ಬಿಜೆಪಿಯಿಂದ ಟಿಕೆಟ್​ ಮಿಸ್​: ಎಚ್​.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬಿಎಸ್​ವೈ ಆಪ್ತ ಸಂತೋಷ್​

ಹಾಸನ: ಬಿಜೆಪಿಯಿಂದ ಟಿಕೆಟ್​ ನಿರೀಕ್ಷೆಯಲ್ಲಿದ್ದ ಬಿ.ಎಸ್​. ಯಡಿಯೂರಪ್ಪ ಅವರ ಪರಮಾಪ್ತ ಎನ್​.ಆರ್​. ಸಂತೋಷ್​ಗೆ ನಿರಾಶೆಯಾಗಿದ್ದು, ಜೆಡಿಎಸ್​ನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅದಕ್ಕೆ ಪೂರಕವಾಗಿ ಸಂತೋಷ್​ ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡ ಅವರನ್ನು ಭೇಟಿಯಾಗಿದ್ದಾರೆ. ಸಂತೋಷ್​ ಅವರು ಅರಸೀಕೆರೆ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಬಿಜೆಪಿ ಟಿಕೆಟ್​ ನೀಡದೇ ಇರುವುದರಿಂದ ಆಕ್ರೋಶಗೊಂಡಿರುವ ಎನ್​.ಆರ್​. ಸಂತೋಷ್​, ಜೆಡಿಎಸ್​ ಸೇರ್ಪಡೆಯಾಗುವ ಸಾಧ್ಯತೆ ಇದೆ. ಎಚ್​.ಡಿ. ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದನ್ನೂ ಓದಿ: ಕಾಡಾನೆ ದಾಳಿಯಿಂದ ಬೈಕ್​ ಸವಾರರು ಜಸ್ಟ್​ … Continue reading ಬಿಜೆಪಿಯಿಂದ ಟಿಕೆಟ್​ ಮಿಸ್​: ಎಚ್​.ಡಿ. ದೇವೇಗೌಡರನ್ನು ಭೇಟಿ ಮಾಡಿದ ಬಿಎಸ್​ವೈ ಆಪ್ತ ಸಂತೋಷ್​