More

    ಜಸ್‌ಪ್ರೀತ್ ಬುಮ್ರಾಗೆ ವಿಶ್ವ ನಂ.1 ಪಟ್ಟ: ವಿರಾಟ್ ಕೊಹ್ಲಿ ಬಳಿಕ ಈ ಸಾಧನೆ ಮಾಡಿದ ಏಷ್ಯಾದ ಮೊದಲಿಗ

    ದುಬೈ: ಟೀಮ್ ಇಂಡಿಯಾದ ಸ್ಟಾರ್ ವೇಗಿ ಜಸ್‌ಪ್ರೀತ್ ಬುಮ್ರಾ ಐಸಿಸಿ ಟೆಸ್ಟ್ ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ವೇಗಿ ಎನಿಸಿದ್ದಾರೆ. ಜತೆಗೆ ಎಲ್ಲ ಮೂರು ಕ್ರಿಕೆಟ್ ಪ್ರಕಾರದ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ. 1 ಪಟ್ಟಕ್ಕೇರಿದ ಮೊಟ್ಟಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

    ಕೊಹ್ಲಿ ಬಳಿಕ ಬುಮ್ರಾ ಸಾಧನೆ: ಏಕದಿನ, ಟೆಸ್ಟ್ ಹಾಗೂ ಟಿ20 ಮೂರು ಮಾದರಿಯ ಕ್ರಿಕೆಟ್‌ನ ಐಸಿಸಿ ರ‌್ಯಾಂಕಿಂಗ್‌ನಲ್ಲಿ ವಿಶ್ವ ನಂ.1 ಸ್ಥಾನಕ್ಕೇರಿದ ವಿಶ್ವದ 4ನೇ ಆಟಗಾರ ಎಂಬ ಕೀರ್ತಿಗೆ ವೇಗಿ ಜಸ್‌ಪ್ರೀತ್ ಬುಮ್ರಾ ಪಾತ್ರರಾಗಿದ್ದಾರೆ. ಜತೆಗೆ ಭಾರತ ಮತ್ತು ಏಷ್ಯಾದ 2ನೇ ಆಟಗಾರ ಎನಿಸಿದ್ದಾರೆ. ವಿರಾಟ್ ಕೊಹ್ಲಿ ಐಸಿಸಿಯ ಎಲ್ಲ ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿದ ಭಾರತ ಮತ್ತು ಏಷ್ಯಾದ ಮೊದಲ ಆಟಗಾರ ಆಗಿದ್ದಾರೆ. ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಏಕದಿನದಲ್ಲಿ 2013, ಟಿ20ಯಲ್ಲಿ 2016ರಲ್ಲಿ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಬಾರಿಗೆ ಅಗ್ರಸ್ಥಾನಕ್ಕೇರಿದ್ದರು. ಏಕದಿನ ಕ್ರಿಕೆಟ್‌ನಲ್ಲಿ 1,258 ದಿನ ಕೊಹ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದ್ದರು. 2018ರಲ್ಲಿ ಕೊನೆಯದಾಗಿ ಟೆಸ್ಟ್‌ನಲ್ಲಿ ಈ ಸಾಧನೆ ಮಾಡಿದ್ದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್, ಬ್ಯಾಟರ್ ಮ್ಯಾಥ್ಯೂ ಹೇಡನ್ ಈ ಸಾಧನೆ ಮಾಡಿರುವ ಇನ್ನಿಬ್ಬರು.

    4ನೇ ಭಾರತೀಯ: ಜಸ್‌ಪ್ರೀತ್ ಬುಮ್ರಾ ಐಸಿಸಿ ಬೌಲಿಂಗ್ ರ‌್ಯಾಂಕಿಂಗ್‌ನಲ್ಲಿ ನಂ.1 ಸ್ಥಾನ ಪಡೆದ 4ನೇ ಭಾರತೀಯ ಎನಿಸಿದ್ದಾರೆ. ದಿಗ್ಗಜ ಸ್ಪಿನ್ನರ್ ಬಿಷನ್ ಸಿಂಗ್ ಬೇಡಿ, ಆರ್. ಅಶ್ವಿನ್ ಹಾಗೂ ಆಲ್ರೌಂಡರ್ ರವೀಂದ್ರ ಜಡೇಜಾ ಈ ಹಿಂದಿನ ಸಾಧಕರು. ರ‌್ಯಾಂಕಿಂಗ್‌ನಲ್ಲಿ ಅತಿಹೆಚ್ಚು ಅಂಕ ಕಲೆಹಾಕಿದ ಭಾರತೀಯ ಬೌಲರ್‌ಗಳ ಪೈಕಿ ಆರ್.ಅಶ್ವಿನ್ (904), ರವೀಂದ್ರ ಜಡೇಜಾ (899) ದಾಖಲೆ ಸರಿಗಟ್ಟಲು ಬುಮ್ರಾಗೆ 23 ಪಾಯಿಂಟ್ ಅವಶ್ಯವಿದೆ. 2017ರಲ್ಲಿ ಅಶ್ವಿನ್ ಹಾಗೂ ಜಡೇಜಾ ಜೋಡಿ ಜಂಟಿ ಅಗ್ರಸ್ಥಾನ ಪಡೆದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts