More

    ಕರ್ನಾಟಕ ಲೋಕಸೇವಾ ಆಯೋಗ ಎಂಬ ಭ್ರಷ್ಟರ ಕೂಪ!

    ಕರ್ನಾಟಕ ಲೋಕಸೇವಾ ಆಯೋಗ ಇತ್ತೀಚಿನ ದಿನಗಳಲ್ಲಿ ಭ್ರಷ್ಟರಕೂಪವಾಗಿ ಮಾರ್ಪಡುತ್ತಿದೆ. ಆಯೋಗವು ಹಣದಾಹ, ರಾಜಕಾರಣಿಗಳ ಪ್ರಭಾವದಿಂದ ತನ್ನ ವರ್ಚಸ್ಸನ್ನು ಕಳೆದುಕೊಂಡಿದೆ. ಅದು ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಎಲ್ಲ ನೇಮಕಾತಿಗಳಲ್ಲಿಯೂ ಅಪಸ್ವರ ಕೇಳಿಬಂದಿದೆ. ಅಲ್ಲದೆ, ಯಾವುದೇ ಒಂದು ನೇಮಕಾತಿ ಪೂರ್ಣಗೊಳಿಸಲು 4 ರಿಂದ 5 ವರ್ಷಗಳನ್ನು ಆಯೋಗ ತೆಗೆದುಕೊಳ್ಳುತ್ತದೆ. ಈ ರೀತಿ ನೇಮಕಾತಿ ಪ್ರಕ್ರಿಯೆ ದೀರ್ಘವಾದಂತೆಲ್ಲ ಅಕ್ರಮ ಎಸಗಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂಬುದನ್ನು ಗಮನಿಸಬೇಕು. ಪ್ರಶ್ನೆಪತ್ರಿಕೆ ಸೋರಿಕೆ, ಉತ್ತರ ಕೀಗಳ ಸೋರಿಕೆ ಹಾಗೂ ನೇಮಕಾತಿಯಲ್ಲಿ ವಿಳಂಬದಂಥ ಅಪಸವ್ಯಗಳನ್ನು ತಡೆಯಲೇ ಬೇಕು.

    ಸರ್ಕಾರವು ಆಯೋಗದ ತಪ್ಪುಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಪರಿಸ್ಥಿತಿ ಸುಧಾರಿಸದಿದ್ದಲ್ಲಿ ಕೆಪಿಎಸ್​ಸಿಯನ್ನು ರದ್ದುಮಾಡಿ ಆ ಸ್ಥಾನದಲ್ಲಿ ಕೇಂದ್ರದ ಯುಪಿಎಸ್​ಸಿ ಹಾಗೂ ಎಸ್​ಎಸ್​ಸಿಗಳಂತೆ ನಿಷ್ಪಕ್ಷಪಾತ ಹಾಗೂ ಭ್ರಷ್ಟಾಚಾರರಹಿತ ಆಯೋಗವನ್ನು ಸ್ಥಾಪಿಸುವ ಅಗತ್ಯವಿದೆ. ಸರ್ಕಾರಿ ಸಿಬ್ಬಂದಿ/ಅಧಿಕಾರಿಗಳಾಗಿ ಸೇವೆ ಸಲ್ಲಿಸಬೇಕೆಂದು ಆಸೆಗಣ್ಣಿನಿಂದ ಕಾಯುತ್ತಿರುವ ಸಾವಿರಾರು ಯುವಕರ ಮನಸ್ಸಿನಲ್ಲಿನ ನೇಮಕಾತಿಗಳ ಬಗೆಗಿನ ಸಂಶಯವನ್ನು ದೂರ ಮಾಡಬೇಕಿದೆ. ಪಾರದರ್ಶಕತೆ ತರಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಿದೆ.

    | ಸಿದ್ದನಗೌಡ ಮರಕಮದಿನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts