More

    ‘ಹೆಲೆನ್​’ ಚಿತ್ರದ ಹಿಂದಿ ರೀಮೇಕ್​ನಲ್ಲಿ ಜಾಹ್ನವಿ … ಮಗಳಿಗಾಗಿ ರೀಮೇಕ್​ ರೈಟ್ಸ್​ ಪಡೆದ ಬೋನಿ

    ದಕ್ಷಿಣ ಭಾರತದ ಹಿಟ್ಟ ಚಿತ್ರಗಳ ರೀಮೇಕ್​ ಹಕ್ಕುಗಳನ್ನು ಪಡೆದು, ಹಿಂದಿಯಲ್ಲಿ ನಿರ್ಮಾಣ ಮಾಡುವುದರಲ್ಲಿ ಹಿರಿಯ ನಿರ್ಮಾಪಕ ಬೋನಿ ಕಪೂರ್​ ಎತ್ತಿದ ಕೈ. ತೆಲುಗು ಮತ್ತು ತಮಿಳಿನ ಹಲವು ಚಿತ್ರಗಳನ್ನು ಅವರು ಹಿಂದಿಗೆ ರೀಮೇಕ್​ ಮಾಡಿದ್ದಾರೆ. ಈಗ ತಮ್ಮ ಮುದ್ದಿನ ಮಗಳು ಜಾಹ್ನವಿಗಾಗಿ ಅವರು ಮಲಯಾಳಂನ ಹಿಟ್​ ಚಿತ್ರ ‘ಹೆಲೆನ್​’ ಹಿಂದಿ ರೀಮೇಕ್​ ಹಕ್ಕುಗಳನ್ನು ತಗೆದಿಟ್ಟುಕೊಂಡಿದ್ದಾರೆ.

    ಬೋನಿ ಕಪೂರ್ ಮತ್ತು ಶ್ರೀದೇವಿ ಅವರ ಮುದ್ದಿನ ಮಗಳು ಜಾಹ್ನವಿ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯಾದಾಗ, ಬೋನಿ ಕಪೂರ್​ ಅವರೇ ಯಾವುದಾದರೊಂದು ಚಿತ್ರದ ಮೂಲಕ ಪರಿಚಯಿಸುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ, ಇದು ಸುಳ್ಳಾಯಿತು. ಬೋನಿ ಬದಲು ಕರಣ್​ ಜೋಹರ್​, ಜಾಹ್ನವಿಯನ್ನು ‘ಧಡಕ್​’ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದರು.

    ಇದನ್ನೂ ಓದಿ: ಈ ಹೆಸರೇ ನನ್ನ ಗುರುತು … ಅಭಿಮಾನಿಗಳಿಗೆ ಥ್ಯಾಂಕ್ಸ್​ ಹೇಳಿದ ಸುದೀಪ್​

    ಈ ಚಿತ್ರ ಬಾಕ್ಸ್​-ಆಫೀಸ್​ನಲ್ಲಿ ಯಶಸ್ವಿಯಾಗಿ, ಜಾಹ್ನವಿಗೆ ಬೇಡಿಕೆ ಹೆಚ್ಚಾಯಿತು. ‘ಧಡಕ್​’ ನಂತರ ಜಾಹ್ನವಿ ಬೇರೆ ನಿರ್ಮಾಪಕರಿಗೆ ಕಾಲ್​ಶೀಟ್​ ಕೊಟ್ಟರೂ, ಮನೆಯಲ್ಲಿರುವ ನಿರ್ಮಾಪಕರಿಗೆ ಕೊಟ್ಟಿರಲಿಲ್ಲ. ಇತ್ತ ಬೋನಿ ಸಹ ತಮ್ಮ ಮಗಳ ಅಭಿನಯದಲ್ಲಿ ಒಂದು ಚಿತ್ರ ನಿರ್ಮಿಸಬೇಕು ಎಂದು ಯೋಚಿಸುತ್ತಿದ್ದರು. ಸೂಕ್ತ ಕಥೆಗಾಗಿ ಹುಡುಗಾಟ ನಡೆಸಿದ್ದರು. ಈ ವರ್ಷದ ಆರಂಭದಲ್ಲಿ ಬೋನಿ ತಮ್ಮ ಮಗಳಿಗಾಗಿ ‘ಬಾಂಬೆ ಗರ್ಲ್​’ ಎಂಬ ಚಿತ್ರವನ್ನು ನಿರ್ಮಿಸುವುದಕ್ಕೆ ಯೋಚಿಸಿದ್ದರು ಎಂದು ಹೇಳಲಾಗುತ್ತಿದೆ.

    ಈ ಮಧ್ಯೆ, ಅದ್ಯಾರೋ ಮಲಯಾಳಂನ ‘ಹೆಲೆನ್​’ ಚಿತ್ರವನ್ನು ಈ ಅಪ್ಪ-ಮಗಳಿಗೆ ತೋರಿಸಿದ್ದಾರೆ. ಚಿತ್ರ ನೋಡಿದ ಅಪ್ಪ-ಮಗಳು ಖುಷಿಯಾಗಿದ್ದಷ್ಟೇ ಅಲ್ಲ, ಯಾಕೆ ಈ ಚಿತ್ರವನ್ನು ಹಿಂದಿಯಲ್ಲಿ ರೀಮೇಕ್​ ಮಾಡಬಾರದು ಎಂದು ಇಬ್ಬರಿಗೂ ಅನಿಸಿತಂತೆ. ಯಾವಾಗ ಮಗಳು ‘ಹೆಲೆನ್​’ನ ಹಿಂದಿ ರೀಮೇಕ್​ನಲ್ಲಿ ನಟಿಸುವ ಆಸಕ್ತಿ ತೋರಿಸಿದಳೋ, ಬೋನಿ ಸೀದಾ ತಮ್ಮ ಕಾಂಟ್ಯಾಕ್ಟ್​ ಉಪಯೋಗಿಸಿ, ಚಿತ್ರದ ರೀಮೇಕ್​ ಹಕ್ಕುಗಳನ್ನು ತರಿಸಿಕೊಂಡಿದ್ದಾರೆ.

    ಇದನ್ನೂ ಓದಿ: ತೆಲುಗು ಬಿಗ್​ಬಾಸ್​ ಕೆಲಸಗಳು ಶುರು; ಪ್ರೋಮೋ ಶೂಟ್​ನಲ್ಲಿ ನಾಗಾರ್ಜುನ್ ಬಿಜಿ

    ಸದ್ಯಕ್ಕೆ ಮುಂಬೈನಲ್ಲಿ ಕರೊನಾ ಹಾವಳಿ ಜಾಸ್ತಿ ಇರುವುದರಿಂದ, ಈ ಚಿತ್ರ ಸದ್ಯಕ್ಕೆ ಪ್ರಾರಂಭವಾಗುವುದಿಲ್ಲ ಎನ್ನುವುದು ಗೊತ್ತಿರಲಿ. ಮೊದಲಿಗೆ ಕರೊನಾ ಹಾವಳಿ ಕೊಂಚ ಕಡಿಮೆಯಾಗಬೇಕು. ಆ ನಂತರ, ಜಾಹ್ನವಿ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನೆಲ್ಲಾ ಮುಗಿಸಬೇಕು. ಅದರ ನಂತರವಷ್ಟೇ ಹಿಂದಿಯ ‘ಹೆಲೆನ್​’ ಶುರು. ಅದು ಮುಂದಿನ ವರ್ಷವಾದರೂ ಆಗಬಹುದು. ಅದರ ಮುಂದಿನ ವರ್ಷ ಬೇಕಾದರೂ ಆಗಬಹುದು.

    ‘ಹೆಲೆನ್​’ ಚಿತ್ರ ಕನ್ನಡದಲ್ಲೂ ರೀಮೇಕ್​ ಆಗಲಿದೆ ಆಗುತ್ತಿದೆ ಎಂಬುದು ವಿಶೇಷ. ವರ್ಷದ ಆರಂಭದಲ್ಲಿ, ರೀಮೇಕ್​ ಆಗುತ್ತಿರುವ ವಿಷಯ ಸುದ್ದಿಯಾಗಿತ್ತು. ಲಾಸ್ಯಾ ನಾಗರಾಜ್​ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಸಹ ಹೇಳಲಾಗಿತ್ತು. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಇಷ್ಟರಲ್ಲಿ ಚಿತ್ರೀಕರಣ ಸಹ ಶುರುವಾಗಬೇಕಿತ್ತು. ಆದರೆ, ಕರೊನಾ ಹಾವಳಿ ನೋಡಿದರೆ, ಸದ್ಯಕ್ಕೆ ಚಿತ್ರ ಶುರುವಾಗುವುದು ಸಂಶಯ.

    ಅವರಿನ್ನು ನನ್ನ ಜವಾಬ್ದಾರಿ … ಮೂರು ಮಕ್ಕಳನ್ನು ದತ್ತು ಪಡೆದ ಸೋನು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts