More

    ಚರ್ಮಗಂಟು ರೋಗದೆಡೆ ಎಚ್ಚರ ವಹಿಸಿ

    ಚಿತ್ರದುರ್ಗ: ಚರ್ಮಗಂಟು ರೋಗದೆಡೆ ಬೀದರ್ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಮಹಾವಿದ್ಯಾಲಯದ ಉಪಕುಲಪತಿ ಡಾ.ಕೆ.ಸಿ.ವೀರಣ್ಣ ಜಾನುವಾರು ಮಾಲೀಕರಿಗೆ ಸಲಹೆ ನೀಡಿದರು.

    ಜಿಪಂ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಆಯೋಜಿಸಿದ್ದ ಜಾನುವಾರುಗಳಿಗೆ ತಗಲುವ ಚರ್ಮಗಂಟು ರೋಗ,ಆಫ್ರಿಕನ್ ಸ್ವೈನ್ ಫೀವರ್ ಹಾಗೂ ಯೋಜನಾ ವರದಿ ತಯಾರಿಕೆ ಕುರಿತು ಪಶು ವೈದ್ಯಾಧಿಕಾರಿಗಳಿಗೆ ಏರ್ಪಡಿಸಿದ್ದ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಸೊಳ್ಳೆ ಮತ್ತು ಉಣ್ಣೆಯಿಂದ ಬರುವಂತಹ ಚರ್ಮಗಂಟು ರೋಗ 2019ರಲ್ಲಿ ಮೊದಲು ಒರಿಸ್ಸಾದಲ್ಲಿ ಪತ್ತೆಯಾಗಿದೆ. ಈ ರೋಗ ಕರ್ನಾಟಕದ ಹಲವು ಜಿಲ್ಲೆಗಳಲ್ಲೂ ಕಂಡು ಬಂದಿದೆ. ರೋಗಕ್ಕೆ ಈಗಾಗಲೇ ಲಸಿಕೆ ಕಂಡು ಹಿಡಿಯಲಾಗಿದೆ. ವೈದ್ಯರು ತಮ್ಮ ವ್ಯಾಪ್ತಿಯಲ್ಲಿ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡ ಬೇಕು. ಆಫ್ರಿಕನ್‌ಸ್ವೈನ್ ಜ್ವರ ಅರುಣಾಚಲ ಪ್ರದೇಶದಲ್ಲಿ ಪತ್ತೆಯಾಗಿದ್ದು,ಹೊಸಕೋಟೆಯಲ್ಲೂ ಕಾಣಿಸಿದೆ. ಇದರ ನಿಯಂತ್ರಣಕ್ಕೆ ಸಂಶೋಧನೆ ನಡೆದಿದೆ.

    ಪಶು ವೈದ್ಯಾಧಿಕಾರಿಗಳು ರೈತರೊಂದಿಗೆ ನಿರಂತರ ಸಂಪರ್ಕ ಹೊಂದಿದ್ದರೆ ಚರ್ಮಗಂಟು ರೋಗವನ್ನು ನಿಯಂತ್ರಿಸಿ,ಹೈನುಗಾರಿಕೆಯಲ್ಲಿ ತೊಡ ಗಿರುವ ರೈತರನ್ನು ಆರ್ಥಿಕವಾಗಿ ಸಧೃಡವಾಗಿಸ ಬಹುದ್ದಾಗಿದ್ದು,ಈ ನಿಟ್ಟಿನಲ್ಲಿ ಸಾಕಷ್ಟು ಪೂರಕ ಸಂಶೋಧನೆಗಳಾಗುತ್ತಿವೆ. ರೈತರ ಆರ್ಥಿಕಾವೃದ್ಧಿ ಗೆ ಹೊಸ,ಹೊಸ ತಂತ್ರಜ್ಞಾನದ ಅಗತ್ಯವಿದೆ. ಪಶು ವೈದ್ಯಕೀಯ ಕ್ಷೇತ್ರವಿಂದು ಬೇಡಿಕೆ ಕ್ಷೇತ್ರವಾಗಿದೆ. ಪಶು ಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯದಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ.

    ಪಶು ವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಎಸ್.ಕಲ್ಲಪ್ಪ ಮಾತನಾಡಿ,ಚರ್ಮಗಂಟು ರೋಗ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾ ಣದಲ್ಲಿ ಇಲ್ಲ,ಆದರೂ ಮುನ್ನೆಚ್ಚರಿಕೆಯಾಗಿ ಕಾರ‌್ಯಾಗಾರವನ್ನು ಏರ್ಪಡಿಸಲಾಗಿದೆ. ರೈತ ಸಮುದಾಯಕ್ಕೆ ಪೆಟ್ಟು ಬೀಳುವ ಮೊದಲು ರೋಗದೆಡೆ ಎಚ್ಚರಿಕೆ ವಹಿಸ ಬೇಕಿದೆ. ರೈತರಿಗೆ ಮಾಹಿತಿ ಇದ್ದರೆ ರೋಗ ನಿಯಂತ್ರಣ ಸಹಕಾರಿಯಾಗುತ್ತದೆ ಎಂದರು.

    ಸಂಪನ್ಮೂಲ ವ್ಯಕ್ತಿಗಳಾದ ಶಿವಮೊಗ್ಗ ಪಶು ವೈದ್ಯಕೀಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಜಿ.ಟಿ.ಗೋಪಾಲ್,ಗದಗ ಪಶು ವೈದ್ಯಕೀಯ ಕಾಲೇಜು ಪ್ರಾಧ್ಯಾಪಕ ಡಾ.ಬಿ.ಎಂ.ವೀರೇಗೌಡ,ಇಲಾಖೆ ಉಪನಿರ್ದೇಶಕ ಡಾ.ಎನ್.ಬಾಬುರತ್ನ,ಮುಖ್ಯಪಶು ವೈದ್ಯಾಧಿಕಾರಿಗಳಾದ ಡಾ. ಹರೀಶ್,ಡಾ.ಸಿ.ತಿಪ್ಪೇಸ್ವಾಮಿ ಮತ್ತಿತರರು ಇದ್ದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts