More

    ಗುಡ್ಡಮಡ್ಡಿ ಪ್ರದೇಶದ ಗೋಮಾಳ ಜಾಗೆ ಉಳಿಸಿ

    ಜಮಖಂಡಿ: ಕೊಣ್ಣೂರ ಗ್ರಾಮದ ಸರ್ಕಾರಿ ಗುಡ್ಡಮಡ್ಡಿ ಪ್ರದೇಶದ ಗೋಮಾಳ ಉಳಿಸಿ, ದನಕರುಗಳ ಪ್ರಾಣ ಕಾಪಾಡಬೇಕು ಎಂದು ಒತ್ತಾಯಿಸಿ ಗ್ರಾಮದಲ್ಲಿ ಮುಖಂಡರು ಶುಕ್ರವಾರ ಅನಿದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಿದರು.

    ಮುಖಂಡ ಮಲ್ಲಪ್ಪ ಮಲಘಾಣ ಮಾತನಾಡಿ, ಕೊಣ್ಣೂರ ಗ್ರಾಮದ ಸರ್ಕಾರಿ ಗುಡ್ಡಮಡ್ಡಿ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ವೈನ್ ್ಯಾಕ್ಟರಿ ಕಟ್ಟಡವನ್ನು ನೆಲಸಮ ಗೊಳಿಸಬೇಕು. 493 ಎಕರೆ ಸರ್ಕಾರದ ಜಮೀನನ್ನು ಕಬಳಿಸಲು ಮುಂದಾಗಿರುವವರ ವಿರುದ್ಧ ಜಿಲ್ಲಾಡಳಿತ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

    2009 ರಿಂದ ಹೋರಾಟ ಮಾಡುತ್ತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಇದರ ಬಗ್ಗೆ ಕ್ರಮ ಕೈಗೊಂಡಿಲ್ಲ. 25 ಸಾವಿರ ಕುರಿಗಳು, 10 ಸಾವಿರ ಜಾನುವಾರುಗಳ ಮೇವಿಗಾಗಿ ಗುಡ್ಡಮಡ್ಡಿ ಪ್ರದೇಶ ಅವಲಂಬಿಸಿವೆ ಎಂದರು. ಗದಿಗೆಪ್ಪ ಕಳ್ಳೆಪ್ಪ ಮಾತನಾಡಿ, ಗ್ರಾಮದ ಸರ್ವೇ ನಂ. 99ರ 493 ಎಕರೆ ಜಾಗ 2012ಕ್ಕಿಂತ ಮೊದಲು ದೇಸಾರರ ಹೆಸರಿನಲ್ಲಿತ್ತು. ಸದ್ಯ ಸರ್ಕಾರದ ಹೆಸರಿನಲ್ಲಿದೆ. ರಾವುಲ್ ರಾಚಪ್ಪ ಕುಲ್ಹೊಳ್ಳಿ ಹಾಗೂ ಕುಟುಂಬಸ್ಥರು ಅಧಿಕಾರಿಗಳೊಂದಿಗೆ ಸೇರಿಕೊಂಡು ಈ ಜಾಗೆಯನ್ನು ಖರೀದಿ ಪಡೆದುಕೊಂಡಿದ್ದೇವೆ ಎಂದು ಅಕ್ರಮವಾಗಿ ವೈನ್ ಫ್ಯಾಕ್ಟರಿ ನಿರ್ಮಿಸುತಿದ್ದಾರೆ. ಹೋರಾಟ ಮಾಡಲು ಮುಂದಾದವರಿಗೆ ಕೊಲೆ ಬೆದರಿಕೆ ಹಾಕುತ್ತಾರೆ. ಇದರಿಂದ ಕುರಿಗಾಹಿಗಳು ಜೀವಭಯದಲ್ಲೇ ಕುರಿಪಾಲನೆ ಮಾಡುವಂತಾಗಿದೆ. ಅವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

    ತಾಪಂ ಸದಸ್ಯ ಭೀಮಪ್ಪ ಹಾದಿಮನಿ ಮಾತನಾಡಿ, ಕುರಿಗಾಹಿಗಳು ಶತಮಾನಗಳಿಂದಲೂ ಈ ಪ್ರದೇಶ ಅವಲಂಬಿಸಿದ್ದಾರೆ. ಈ ಪ್ರದೇಶ ಸರ್ಕಾರದ ಅಧೀನದಲ್ಲಿದ್ದು, ಗ್ರಾಮಸ್ಥರ ಬದುಕಿಗಾಗಿ, ಪಶು-ಪ್ರಾಣಿ ಸಂರಕ್ಷಣೆಗಾಗಿ ಹಾಗೂ ಪರಿಸರ ಉಳಿವಿಗಾಗಿ ಗೋಮಾಳವೆಂದು ಘೋಷಿಸಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಕಳೆಪ್ಪ ಜೋತೆಪ್ಪನವರ, ಸೋಮರಾಯ ಗಾಡದ, ಶಾಂತಪ್ಪ ಎಣ್ಣಿ, ನಿಂಗಪ್ಪ ಎಣ್ಣಿ, ಧರೆಪ್ಪ ತೊಡಕಿನಮನಿ, ಬೀರಪ್ಪ ಎಣ್ಣಿ, ಹಣಮಂತ ಕನ್ನಗಾರ ಹಾಗೂ ಗ್ರಾಮದ ಜಾನುವಾರುಗಳ ಮಾಲೀಕರು ಮತ್ತು ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts