More

    ಜನತಾ ಬಜಾರ್ ಮಾರುಕಟ್ಟೆ ತೆರವು ಇಂದು

    ಹುಬ್ಬಳ್ಳಿ: ನಗರದ ಜನತಾ ಬಜಾರ್ ಮಾರುಕಟ್ಟೆ ಪ್ರದೇಶ ತೆರವು ಕಾರ್ಯಾಚರಣೆ ಬುಧವಾರ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ.

    ಇಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ 18.36 ಕೋಟಿ ರೂ. ಅನುದಾನದಲ್ಲಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ವಣವಾಗಲಿದೆ. ಮಾರುಕಟ್ಟೆಯಲ್ಲಿನ ಮಳಿಗೆದಾರರಿಗೆ, ಕಟ್ಟಾ ಮೇಲಿನ ವ್ಯಾಪಾರಿಗಳಿಗೆ ಮಾರುಕಟ್ಟೆ ಪ್ರದೇಶ ತೆರವುಗೊಳಿಸುವಂತೆ ಪಾಲಿಕೆ ಈಗಾಗಲೇ ನೋಟಿಸ್ ನೀಡಿತ್ತು. ಮಾರುಕಟ್ಟೆ ಪ್ರದೇಶವನ್ನು ಖುಲ್ಲಾ ಪಡಿಸಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಹು-ಧಾ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಂಪನಿಗೆ ಹಸ್ತಾಂತರಿಸಬೇಕಿದೆ.

    ‘ಜನತಾ ಬಜಾರ್ ಮಾರುಕಟ್ಟೆ ಸಂಕೀರ್ಣದ ವ್ಯಾಪಾರಿಗಳ ಜತೆ ಈಗಾಗಲೇ ಹಲವು ಸುತ್ತಿನ ಸಭೆ ನಡೆಸಿದ್ದೇವೆ. ಅವರಿಗೆ ಎಲ್ಲ ರೀತಿಯಲ್ಲಿ ಮನವರಿಕೆ ಮಾಡಿಯೇ ಬುಧವಾರ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಮಾರುಕಟ್ಟೆ ಪ್ರದೇಶದ ಮಧ್ಯ ಭಾಗ ಹಾಗೂ ಕಟ್ಟೆಗಳನ್ನು ಮೊದಲಿಗೆ ತೆರವುಗೊಳಿಸಲಾಗುವುದು. ಮೇನ್ ಬ್ಲಾಕ್ ಅನ್ನು ಒಂದೆರಡು ದಿನಗಳಲ್ಲಿ ತೆರವುಗೊಳಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ತಿಳಿಸಿದ್ದಾರೆ.

    ಮಾರುಕಟ್ಟೆ ಸಂಕೀರ್ಣದ ವ್ಯಾಪಾರಿಗಳಿಗೆ ಗೋಕುಲ ರಸ್ತೆ ಕ್ಲಾರ್ಕ್ಸ್ ಇನ್ ಬಳಿ ಹಾಗೂ ಹೊಸೂರಿನಲ್ಲಿ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ವಿದ್ಯುತ್, ಶೌಚಗೃಹ, ನೀರು ಪೂರೈಕೆ ವ್ಯವಸ್ಥೆಗಾಗಿ ಮಂಗಳವಾರ ರಾತ್ರಿಯವರೆಗೂ ಕೆಲಸ ಮಾಡಿದ್ದೇವೆ ಎಂದು ಹೇಳಿದರು. ಮಾರುಕಟ್ಟೆಯ ಶೆಡ್, ಖುಲ್ಲಾ ಜಾಗದಲ್ಲಿ ತರಕಾರಿ, ಕಾಯಿಪಲ್ಲೆ, ಹೂವು-ಹಣ್ಣು, ಇನ್ನಿತರ ದಿನ ನಿತ್ಯ ಬಳಕೆ ವಸ್ತುಗಳನ್ನು ಮಾರಾಟ ಮಾಡುವ ವ್ಯಾಪಾರಿಗಳು ಎಲ್ಲರಿಗೂ ನೂತನ ಮಾರುಕಟ್ಟೆ ಸಂಕೀರ್ಣ ನಿರ್ವಣಗೊಂಡ ಬಳಿಕ ವ್ಯಾಪಾರ ಮಾಡಲು ಅವಕಾಶ ಮಾಡಿಕೊಡಬೇಕೆಂದು ವ್ಯಾಪಾರಿಗಳಿಗೂ ಕಳೆದ ಕೆಲ ದಿನಗಳಿಂದ ಪಟ್ಟು ಹಿಡಿದಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts