More

    ಜೇಮ್ಸ್​ ಬಾಂಡ್​ ಖ್ಯಾತಿಯ ನಟ ಸೀನ್​ ಕಾನೆರಿ ಇನ್ನಿಲ್ಲ

    ಲಂಡನ್​: ಜೇಮ್ಸ್​ ಬಾಂಡ್ ಖ್ಯಾತಿಯ ನಟ ಸೀನ್​ ಕಾನೆರಿ ತಮ್ಮ 90ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು.

    1962 ಹಾಗೂ 1983ರ ಅವಧಿಯಲ್ಲಿ ಏಳು ಬಾಂಡ್​ ಸಿನಿಮಾಗಳಲ್ಲಿ ನಟಿಸಿದ್ದ ಅವರು, ಆಸ್ಕರ್ ಪ್ರಶಸ್ತಿಗೂ ಪಾತ್ರರಾಗಿದ್ದರು. ‘ದ ಅನ್​ಟಚೇಬಲ್ಸ್’ ಸಿನಿಮಾದಲ್ಲಿನ ಟಫ್ ಐರಿಷ್ ಕಾಪ್​ ಪಾತ್ರಕ್ಕಾಗಿ ಅವರಿಗೆ ಆಸ್ಕರ್ ಪ್ರಶಸ್ತಿ ಬಂದಿತ್ತು. ಸ್ಕಾಟಿಷ್​ ಮೂಲದ ಈ ನಟ ಆಸ್ಕರ್ ಮಾತ್ರವಲ್ಲದೆ ಮೂರು ಗೋಲ್ಡನ್ ಗ್ಲೋಬ್ಸ್​ ಹಾಗೂ ಎರಡು ಬಫ್ತಾ ಪ್ರಶಸ್ತಿಗೂ ಪಾತ್ರರಾಗಿದ್ದರು.

    ಇವರು ಮೊದಲು ನಟಿಸಿದ ಬಾಂಡ್ ಸಿನಿಮಾ 1962ರಲ್ಲಿ ತೆರೆಕಂಡಿದ್ದ ‘ಡಾ. ನೋ’. ಬಳಿಕ ‘ಫ್ರಮ್ ರಷ್ಯಾ ವಿದ್ ಲವ್’, ‘ಗೋಲ್ಡ್​ ಫಿಂಗರ್’​, ‘ಥಂಡರ್ ಬಾಲ್’​, ‘ಯೂ ಓನ್ಲಿ ಲಿವ್ ಟ್ವೈಸ್​’, ‘ಡೈಮಂಡ್ಸ್ ಆರ್​ ಫಾರೆವರ್’​ ಹಾಗೂ ‘ನೆವರ್ ಸೇ ನೆವರ್ ಅಗೇನ್’​ ಸಿನಿಮಾಗಳಲ್ಲಿ ನಟಿಸಿದ್ದರು.

    ಆರಂಭದಲ್ಲಿ ತೀರಾ ಬಡತನದಲ್ಲಿ ಬದುಕಿದ್ದ ಕಾನೆರಿ, ಎಡಿನ್​ಬರೋದ ಸ್ಲಮ್​ಗಳಲ್ಲಿ ಜೀವನ ನಡೆಸಿದ್ದರು. ಮಾತ್ರವಲ್ಲ ಶವದ ಪೆಟ್ಟಿಗೆ ಪಾಲಿಶ್ ಮಾಡುವ, ಹಾಲು ಮಾರುವ ಹಾಗೂ ಬಾಡಿ ಗಾರ್ಡ್​ ಕೆಲಸವನ್ನೂ ಮಾಡಿದ್ದರು. ನಂತರ ಇವರ ಬಾಡಿ ಬಿಲ್ಡಿಂಗೇ ಅವರನ್ನು ಸಿನಿಮಾ ಜಗತ್ತಿನತ್ತ ಕರೆ ತಂದಿತ್ತು. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts