More

    ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ ನಡೆಸಿದ್ದವ 14 ದಿನ ಬಾಲ ಮಂದಿರಕ್ಕೆ ರವಾನೆ: ಆರೋಪಿ ಮೂಳೆ ಪರೀಕ್ಷೆಗೆ ಮುಂದಾದ ಪೊಲೀಸರು

    ನವದೆಹಲಿ: ಜಾಮಿಯಾ ನಗರದಲ್ಲಿ ಗುರುವಾರ ಗುಂಡು ಹಾರಿಸಿದ ಶೂಟರ್‌ನನ್ನು 14 ದಿನಗಳವರೆಗೆ ಬಾಲಮಂದಿರ ವಶಕ್ಕೆ ಒಪ್ಪಿಸಲಾಗಿದೆ.

    ಶೂಟರ್‌ನ 10 ನೇ ತರಗತಿಯ ಮಾರ್ಕ್‌ಕಾರ್ಡ್​ ಮತ್ತು ಆಧಾರ್ ಕಾರ್ಡ್ ಆಧಾರದ ಮೇಲೆ ಬಾಲಾಪರಾಧಿಯಾಗಿ ಎಂದು ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಆರೋಪಿಯ ಮೂಳೆ ಪರೀಕ್ಷೆಗೆ ಪೊಲೀಸರು ಮುಂದಾಗಿದ್ದು, ಅದಕ್ಕಾಗಿ ಬಾಲಾಪರಾಧಿ ನ್ಯಾಯ ಮಂಡಳಿಯ ಮೊರೆ ಹೋಗಿದ್ದಾರೆ. ಅಲ್ಲಿ ಅನುಮತಿ ದೊರೆತ ಬಳಿಕ ದೆಹಲಿಯ ಆರ್​ಎಂಎಲ್​ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಯಲಿದೆ.

    ಗುರುವಾಗ ಜಾಮಿಯಾ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಆರೋಪಿ ಗುಂಡಿನ ದಾಳಿ ನಡೆಸಿದ್ದ. ಅಲ್ಲದೆ ಯಾರಿಗೆ ಬೇಕು ಸ್ವಾತಂತ್ರ್ಯ.. ಇಲ್ಲಿದೆ… ಎಂದು ಕೂಗಿದ್ದ. ಇವನನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

    ಇದನ್ನೂ ಓದಿ: VIDEO| ಯಾರಿಗೆ ಬೇಕು ಸ್ವಾತಂತ್ರ್ಯ? ನಾನು ನೀಡುತ್ತೇನೆಂದು ಕೂಗಿ ಸಿಎಎ ವಿರೋಧಿ ಪ್ರತಿಭಟನಾಕಾರರ ಮೇಲೆ ಫೈರಿಂಗ್​

    ಆರೋಪಿಗೆ ಪಿಸ್ತೂಲ್​ ದೊರೆತದ್ದು ಎಲ್ಲಿಂದ ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ತನ್ನ ಹಳ್ಳಿಯಲ್ಲಿ ಸ್ಥಳೀಯವಾಗಿ ತಯಾರಿಸಿದ್ದ ಪಿಸ್ತೂಲನ್ನು 10 ಸಾವಿರ ರೂಪಾಯಿ ಕೊಟ್ಟು ಖರೀದಿಸಿದ್ದೆ ಎಂದು ಪೊಲೀಸರಿಗೆ ಆರೋಪಿ ತಿಳಿಸಿದ್ದಾನೆ.

    ಪ್ರಕರಣವನ್ನು ಕ್ರೈಂ ಬ್ರಾಂಚ್​ಗೆ ವರ್ಗಾಯಿಸಲಾಗಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಗುಂಡಿನ ದಾಳಿ ನಡೆಸಿದವನ ವಿರುದ್ಧ ಎಫ್​ಐಆರ್​ ಸಿದ್ಧಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts