More

    ಆಧಾರ್ ಸೀಡಿಂಗ್‌ನಿಂದ ಅಂಚೆ ಖಾತೆಗೆ ಹಣ!

    ಲಿಂಗದಹಳ್ಳಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿರಿಯ ನಾಗರಿಕರು, ಮಹಿಳೆಯರು, ಅಂಗವಿಕಲರು ಸೇರಿ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಯೋಜನೆಗಳ ಸದುಪಯೋಗ ಪಡೆದುಕೊಳ್ಳುವಂತೆ ಚಿಕ್ಕಮಗಳೂರು ವಿಭಾಗದ ಅಂಚೆ ನಿರೀಕ್ಷಕ ನವೀನ್‌ಕುಮಾರ್ ತಿಳಿಸಿದರು.

    ಮಂಗಳವಾರ ಲಿಂಗದಹಳ್ಳಿ ಅಂಚೆ ಕಚೇರಿಯಲ್ಲಿ ವಿವಿಧ ಸಾಮಾಜಿಕ ಭದ್ರತಾ ವೇತನದ ಯೋಜನೆಗಳನ್ನು ಪಡೆಯುವ ಫಲಾನುಭವಿಗಳಿಗೆ ನಡೆದ ಆಧಾರ್ ಸೀಡಿಂಗ್ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಅಂಚೆ ಇಲಾಖೆ, ಇತರೆಡೆಗಳಲ್ಲಿ ಉಳಿತಾಯ ಖಾತೆಗಳನ್ನು ತೆರೆಯುತ್ತಿದ್ದಾರೆ. ಕೆಲವರು ಬೇರೆ ಬೇರೆ ಉಳಿತಾಯ ಖಾತೆಗಳನ್ನು ಹೊಂದಿರುವ ಕಾರಣ ಸರ್ಕಾರದ ಸೌಲಭ್ಯಗಳು ಯಾವ ಖಾತೆಗೆ ಜಮೆಗೊಳ್ಳುತ್ತಿವೆ ಎಂದು ತಿಳಿಯಲು ಪರದಾಡುತ್ತಿದ್ದಾರೆ. ಇದನ್ನು ತಪ್ಪಿಸಲು ನೇರವಾಗಿ ಮನೆಗಳಿಗೇ ಅಂಚೆ ಇಲಾಖಾ ಉಳಿತಾಯ ಖಾತೆಗಳಿಗೆ ಆಧಾರ್ ಸೀಡಿಂಗ್ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುತ್ತಿದೆ. ಅರ್ಹರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
    ಉಪ ಅಂಚೆ ಪಾಲಕ ನಾರಾಯಣ ನಾಯ್ಕ ಮಾತನಾಡಿ, ಹೋಬಳಿಯಾದ್ಯಂತ ಇರುವ ಅಂಚೆ ಉಳಿತಾಯ ಖಾತೆದಾರರಿಗೆ ಆಧಾರ್ ಸೀಡಿಂಗ್ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. 553 ಫಲಾನುಭವಿಗಳಿಗೆ ಆಧಾರ್ ಸೀಡಿಂಗ್ ಮಾಡಲಾಗಿದೆ ಎಂದು ತಿಳಿಸಿದರು.
    ವಿವಿಧೆಡೆಯ ಅಂಚೆ ಪಾಲಕರಾದ ಎಂ.ಪಂಚಾಕ್ಷರಿ , ತ್ರಿಮೂರ್ತಿ, ವಿನುತಾ, ಎಸ್.ಕೆಂಪಯ್ಯ, ಹನುಮಂತಪ್ಪ, ಎಚ್.ಮಂಜುನಾಥ್, ಎಚ್.ಹನುಮಂತ ಆಡೂರು, ಗುರುಮೂರ್ತಿ , ಎನ್.ಎಸ್.ಪರಮೇಶ್ವರಪ್ಪ, ಚಿಕ್ಕಮಗಳೂರು ಅಂಚೆ ನಿರೀಕ್ಷಕರ ಕಚೇರಿಯ ಸಹಾಯಕ ವಸಂತಕುಮಾರ್ ಇತರರಿದ್ದರು.

    ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಜತೆಗೆ ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಎಲ್ಲರೂ ಖಾತೆಗಳಿಗೆ ಆಧಾರ್ ಸೀಡಿಂಗ್ ಮಾಡಿಸಿಕೊಳ್ಳಬಹುದು. ಇದರ ಮೂಲಕ ಸರ್ಕಾರದಿಂದ ಸೀಗುವ ಎಲ್ಲ ಯೋಜನೆಗಳ ಸಹಾಯ ಧನವನ್ನು ಸಮೀಪವಿರುವ ಅಂಚೆ ಕಚೇರಿಗಳಲ್ಲಿ ಪಡೆದುಕೊಳ್ಳಬಹುದು.
    ನವೀನ್‌ಕುಮಾರ್
    ಚಿಕ್ಕಮಗಳೂರು ಅಂಚೆ ನಿರೀಕ್ಷಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts