More

    ಕಾಶ್ಮೀರದ ಅವಂತಿಪುರದಲ್ಲಿ ಉಗ್ರರ ಬೇಟೆ; ಸೇನಾ ಪಡೆ, ಸಿಆರ್​ಪಿಎಫ್​, ಸ್ಥಳಿಯ ಪೊಲೀಸರು ಭಾಗಿ

    ಜಮ್ಮು ಕಾಶ್ಮೀರ: ಭದ್ರತಾ ಪಡೆಗಳು ಕಾಶ್ಮೀರದ ಅವಂತಿಪುರ(ಅವಂತಿಪೋರಾ) ಎಂಬಲ್ಲಿ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆದಿದೆ.

    ಸೇನೆಯ ರಾಷ್ಟ್ರೀಯ ರೈಫಲ್ಸ್​, ಸಿಆರ್​ಪಿಎಫ್​ ಮತ್ತು ಸ್ಥಳಿಯ ಪೊಲೀಸರು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಅವಂತಿಪುರ ಬಳಿಯ ಸತ್​ ಪೋಕ್ರಾನ್​ ಎಂಬಲ್ಲಿ ಗುಂಡಿನ ಚಕಮಕಿ ನಡೆದಿದೆ.

    ಸತ್​ಪೋಕ್ರಾನ್​ ಪ್ರದೇಶದಲ್ಲಿ ಕೆಲವು ಉಗ್ರರ ಇದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರಿದವು. ಆಗ ಗುಂಡಿನ ದಾಳಿ ನಡೆಸಲಾಯಿತು. ನಂತರ ಹೆಚ್ಚುವರಿ ಪಡೆಗಳು ಆಗಮಿಸಿವೆ.

    ಜಮ್ಮು ಕಾಶ್ಮೀರ ಪೊಲೀಸರು ಈ ಬಗ್ಗೆ ಟ್ವೀಟ್​ ಮಾಡಿದ್ದಾರೆ. ಅವಂತಿಪುರ ಬಳಿಯಲ್ಲಿ ಗುಂಡಿನ ದಾಳಿ ನಡೆಯುತ್ತಿದೆ. ಪೊಲೀಸ್​ ಮತ್ತು ಭದ್ರತಾ ಪಡೆಗಳು ಕಾರ್ಯಾಚರಣೆಯಲ್ಲಿ ನಿರತವಾಗಿವೆ ಎಂದು ತಿಳಿಸಿದೆ.

    ಪುಲ್ವಾಮಾದಲ್ಲಿ ಪೆಟ್ರೋಲ್​ ಬಾಂಬ್​ ದಾಳಿ ನಡೆದ ಒಂದು ದಿನದ ಬಳಿಕ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ದಾಳಿಯಲ್ಲಿ ಯಾವ ಹಾನಿಯಾದ ಬಗ್ಗೆ ಈವರೆಗೆ ವರದಿಯಾಗಿಲ್ಲ.

    ಪುಲ್ವಾಮಾ ಬಳಿಯ ನೇವಾ ಎಂಬಲ್ಲಿ ಸೋಮವಾರ ಸಂಜೆ ಸಿಆರ್​ಪಿಎಫ್​ ಮೇಲೆ ಪೆಟ್ರೋಲ್​ ಬಾಂಬ್​ ದಾಳಿ ನಡೆದಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಬಾಂಬ್​ ದಾಳಿಯಿಂದ ಯಾವ ನಷ್ಟವೂ ಆಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಮೊನ್ನೆಯಷ್ಟೇ ಶೋಪಿಯಾನ್ ಜಿಲ್ಲೆಯಲ್ಲಿ ನಡೆದ ಭದ್ರತಾ ಪಡೆಗಳ ಮುಖಾಮುಖಿಯಲ್ಲಿ ಪೊಲೀಸ್ ಕೆಲಸ ಬಿಟ್ಟು ಹೋಗಿದ್ದವರು ಸೇರಿ ಮೂವರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರು ಸಾವನ್ನಪ್ಪಿದ್ದರು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts