More

    ಹರಿಹರ ಮಠದಲ್ಲಿ ಹರಜಾತ್ರೆ

    ಜಮಖಂಡಿ: ವೀರಶೈವ ಲಿಂಗಾಯತ ಪಂಚಮಸಾಲಿ ಸಂಘ ಸ್ಥಾಪನೆಯಾಗಿ ಜ.14 ರಂದು 25 ವಸಂತ ಪೂರ್ಣಗೊಳಿಸುವ ಹಿನ್ನೆಲೆ ‘ಬೆಳ್ಳಿ ಬೆಡಗು ಕಾರ್ಯಕ್ರಮ’ದ ಮೂಲಕ ಹರಿಹರದ ಸಮಾಜ ಮಠದಲ್ಲಿ ಹರಜಾತ್ರೆ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಜಕನೂರ-ಕುಂಚನೂರ ಕಮರಿಮಠದ ಸಿದ್ಧಲಿಂಗ ದೇವರು ಹೇಳಿದರು.

    14 ರಂದು ಬೆಳಗ್ಗೆ 11.30 ಗಂಟೆಗೆ ಹರಜಾತ್ರೆ ಮಹೋತ್ಸವ ಹಾಗೂ ಯುವ ಸಮಾವೇಶಕ್ಕೆ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಶ್ರೀಗಳು ಚಾಲನೆ ನೀಡುವರು. ಮಧ್ಯಾಹ್ನ 2.30 ಗಂಟೆಗೆ ನಡೆಯುವ ಬೆಳ್ಳಿ ಬೆಡಗು ಸಮಾರಂಭವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸುವರು. ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಅಧ್ಯಕ್ಷ ಬಿ.ನಾಗನಗೌಡರು ಅಧ್ಯಕ್ಷತೆ ವಹಿಸುವರು ಎಂದು ನಗರದ ರಮಾ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    15 ರಂದು ಇಷ್ಟಲಿಂಗ ಪೂಜೆ, ಪ್ರಾತ್ಯಕ್ಷತೆ ಸಂಕ್ರಾಂತಿ ಸಂಭ್ರಮ, ಕುಂಭಮೇಳ, ಜಾನಪದ ಕಲಾಮೇಳ, ಮಹಿಳಾ ಸಮಾವೇಶ, ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದ ದ್ವಾದಶ ಮಹೊತ್ಸವ ಹಾಗೂ ಯೋಗ ಸಿಂಹಾಸನಾಧೀಶ್ವರ ಪಂಚಮಸಾಲಿ ಜಗದ್ಗುರು ವಚನಾನಂದ ಶ್ರೀಗಳ ದ್ವಿತೀಯ ಪೀಠಾರೋಹಣ ಕಾರ್ಯಕ್ರಮ ಜರುಗುವುದು ಎಂದರು.

    ಆಲಗೂರು ಧರಿದೇವರ ಮಠದ ಲಕ್ಷ್ಮಣ ಮುತ್ಯಾ ಮಾತನಾಡಿದರು. ಅಧ್ಯಕ್ಷ ಮಹಾದೇವ ಇಟ್ಟಿ, ಏಗಪ್ಪ ಸವದಿ, ಸುಭಾಷ ಕೊಪ್ಪದ, ಸಿ.ಪಿ. ಜನವಾಡ, ಜಿ.ಬಿ. ಕೌಜಲಗಿ, ಬಸವರಾಜ ಇಟ್ಟಿ, ರವಿ ಗವಳಿ, ಬಸವರಾಜ ಕೌಜಲಗಿ, ಶಿವಾನಂದ ಪಾರಶೆಟ್ಟಿ, ಬಸವರಾಜ ಪೂಜಾರಿ ಇತರರು ಇದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts