More

    ಎಪಿ ವಸತಿ ಯೋಜನೆಯಲ್ಲಿ ಭಾರಿ ಅಕ್ರಮ: ಸಿಬಿಐ ತನಿಖೆ ನಡೆಸಲು ಪ್ರಧಾನಿ ಮೋದಿಗೆ ಪವನ್ ಕಲ್ಯಾಣ್ ಪತ್ರ..

    ಅಮರಾವತಿ: ಆಂಧ್ರಪ್ರದೇಶದಲ್ಲಿ ಬಡವರಿಗೆ ವಸತಿ ನಿರ್ಮಾಣ ಮತ್ತು ಹಂಚಿಕೆಯಲ್ಲಿ ಭಾರಿ ಹಗರಣ ನಡೆದಿದ್ದು, ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದ ವಿರುದ್ಧ ಸಿಬಿಐ ತನಿಖೆ ನಡೆಸಬೇಕು ಎಂದು ಜನಸೇನಾ ಅಧ್ಯಕ್ಷ ಮತ್ತು ಜನಪ್ರಿಯ ನಟ ಪವನ್ ಕಲ್ಯಾಣ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.

    ಇದನ್ನೂ ಓದಿ: ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬ ದುರಂತ ಅಂತ್ಯ: 41 ಕೋಟಿ ರೂ.ಬಂಗಲೆಯಲ್ಲಿ ಮೂವರ ಶವ ಪತ್ತೆ!
    ರಾಜ್ಯದಲ್ಲಿ ಭೂಸ್ವಾಧೀನದ ಹೆಸರಿನಲ್ಲಿ 35,141 ಕೋಟಿ ರೂ. ದುರ್ಬಳಕೆಯಾಗಿದೆ, ಮನೆ ಬಾಡಿಗೆ, ನಿರ್ಮಾಣ ವಿಚಾರದಲ್ಲಿ ಸರ್ಕಾರ ಬೇರೆ ಬೇರೆ ಹೇಳಿಕೆ ನೀಡುತ್ತಿರುವುದು ನೋಡಿದರೆ ಹಣ ದುರ್ಬಳಕೆ ಸಾಮಾನ್ಯ ಪ್ರಜೆಗೂ ಅರ್ಥವಾಗುತ್ತದೆ. ಈ ಹಿಂದೆ ಟಿಡ್ಕೋ ನಿರ್ಮಿಸಿದ ಮನೆಗಳು ಸಹ ಫಲಾನುಭವಿಗಳಿಗೆ ಸಿಕ್ಕಿಲ್ಲ. ಅಂಕಿ ಅಂಶಗಳ ಪ್ರಕಾರ 2.24 ಲಕ್ಷ ಟಿಡ್ಕೋ ಮನೆಗಳು ಪೂರ್ಣಗೊಂಡಿವೆ. ಆದರೆ ಕೇವಲ 86,984 ಜನರಿಗೆ ಮಾತ್ರ ಮನೆಗಳನ್ನು ನೀಡಲಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಆಂಧ್ರಪ್ರದೇಶದ ವೈ.ಎಸ್‌. ಜಗನ್​ ಮೋಹನ್​ ರೆಡ್ಡಿ ಸರ್ಕಾರವು ರಾಜ್ಯಾದ್ಯಂತ 30 ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸುವ ಭರವಸೆಯೊಂದಿಗೆ ‘ಪೇದಲಂದರಿಕಿ ಇಲ್ಲು’ (ಎಲ್ಲಾ ಬಡವರಿಗೆ ಮನೆ) ಯೋಜನೆಯನ್ನು ಪ್ರಾರಂಭಿಸಿತು. ಮೊದಲ ಹಂತವಾಗಿ, ಅದು ಮನೆ ನಿವೇಶನಗಳನ್ನು ವಿತರಿಸಲು ಪ್ರಯತ್ನಿಸಿತು.

    ಗ್ರಾಮಾಂತರದಲ್ಲಿ ತಲಾ 1 ಸೆಂಟ್ ಮತ್ತು ನಗರ ಪ್ರದೇಶದಲ್ಲಿ 1.5 ಸೆಂಟ್ಸ್ ನಂತೆ 29,51,858 ಮಹಿಳಾ ಫಲಾನುಭವಿಗಳಿಗೆ ಮನೆ ನಿವೇಶನ ಪಟ್ಟಾ ನೀಡಬೇಕಿತ್ತಾದರೂ, ವಾಸ್ತವದಲ್ಲಿ 21,87,985 ಮಹಿಳೆಯರಿಗೆ ಮಾತ್ರ ಮನೆ ನಿವೇಶನ ಪಟ್ಟಾ (ಪಟ್ಟಾ) ನೀಡಲಾಗಿದೆ. ಇದಕ್ಕಾಗಿ 28,554.64 ಎಕರೆ ಸರ್ಕಾರಿ ಭೂಮಿಯನ್ನು ಪರಿವರ್ತಿಸಲಾಗಿದೆ. ಮನೆ ನಿವೇಶನಗಳಲ್ಲಿ 25,374.66 ಎಕರೆಯನ್ನು ಖಾಸಗಿ ವ್ಯಕ್ತಿಗಳಿಂದ ಸ್ವಾಧೀನಪಡಿಸಿಕೊಳ್ಳಲಾಗಿದೆ ಎಂದು ಎಂದು ಪವನ್​ ಕಲ್ಯಾಣ್ ಐದು ಪುಟಗಳ ಪತ್ರದಲ್ಲಿ ಹೇಳಿದ್ದಾರೆ.

    ಅಕ್ರಮ ಭೂಸ್ವಾಧೀನದ ಕುರಿತು ಅವರು, “ಮಹಿಳಾ ಫಲಾನುಭವಿಗಳಿಗೆ ವಿತರಿಸಲಾದ ಮನೆ ನಿವೇಶನಗಳ ಸಂಖ್ಯೆ, ಸ್ವಾಧೀನಪಡಿಸಿಕೊಂಡ ಭೂಮಿ ಮತ್ತು ಉದ್ದೇಶಕ್ಕಾಗಿ ಖರ್ಚು ಮಾಡಿದ ಹಣದ ಬಗ್ಗೆ ಸಮರ್ಪಕ ಮಾಹಿತಿ ನೀಡುವಲ್ಲಿ ಜಗನ್ ಸರ್ಕಾರವು ವಿಫಲವಾಗಿದೆ.

    ಜಗನ್ ಆಡಳಿತವು ಬಡವರಿಗಾಗಿ 30 ಲಕ್ಷ ಮನೆಗಳನ್ನು ನಿರ್ಮಿಸುತ್ತಿದೆ ಎಂದು ಹೇಳುತ್ತಿದೆ ಆದರೆ, ತನ್ನದೇ ಆದ ಅಧಿಕೃತ ದಾಖಲೆಗಳ ಪ್ರಕಾರ, 17,005 ಲೇಔಟ್‌ಗಳಲ್ಲಿ ವಿವಿಧ ಘಟಕಗಳ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳ ಸಂಖ್ಯೆ ಕೇವಲ 12,09,022 ಆಗಿದೆ. ವೈಸಿಪಿ ನೇತೃತ್ವದ ಸರ್ಕಾರವು ಸಾವಿರಾರು ಕೋಟಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿರುವುದನ್ನು ಪತ್ರದಲ್ಲಿ ಒತ್ತಿಹೇಳಲಾಗಿದೆ.

    ಲಡಾಖ್‌ಗೆ ಹೊಸ ವರ್ಷದ ಉಡುಗೊರೆ ನೀಡಿದ ಗಡ್ಕರಿ: 29 ಹೊಸ ರಸ್ತೆ ಅಭಿವೃದ್ಧಿಗೆ 1352 ಕೋಟಿ ರೂ.ವೆಚ್ಚ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts