More

    ಜನೌಷಧ ಕೇಂದ್ರದಿಂದ ಜನಸಾಮಾನ್ಯರಿಗೆ ಲಾಭ, ಡಾ.ರಾಜೇಂದ್ರಕುಮಾರ್ ಅಭಿಮತ

    ಕಾರ್ಕಳ: ಜನರ ಬದುಕಿಗೆ ಆರ್ಥಿಕತೆ ಎಷ್ಟೆ ಮುಖ್ಯ ಎನಿಸಿದ್ದರೂ ಕೂಡ ಆರೋಗ್ಯ ಕಾಪಾಡುವುದೂ ಅಷ್ಟೇ ಮುಖ್ಯ. ಜನರಿಕ್ ಔಷಧ ಬಳಸುವುದರಿಂದ ಜನಸಾಮಾನ್ಯರಿಗೆ ಅನುಕೂಲವಾಗಿದೆ. ಜನರಿಕ್ ಜನೌಷಧ ಕೇಂದ್ರ ತೆರೆಯಲು ರಾಜ್ಯಮಟ್ಟದ ಏಜೆನ್ಸಿಯನ್ನು ಪ್ರಥಮ ಬಾರಿಗೆ ಸಹಕಾರಿ ಕ್ಷೇತ್ರಕ್ಕೆ ಕೇಂದ್ರ ಸರ್ಕಾರ ನೀಡಿದೆ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ. ಎಂ.ಎನ್ ರಾಜೇಂದ್ರಕುಮಾರ್ ಹೇಳಿದರು.

    ರಾಜ್ಯ ಸಹಕಾರ ಮಹಾಮಂಡಲ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್, ಕಾರ್ಕಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಕಾರ್ಕಳ, ತಾಲೂಕು ಲ್ಯಾಂಪ್ಸ್ ಸಹಕಾರ ಸಂಘ ಹಾಗೂ ಸಹಕಾರ ಇಲಾಖೆ ಉಡುಪಿ ಹಾಗೂ ತಾಲೂಕಿನ ಎಲ್ಲ ಸಹಕಾರ ಸಂಘಗಳ ಸಹಯೋಗದಲ್ಲಿ 67ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ಮಂಗಳವಾರ ಕಾರ್ಕಳದಲ್ಲಿ ಆಯೋಜಿಸಿದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಜನೌಷಧ ಬಳಕೆಯಿಂದ ಕಡಿಮೆ ಖರ್ಚಿನಲ್ಲಿ ಆರೋಗ್ಯ ಕಾಪಾಡಲು ಸಾಧ್ಯವಿದೆ. ಜನೌಷಧ ಉದ್ಘಾಟನೆ ದಿನ ಸಹಕಾರಿ ಸಚಿವ ಸೋಮಶೇಖರ ಸಮ್ಮುಖದಲ್ಲಿ ಸಚಿವ ಡಿ.ವಿ.ಸದಾನಂದ ಗೌಡ ಅವರು ವರ್ಷವೊಂದಕ್ಕೆ 500 ಜನೌಷಧ ಕೇಂದ್ರಗಳನ್ನು ಸಹಕಾರಿ ಸಂಘಗಳ ವತಿಯಿಂದಲೇ ತೆರೆಯುವಂತೆ ಕೇಳಿಕೊಂಡಿದ್ದಾರೆ. ಯಶಸ್ವಿಯಾದರೆ ಕೇರಳ ಮತ್ತು ಗೋವಾದಲ್ಲೂ ರಾಜ್ಯ ಸಹಕಾರ ಮಂಡಳಕ್ಕೆ ಏಜೆನ್ಸಿಯನ್ನು ನೀಡುವ ಭರವಸೆ ನೀಡಿದ್ದಾರೆ. ದ.ಕ ಜಿಲ್ಲೆಯಾದ್ಯಂತ ಸುತ್ತಾಡುತ್ತಿದ್ದು, 70 ಪ್ರಾಥಮಿಕ ಸಹಕಾರ ಸಂಸ್ಥೆಗಳು ಕೇಂದ್ರ ತೆರೆಯಲು ಮುಂದೆ ಬಂದಿವೆ ಎಂದರು.

    ಕೆಐಸಿಎಂ ಮೂಡುಬಿದಿರೆ ಪ್ರಭಾರ ಪ್ರಾಂಶುಪಾಲೆ ಬಿಂದು ಬಿ. ನಾಯರ್ ಮಾತನಾಡಿದರು.
    ಡಾ. ಎಂ.ಎನ್ ರಾಜೇಂದ್ರ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಜಿಲ್ಲಾ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಅಶೋಕ್‌ಕುಮಾರ್ ಬಲ್ಲಾಳ್, ಕಾರ್ಕಳ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಅಧ್ಯಕ್ಷ ವಾದಿರಾಜ ಶೆಟ್ಟಿ, ಕಾರ್ಕಳ ತಾಲೂಕು ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ರಾಘವ ನಾಯ್ಕ, ಸಹಕಾರ ಸಂಘಗಳ ಉಪಪ್ರಬಂಧಕ ಪ್ರವೀಣ್ ಬಿ. ನಾಯಕ್, ಕುಂದಾಪುರ ಸಹಕಾರ ಸಂಘಗಳ ಸಹಾಯಕ ನಿಬಂಧಕ ಅರುಣ್‌ಕುಮಾರ್ ಎಸ್.ವಿ. ಉಪಸ್ಥಿತರಿದ್ದರು.

    ಯೂರಿಯಾ ಘಟಕ ಸ್ಥಾಪನೆ ಚಿಂತನೆ
    ರೈತರಿಗೆ ರಸಗೊಬ್ಬರ, ಕೊರತೆಯಾಗದಂತೆ ದಾವಣೆಗೆರೆ ಜಿಲ್ಲೆಯ ಹರಿಹರದ ಬಳಿ 12.5 ಲಕ್ಷ ಟನ್ ಉತ್ಪಾದನೆಯ ಯೂರಿಯಾ ರಸಗೊಬ್ಬರ ಘಟಕವನ್ನು ಸಹಕಾರಿ ಸಂಸ್ಥೆ ವತಿಯಿಂದಲೇ ತೆರೆಯುವ ಚಿಂತನೆಯಿದೆ ಎಂದು ಡಾ. ಎನ್.ಎನ್. ರಾಜೇಂದ್ರ ಕುಮಾರ್ ತಿಳಿಸಿದರು. ಈಗಿನ ತಾಂತ್ರಿಕತೆಗಿಂತ ಉತ್ತಮವಾದ ಹೊಸ ತಂತ್ರಜ್ಞಾನ ಬಳಸಿ ಕಡಿಮೆ ದರದಲ್ಲಿ, ಗೊಬ್ಬರ ಕೊರತೆಯಾಗದಂತೆ ಘಟಕ ತೆರೆಯಲಾಗುವುದು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹಕಾರಿ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ರೈತರಿಗೆ ನೆರವಾಗುತ್ತಿವೆ. ಸಹಕಾರಿ ಸಪ್ತಾಹ ಆಚರಿಸುವ ಉದ್ದೇಶ ಹೊಸಬರನ್ನು ಸಹಕಾರಿ ಕ್ಷೇತ್ರಕ್ಕೆ ಸೆಳೆಯುವುದಾಗಿದೆ. ಎಲ್ಲ ಸಂಸ್ಥೆಗಳು ಒಟ್ಟುಗೂಡಿ ಸಹಕಾರ ಕ್ಷೇತ್ರವನ್ನು ಬಲವರ್ಧನೆಗೊಳಿಸಿ, ರೈತರ ವೈಯಕ್ತಿಕ ಹಾಗೂ ಆರ್ಥಿಕತೆ ಸುಸ್ಥಿರಗೊಳಿಸಬೇಕಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts