More

    ಬಾರ್​ ಸಪ್ಲೈಯರ್​ ಆದ ಧನಂಜಯ … ‘ಜಮಾಲಿಗುಡ್ಡ’ದಲ್ಲೊಂದು ವಿಭಿನ್ನ ಪಾತ್ರ

    ಬೆಂಗಳೂರು: ಧನಂಜಯ್​ ಅಭಿನಯದ ‘ತೋತಾಪುರಿ’, ‘ಹೆಡ್​ ಬುಷ್​’, ‘ಮಾನ್ಸೂನ್​ ರಾಗ’ ಮುಂತಾದ ಚಿತ್ರಗಳ ಚಿತ್ರೀಕರಣ ಮುಗಿದಿದ್ದು, ಇನ್ನೇನು ಬಿಡುಗಡೆಯಾಗಬೇಕಿದೆ. ಇದರ ಮಧ್ಯೆ, ಧನಂಜಯ ಅಭಿನಯದ ಇನ್ನೊಂದು ಚಿತ್ರ ಸಹ ಸದ್ದಿಲ್ಲದೆ ಮುಕ್ತಾಯವಾಗಿದೆ. ಅದೇ ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’.

    ಇದನ್ನೂ ಓದಿ: ಸಾಲು ಸಾಲು ಚಿತ್ರಗಳು ಸೋತರೂ ಪೂಜಾ ಹೆಗ್ಡೆಗೆ ಕಿಂಚಿತ್ತೂ ಕಡಿಮೆ ಆಗಿಲ್ಲ ಡಿಮ್ಯಾಂಡ್!

    ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಚಿತ್ರದ ಚಿತ್ರೀಕರಣ ಕಳೆದ ವರ್ಷವೇ ಆರಂಭವಾಗಿತ್ತು. ಬೆಂಗಳೂರು, ಚಿಕ್ಕಮಗಳೂರು, ಕುದುರೆಮುಖ, ಗೋಕರ್ಣ, ಶಿವಮೊಗ್ಗದಲ್ಲಿ ಎಂಭತ್ತು ದಿನಗಳ ಚಿತ್ರೀಕರಣ ನಡೆದಿದ್ದು, ಇತ್ತೀಚೆಗೆ ಮುಕ್ತಾಯವಾಗಿದೆ. ಚಿತ್ರವನ್ನು ಸೆ.09ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡದವರು ಇತ್ತೀಚೆಗೆ ಅಧಿಕೃತವಾಗಿ ಘೋಷಿಸಿದ್ದಾರೆ.

    ಇದು 90ರ ದಶಕದಲ್ಲಿ ನಡೆಯುವ ಕಥೆಯಾಗಿದ್ದು, ‘ಬಾರ್ ಸಪ್ಲೇಯರ್ ಪಾತ್ರದಲ್ಲಿ ಡಾಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದಲ್ಲಿನ ಧನಂಜಯ ಅವರ ಪಾತ್ರದ ಮೊದಲ ನೋಟ ಸಹ ಬಿಡುಗಡೆಯಾಗಿದೆ. ಧನಂಜಯಗೆ ನಾಯಕಿಯಾಗಿ ಅದಿತಿ ಪ್ರಭುದೇವ ನಟಿಸಿದ್ದು, ಪ್ರಕಾಶ್ ಬೆಳವಾಡಿ, ಭಾವನ ರಾಮಣ್ಣ, ‘ಕಾಮಿಡಿ ಕಿಲಾಡಿಗಳು’ ಸಂತು, ತ್ರಿವೇಣಿ ರಾವ್​ ಮುಂತಾದವರು ತಾರಾಬಳಗದಲ್ಲಿದ್ದಾರೆ.

    ಇದನ್ನೂ ಓದಿ: ಜಾಲತಾಣದಲ್ಲಿ ಅಶ್ಲೀಲ ವಿಡಿಯೋ ಹರಿಬಿಟ್ಟ ಪೂನಂ ಪಾಂಡೆಗೆ ಎದುರಾಯ್ತು ಭಾರೀ ಸಂಕಷ್ಟ!

    ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಚಿತ್ರವನ್ನು ಕುಶಾಲ್​ ಗೌಡ ನಿರ್ದೇಶಿಸಿದ್ದು, ನಿಹಾರಿಕಾ ಮೂವೀಸ್ ಲಾಂಛನದಲ್ಲಿ ಶ್ರೀಹರಿ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರಕ್ಕೆ ಕುಶಾಲ್​ ಅವರ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನಚಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಕಾರ್ತಿಕ್ ಛಾಯಾಗ್ರಹಣ ಮಾಡಿದ್ದಾರೆ.

    ನವೀನ್ ಈಗ ಕ್ಷೇತ್ರಪತಿ: ಅದಕ್ಕೂ ಮುನ್ನ ‘ಕ್ಷೇತ್ರಪತಿ’ ಎಂದರೆ ಏನು? ಇಲ್ಲಿದೆ ಉತ್ತರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts