More

    ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬ ದುರಂತ ಅಂತ್ಯ: 41 ಕೋಟಿ ರೂ.ಬಂಗಲೆಯಲ್ಲಿ ಮೂವರ ಶವ ಪತ್ತೆ!

    ವಾಷಿಂಗ್ಟನ್​: ಅಮೆರಿಕದಲ್ಲಿ ಭಾರತೀಯ ಮೂಲದ ಕುಟುಂಬವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದೆ. ಮ್ಯಾಸಚೂಸೆಟ್ಸ್‌ನ ಡೋವರ್‌ನಲ್ಲಿರುವ ಅವರ ಬಂಗಲೆಯಲ್ಲಿ ದಂಪತಿ ಮತ್ತು 18 ವರ್ಷದ ಯುವತಿ ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು ರಾಕೇಶ್ ಕಮಲ್ (57), ಟೀನಾ (54) ಮತ್ತು ಅವರ ಪುತ್ರಿ ಅರಿಯಾನಾ (18) ಎಂದು ಗುರುತಿಸಲಾಗಿದೆ. ರಾಕೇಶ್ ಮೃತದೇಹದ ಬಳಿ ಬಂದೂಕು ಪತ್ತೆಯಾಗಿದ್ದು, ಅವರ ಸಾವಿನ ಹಿಂದೆ ಹಲವು ಅನುಮಾನಗಳಿವೆ.

    ಇದನ್ನೂ ಓದಿ: 50ರೂ.ಗೆ ಕೋಳಿ ಬೇಕಾ? ಮೊಟ್ಟೆ ಬೇಕಾ ಆಫರ್​..ಆಸೆಗೆ ಬಿದ್ದು 50ಸಾವಿರ ಕಳೆದುಕೊಂಡ ವೃದ್ಧ!
    ರಾಕೇಶ್ ಕಮಲ್ ದಂಪತಿ ಅಮೆರಿಕದಲ್ಲಿ ಶ್ರೀಮಂತ ಕುಟುಂಬ. ಕಮಲ್ ತಮ್ಮ ಶಿಕ್ಷಣವನ್ನು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ, ಬೋಸ್ಟನ್ ವಿಶ್ವವಿದ್ಯಾಲಯ ಮತ್ತು ಎಂಐಟಿ ಸ್ಲೋನ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಪೂರ್ಣಗೊಳಿಸಿದರು. ಟೀನಾ ತನ್ನ ಶಿಕ್ಷಣವನ್ನು ಹಾರ್ವರ್ಡ್ ವಿಶ್ವವಿದ್ಯಾಲಯ ಮತ್ತು ದೆಹಲಿ ವಿಶ್ವವಿದ್ಯಾಲಯದಲ್ಲಿ ಪೂರ್ಣಗೊಳಿಸಿದರು. ಇಬ್ಬರಿಗೂ ಶಿಕ್ಷಣ ಕ್ಷೇತ್ರದಲ್ಲಿ ಅನುಭವವಿದ್ದ ಕಾರಣ 2016ರಲ್ಲಿ ಎಡುನೋವಾ ಎಂಬ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದರು.

    ಆದರೆ ಹಣಕಾಸಿನ ತೊಂದರೆಗಳಿಂದಾಗಿ ಇದು 2021 ರಲ್ಲಿ ತನ್ನ ಕಾರ್ಯಾಚರಣೆಯನ್ನು ನಿಲ್ಲಿಸಿತು. ಕಳೆದ ವರ್ಷ ಸೆಪ್ಟೆಂಬರ್ 22ರಂದು ಶಿಕ್ಷಣ ಸಂಸ್ಥೆಯ ದಿವಾಳಿತನದ ಅರ್ಜಿಯನ್ನೂ ಸಲ್ಲಿಸಲಾಗಿದೆಯಂತೆ. ಇದರ ನಡುವೆ ಕಮಲ್ ದಂಪತಿ 2019 ರಲ್ಲಿ ಪ್ರತಿಷ್ಠಿತರು ವಾಸಿಸುವ ಮ್ಯಾಸಚೂಸೆಟ್ಸ್‌ನಲ್ಲಿ 4 ಮಿಲಿಯನ್ ಡಾಲರ್ ಕೊಟ್ಟು ಬೃಹತ್​ ಬಂಗಲೆ ಖರೀದಿಸಿದ್ದರು. 19 ಸಾವಿರ ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಕಟ್ಟಡದಲ್ಲಿ 11 ಮಲಗುವ ಕೋಣೆಗಳಿದ್ದವು. ಈಗ ಆ ಕಟ್ಟಡದ ಮೌಲ್ಯ 5 ಮಿಲಿಯನ್ ಡಾಲರ್ (ರೂ. 41.26 ಕೋಟಿ). ಸದ್ಯ ಈ ಬಂಗಲೆಯಲ್ಲೇ ಕಮಲ್ ದಂಪತಿ ವಾಸವಿದ್ದರು.

    ಎರಡು ದಿನವಾದರೂ ಕಮಲ್ ದಂಪತಿಯಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅವರ ಸಂಬಂಧಿಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಪೊಲೀಸರು ಕಟ್ಟಡಕ್ಕೆ ತೆರಳಿ ಪರಿಶೀಲಿಸಿದಾಗ ಮೂರು ಶವಗಳು ಪತ್ತೆಯಾಗಿವೆ. ಘಟನೆ ವೇಳೆ ಯಾರೂ ಇಲ್ಲದ ಕಾರಣ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಆದರೆ ಅವರ ಸಾವಿಗೆ ಕೌಟುಂಬಿಕ ಕಲಹಗಳೇ? ಹಣಕಾಸಿನ ತೊಂದರೆಗಳು ಕಾರಣವೇ? ಅಥವಾ ಹೊರಗಿನವರಿಗೆ ಸಂಬಂಧವಿದೆಯೇ? ಎಂಬ ನಿಟ್ಟಿನಲ್ಲಿ ಪೊಲೀಸರು ತನಿಖೆ ತನಿಖೆ ನಡೆಸುತ್ತಿದ್ದಾರೆ.

    ವಿಮಾನದಲ್ಲಿ ಮಾನವ ಕಳ್ಳಸಾಗಣೆ: 20 ಜನರ ವಿಚಾರಣೆ ನಡೆಸಿದ ಗುಜರಾತ್ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts