಿದರು. ಕಿಶನ್ ಗಾಯದ ಪ್ರಮಾಣ ಎಷ್ಟು ದೊಡ್ಡದಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಗಂಭೀರವಾದ ಗಾಯವಾಗಿಲ್ಲ ಎನ್ನಲಾಗಿದೆ. ನೆದರ್ಲೆಂಡ್ಸ್ ವಿರುದ್ಧ ಕೆಲ ಹಿರಿಯ ಆಟಗಾರರು ವಿಶ್ರಾಂತಿ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಕಿಶನ್ ಕಣಕ್ಕಿಳಿಯಬಹುದು ಎಂದು ಹೇಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts