More

    ಹಂಪಿ ಸುತ್ತಮುತ್ತ ಹೋಂ ಸ್ಟೇಗೆ ಅನುಮತಿ ನೀಡಿ: ಸದನದಲ್ಲಿ ಜನಾರ್ದನ ರೆಡ್ಡಿ ಒತ್ತಾಯ

    ಬೆಂಗಳೂರು: ಹಂಪಿ ಸುತ್ತಮುತ್ತಲಿನ‌ ಹೋಂ ಸ್ಟೇಗೆ ಅನುಮತಿ ಕೊಡಿ ಎಂದು ಸದನದಲ್ಲಿ ಶಾಸಕ ಜನಾರ್ದನ ರೆಡ್ಡಿ ಒತ್ತಾಯಿಸಿದ್ದಾರೆ.

    ಶೂನ್ಯವೆಳೆಯಲ್ಲಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ, “ಹಂಪಿಯಲ್ಲಿನ ಹೋಂ ಸ್ಟೇಗಳನ್ನ ತೆರವು‌ ಮಾಡಲಾಗಿದೆ. ಇದರಿಂದ ಎರಡು ಸಾವಿರ ಮಂದಿಗೆ ಉದ್ಯೋಗ ಇಲ್ಲದಂತಾಗಿದೆ. ಅಲ್ಲಿಗೆ ಸಾಕಷ್ಟು ಪ್ರವಾಸಿಗರು ಬರುತ್ತಾರೆ. ಹೀಗಾಗಿ ಅಲ್ಲಿ ಹೋಂಸ್ಟೇ ತೆರೆಯಲು ಜನರಿಗೆ ಅವಕಾಶ ಕೊಡಿ” ಎಂದು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: ಹಂಪಿ: ಜಿ- ೨೦ ಸಭೆಗೆ ಸಿಸಿಟಿವಿ ಕಣ್ಗಾವಲು

    ಇದಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಉತ್ತರ ನೀಡಿದ್ದು, “ಅಲ್ಲಿ ಕೃಷಿ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ಇದೆ. ಹಾಗಾಗಿ ಅಲ್ಲಿ ಹೋಂ ಸ್ಟೇಗಳನ್ನು ತೆರವು ಮಾಡಲಾಗಿದೆ. ಕೃಷಿ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ಮಾಡಲು ಸಾಧ್ಯವಿಲ್ಲ. ಅಲ್ಲಿ ಅನುಮತಿ ಕೊಡುವ ಅಗತ್ಯವೇ ಬರುವುದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

    ಈ ವೇಳೆ ಮಧ್ಯಪ್ರವೇಶಿಸಿದ ಶಾಸಕ ರಾಯರೆಡ್ಡಿ, “ಡ್ರಗ್ಸ್ ಮಾಫಿಯಾ ಅಲ್ಲಿ ನಡೆಯುತ್ತಿದೆ. ಬೇರೆ ಬೇರೆ ದೇಶದಿಂದ ಅಲ್ಲಿಗೆ ಬರುತ್ತಾರೆ. ಕರ್ನಾಟಕದ ಮೇಜರ್ ಡ್ರಗ್ಸ್ ಕೇಂದ್ರವಾಗುತ್ತಿದೆ. ಹಾಗಾಗಿ ನಿಯಂತ್ರಣ ಇರುವುದು ಉತ್ತಮ. ಕಾನೂನಿನ ಅಡಿಯಲ್ಲಿ ಹೋಂ ಸ್ಟೇ ಸಕ್ರಮಕ್ಕೆ ಅವಕಾಶ ಮಾಡಿಕೊಡಬಹುದು. ಆದರೆ ಅಕ್ರಮಕ್ಕೆ ಅವಕಾಶ ಬೇಡ” ಎಂದು ಶಾಸಕ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

    ಇದನ್ನೂ ಓದಿ: ಜಿ೨೦ ಸಮ್ಮಿಟ್‌ಗೆ ಹಂಪಿ ಭಾಗದಲ್ಲಿ ಸಿದ್ಧತೆ ಚುರುಕು – ಕಮಲಾಪುರದಲ್ಲಿ ರಸ್ತೆ ಅತಿಕ್ರಮಣ ತೆರವು

    ಅದಕ್ಕೂ ಉತ್ತರಿಸಿದ ಸಚಿವ ಬೈರತಿ ಸುರೇಶ್, ಇಲ್ಲಿ ಅಕ್ರಮ ಸಕ್ರಮ ಮಾಡಲು ಆಗುವುದಿಲ್ಲ. ಕೃಷಿ ಭೂಮಿಯಲ್ಲಿ ವಾಣಿಜ್ಯ ಚಟುವಟಿಕೆ ಬರುವುದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts