More

    ಭಾಷಣ ಮಾಡುತ್ತಿದ್ದ ಸಮೀಪದಲ್ಲೇ ಬಾಂಬ್​ ಸ್ಫೋಟ: ಜಪಾನ್​ ಪ್ರಧಾನಿ ಸ್ಥಳಾಂತರ, ಓರ್ವನ ಬಂಧನ

    ಟೊಕಿಯೋ: ಭಾಷಣದ ಸಮೀಪದಲ್ಲೇ ಸ್ಫೋಟದ ಸದ್ದು ಕೇಳಿದ ಕೂಡಲೇ ಜಪಾನ್​ ಪ್ರಧಾನಿ ಫುಮಿಯೋ ಕಿಶಿಡಾ ಅವರನ್ನು ವಕಯಾಮಾದಲ್ಲಿರುವ ಬಂದರಿನಿಂದ ಸುರಕ್ಷಿತವಾಗಿ ಸ್ಥಳಾಂತರ ಮಾಡಲಾಗಿದೆ. ಫುಮಿಯೋ ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಥಳೀಯ ಮಾಧ್ಯಮಗಳು ಶನಿವಾರ ವರದಿ ಮಾಡಿವೆ.

    ಕ್ಯೂಡೋ ನ್ಯೂಸ್​ ಏಜೆನ್ಸಿ ಸೇರಿದಂತೆ ಹಲವು ವರದಿಗಳ ಪ್ರಕಾರ ಸ್ಥಳದಲ್ಲಿ ಹೊಗೆ ಬಾಂಬ್ ಎಸೆಯಲಾಗಿದೆ. ಆದರೆ, ಯಾವುದೇ ಗಾಯಗಳು ಅಥವಾ ಹಾನಿಯ ತಕ್ಷಣದ ಲಕ್ಷಣಗಳು ಕಂಡುಬಂದಿಲ್ಲ. ಘಟನೆಗೆ ಸಂಬಂಧಿಸಿದಂತೆ ಪಶ್ಚಿಮ ಜಪಾನ್‌ನ ವಕಯಾಮಾದಲ್ಲಿ ಕಿಶಿಡಾ ಭಾಷಣ ಮಾಡಲು ಬಂದಿದ್ದ ಸ್ಥಳದಲ್ಲಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

    ಓರ್ವ ಬಂಧನ
    ಘಟನಾ ಸ್ಥಳದಲ್ಲಿ ಜನಸಂದಣಿಯು ಚದುರಿದಂತೆ ಭದ್ರತಾ ಅಧಿಕಾರಿಗಳು ಮತ್ತು ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿರುವ ದೃಶ್ಯಗಳನ್ನ ಜಪಾನ್​ನ ಎನ್​ಎಚ್​ಕೆ ಮಾಧ್ಯಮ ಪ್ರಸಾರ ಮಾಡಿದೆ.

    ಶಿಂಜೋ ಅಬೆ ಹತ್ಯೆ
    2022ರ ಜುಲೈ ತಿಂಗಳಲ್ಲಿ ಪ್ರಚಾರ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ಮಾಜಿ ಪ್ರಧಾನಿ ಶಿಂಜೋ ಅಬೆ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಇದಾದ ಬಳಿಕ ಜಪಾನ್ ಪ್ರಧಾನಿಗೆ ಭದ್ರತೆಯನ್ನು ಹೆಚ್ಚಿಸಿದೆ. ಹೀಗಿದ್ದರೂ ಈ ಘಟನೆ ನಡೆದಿರುವು ಕಳವಳಕಾರಿಯಾಗಿದೆ. (ಏಜೆನ್ಸೀಸ್​)

    ಬಿಜೆಪಿಯಿಂದ ಟಿಕೆಟ್​ ಮಿಸ್​: ಎಚ್​.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬಿಎಸ್​ವೈ ಆಪ್ತ ಸಂತೋಷ್​

    ಗುಂಡು ಹೊಡೆದು ಬಿಜೆಪಿಯ ಕಿಸಾನ್ ಮೋರ್ಚಾ ನಾಯಕನ ಹತ್ಯೆ!

    ರಿಷಿಕಾ ಈಗ ‘ಓಕೆ ಮಗಾ’!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts