More

    ಎಲ್ಲಾ ಪಕ್ಷದವರು ನನ್ನನ್ನು ಫುಟ್​ಬಾಲ್​ನಂತೆ ಆಡಿಸಿದ್ದರು! ಹೀಗಾಗಿ ಫುಟ್​ಬಾಲ್ ಚಿಹ್ನೆ ಆಯ್ಕೆ ಮಾಡಿಕೊಂಡೆ; ಜನಾರ್ದನ ರೆಡ್ಡಿ

    ಬೆಂಗಳೂರು: ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಮೂಲಕ ಮತ್ತೆ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಕ್ರೀಯವಾಗಲು ಜನಾರ್ದನ ರೆಡ್ಡಿ ಹೊರಟಿದ್ದಾರೆ. ಹೀಗಾಗಿ ಕಳೆದ ಮೂರು ತಿಂಗಳಿನಿಂದ ಬಿರುಸಿನ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಸದ್ಯ ರೆಡ್ಡಿ ಅವರ ಕಲ್ಯಾಣ ಪ್ರಗತಿ ಪಕ್ಷಕ್ಕೆ ಚುನಾವಣಾ ಆಯೋಗ ಫುಟ್​ಬಾಲ್ ಚಿಹ್ನೆ ನೀಡಿದೆ. ಇದನ್ನೂ ಓದಿ: ಇಂದಿನಿಂದ 3 ದಿನ ಗುಡುಗು ಸಹಿತ ಮಳೆ; ಹವಾಮಾನ ಇಲಾಖೆ ಮುನ್ಸೂಚನೆ

    ಜನಾರ್ದನ ರೆಡ್ಡಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 50 ಕ್ಷೇತ್ರಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಸ್ಪರ್ಧಿಸಿ, 30 ಕ್ಷೇತ್ರದಲ್ಲಿ ನೂರಕ್ಕೆ ನೂರುರಷ್ಟು ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದೀಗ ಫುಟ್​ಬಾಲ್ ಚಿಹ್ನೆ ಲಭಿಸಿದ್ದರ ಬಗ್ಗೆ ಮಾತನಾಡುತ್ತಾ, ಅಂದು ನನ್ನನ್ನು ಎಲ್ಲರೂ ಸೇರಿ ಫುಟ್​​ಬಾಲ್​ನಂತೆ ಆಡಿದ್ದರು. ನಾನೀಗ ಎಲ್ಲರನ್ನು ಫುಟ್​ಬಾಲ್ ಆಡಬೇಕೆಂದೇ ಈ ಚಿಹ್ನೆ ಪಡೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ. 

    ಪುಟ್​​ಬಾಲ್ ಆಟದಲ್ಲಿ ಯಾರು ಎಷ್ಟು ಗೋಲ್ ಹೊಡೆದರೂ, ಯಾರಿಗೆ ಗೋಲ್ಡನ್ ಬೂಟ್ ಸಿಕ್ಕಿತು ಎನ್ನುವುದನ್ನುನೀವೆ ಬರೆದುಕೊಳ್ಳಿ. ನಾನಂತು ಫುಟ್​ಬಾಲ್ ಆದೆ ಎಂದು ಹೇಳುತ್ತಾ ಜನಾರ್ದನ ರೆಡ್ಡಿ ತಮ್ಮ ಪಕ್ಷದ ಚಿಹ್ನೆ ಬಗ್ಗೆ ವಿಶಿಷ್ಟ ವ್ಯಾಖ್ಯಾನ ನೀಡಿದರು.

    ಇದೇ ವೇಳೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಯಾವ ಪಕ್ಷದೊಂದಿಗೂ ಚುನಾವಣಾ ಪೂರ್ವ ಮೈತ್ರಿ ಮಾಡಿಕೊಳ್ಳುವುದಿಲ್ಲ. ಬಿಜೆಪಿ ಸೇರಿದಂತೆ ಯಾವ ಪಕ್ಷದ ನಾಯಕರು ನನ್ನ ಸಂಪರ್ಕ ಮಾಡಿಲ್ಲ ಎಂದು ಜನಾರ್ದನ ರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಯಾದಗಿರಿ | ಶಾರ್ಟ್ ಸರ್ಕ್ಯೂಟ್​​ನಿಂದ ಬೆಂಕಿಗಾಹುತಿಯಾದ ದಂಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts