More

    ಮನೆಯಲ್ಲಿ ಚಹಾ ಹೀರುತ್ತಾ, ಸಾಕುನಾಯಿ ಜತೆ ಸಮಯ ಕಳೆದ ಜಪಾನ್​ ಪ್ರಧಾನಿ, ಟ್ವಿಟರ್​ನಲ್ಲಿ ಪರ-ವಿರೋಧ ಜಟಾಪಟಿ

    ಟೋಕಿಯೋ: ಜಪಾನ್​ನಲ್ಲಿ ಕರೊನಾ ಸೋಂಕು ಹರಡದಂತೆ ತಡೆಯಲು ಅಲ್ಲಿನ ಸರ್ಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ಇದರಿಂದಾಗಿ ಅಲ್ಲಿ ಕರೊನಾ ಸೋಂಕಿತರ ಸಂಖ್ಯೆ ಗಮನಾರ್ಹವಾಗಿ ಕಡಿಮೆಯಾಗಿದೆ. ಸದ್ಯ ಅಲ್ಲಿ 7 ಸಾವಿರ ಜನರು ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ತಡೆಗಟ್ಟಲು ದೇಶಾದ್ಯಂತ ತುರ್ತು ಸ್ಥಿತಿ ಘೋಷಿಸಿದ್ದು, ಅನಗತ್ಯವಾಗಿ ಯಾರೂ ಹೊರಬರದಂತೆ ನಿರ್ಬಂಧಿಸಲಾಗಿದೆ. ಇಂಥ ಸ್ಥಿತಿಯನ್ನು ನಿಭಾಯಿಸಲು ಸದಾ ಸನ್ನದ್ಧರಾಗಿರಬೇಕಾದ ಪ್ರಧಾನಿ, ಮನೆಯಲ್ಲಿ ಆರಾಮವಾಗಿ ಕಾಲ ಕಳೆಯುತ್ತಿದ್ದಾರೆ ಎಂದು ಜಪಾನ್​ ಪ್ರಧಾನಿ ಶಿನ್ಜೋ ಅಬೆ ವಿರುದ್ಧ ಆರೋಪಗಳು ಕೇಳಿ ಬಂದಿವೆ.

    ಮನೆಯಲ್ಲಿ ಸೋಫಾ ಮೇಲೆ ಕುಳಿತಿರುವ ಶಿನ್ಜೋ ಅಬೆ ತಮ್ಮ ಸಾಕುನಾಯಿ ಜತೆ ವಿರಾಮದಲ್ಲಿ ಸಮಯ ಕಳೆಯುತ್ತಿದ್ದಾರೆ. ಅಂತೆಯೇ ಆರಾಮವಾಗಿ ಚಹಾ ಕುಡಿಯುತ್ತಾ ವಿರಮಿಸುತ್ತಿರುವ ದೃಶ್ಯಗಳು ಈ ಟ್ವೀಟ್​ನಲ್ಲಿ ಅಡಕವಾಗಿವೆ.

    ಜಪಾನ್​ನಲ್ಲಿ ಕೋವಿಡ್​ 19 ತುರ್ತು ಇರುವ ಸಂದರ್ಭದಲ್ಲಿ ಶಿನ್ಜೋ ಅಬೆ ಆರಾಮವಾಗಿ ಕಾಲಕಳೆಯುತ್ತಿದ್ದಾರೆ. ಏನೂ ಆಗದವರಂತೆ ನಿರ್ಲಿಪ್ತವಾಗಿದ್ದಾರೆ ಎಂದು ಸಾರ್ವಜನಿಕರೊಬ್ಬರು ಟ್ವೀಟ್​ನಲ್ಲಿ ಟೀಕಿಸಿದ್ದಾರೆ.

    ಇದಕ್ಕೆ ಪ್ರತ್ಯುತ್ತರ ನೀಡಿರುವ ಮತ್ತೊಬ್ಬ ಪ್ರಧಾನಿ ನಿರಂತರವಾಗಿ ಒತ್ತಡದಲ್ಲೇ ಕೆಲಸ ಮಾಡುತ್ತಿರುತ್ತಾರೆ. ಅವರಿಗೂ ಒಂದಷ್ಟು ವಿಶ್ರಾಂತಿ ಬೇಕಲ್ಲವೇ ಎಂದು ಪ್ರಶ್ನಿಸಿ, ಟ್ವೀಟ್​ ಪ್ರಕಟಿಸಿರುವ ವ್ಯಕ್ತಿಯ ಕ್ರಮವನ್ನು ವಿರೋಧಿಸಿದ್ದಾರೆ.

    ಕ್ಯಾನ್ಸರ್​ ಗೆದ್ದ ಬಾಲಿವುಡ್​ ತಾರೆ ಸೊನಾಲಿ ಬೇಂದ್ರೆ ಕೊಟ್ಟಿದ್ದಾರೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಸ್ಮೂದಿಯ ರೆಸಿಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts