More

    ಕಲಕೇರಿ ಆರೋಗ್ಯ ಕೇಂದ್ರಕ್ಕೆ ಮೂಲಸೌಕರ್ಯ ಒದಗಿಸಿ

    ಕಲಕೇರಿ: ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ) ಕ್ಕೆ ಸಿಬ್ಬಂದಿ ನೇಮಕ, ಮೂಲಸೌಕರ್ಯ, ಆಂಬುಲೆನ್ಸ್ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಅಂಬೇಡ್ಕರ್ ಸೇನೆ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಮಂಗಳವಾರ ಆಸ್ಪತ್ರೆ ಆವರಣದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಆರಂಭಿಸಲಾಯಿತು.

    ಸದರಿ ಆರೋಗ್ಯ ಕೇಂದ್ರದಕ್ಕೆ ಸುತ್ತಮುತ್ತಲಿನ ಅಂದಾಜು 35 ಹಳ್ಳಿಗಳ ಬಡಜನರು ಚಿಕಿತ್ಸೆಗಾಗಿ ಬರುತ್ತಾರೆ. ಆದರೆ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅವಶ್ಯಕತೆಗೆ ತಕ್ಕಂತೆ ಸಿಬ್ಬಂದಿ ಇಲ್ಲದ್ದರಿಂದ ಸರಿಯಾದ ಸಮಯದಲ್ಲಿ ಚಿಕಿತ್ಸೆ ದೊರೆಯುತ್ತಿಲ್ಲ. ಅವಶ್ಯಕ ಸಲಕರಣೆಗಳು ಕೂಡ ಇಲ್ಲ. ಹೆಸರಿಗೆ ಮಾತ್ರ 30 ಹಾಸಿಗೆಯ ಆಸ್ಪತ್ರೆ ಇದ್ದು, ಯಾವುದೇ ಸೌಲಭ್ಯವಿಲ್ಲ. ಕೇವಲ ಇಬ್ಬರು ವೈದ್ಯರಿದ್ದು, ಇನ್ನುಳಿದ 4 ಸಿಬ್ಬಂದಿ ನಿಯೋಜನೆ ಮೇರೆಗೆ ಬೇರೆಡೆ ಕರ್ತವ್ಯಕ್ಕೆ ಹೋಗಿದ್ದು, ಕೂಡಲೇ ಅವರನ್ನು ವಾಪಸ್ ಕರೆಸುವಂತೆ ಧರಣಿ ನಿರತರು ಆಗ್ರಹಿಸಿದರು.

    ಅಂಬೇಡ್ಕರ್ ಸೇನೆ ತಾಲೂಕು ಅಧ್ಯಕ್ಷ ಗೋಪಾಲ ಕಟ್ಟಿಮನಿ, ಉಪಾಧ್ಯಕ್ಷ ಸಂಜೀವ ಉತಾಳೆ, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಅಧ್ಯಕ್ಷ ಡಿ.ಕೆ.ದೊಡಮನಿ, ಮುಖಂಡರಾದ ಹಣಮಂತ ವಡ್ಡರ ಇತರರು ಮಾತನಾಡಿ, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಂಬುಲೆನ್ಸ್, 108 ವಾಹನ, ಶುಶ್ರೂಷಾಧಿಕಾರಿ, ಾರ್ಮಸಿ ಅಧಿಕಾರಿ ಹಾಗೂ ಲಿಫಿಕ್ ವರ್ಗದ ಸಿಬ್ಬಂದಿ ಸೇರಿ ಖಾಲಿ ಇರುವ 25 ಹುದ್ದೆಗಳನ್ನು ಭರ್ತಿ ಮಾಡಬೇಕು. ಮೂಲಸೌಕರ್ಯ ಒದಗಿಸುವದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವವರೆಗೂ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರಿಸುವುದಾಗಿ ಹೇಳಿದರು.

    ಪ್ರತಿಭಟನೆ ಸ್ಥಳಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಡಾ.ಎ.ಎ.ಮಾಗಿ ಆಗಮಿಸಿ ಧರಣಿ ಸತ್ಯಾಗ್ರಹ ನಿರತರೊಂದಿಗೆ ಸಮಾಲೋಚಿಸಿ ಮನವೊಲಿಸಲು ಮಾಡಿದ ಪ್ರಯತ್ನ ಫಲಿಸಲಿಲ್ಲ.

    ಕಾಶಿನಾಥ ಕಟ್ಟಿಮನಿ, ಮಹಾದೇವ ಅಸ್ಕಿ, ಪರಶುರಾಮ ನಾಲತವಾಡ, ನಾಗರಾಜ ಗಜಕೋಶ, ಮಡು ಚಲವಾದಿ, ಮಲ್ಲಿಕಾರ್ಜುನ ಕಟ್ಟಿಮನಿ, ಸುನೀಲ ಕಲಕೇರಿ, ಅರ್ಜುನ ನಡುವಿನಮನಿ, ಬಸವರಾಜ ಕಾಂಬಳೆ, ದೇವು ವಡ್ಡರ, ಉಮೇಶ ಕೆರುಟಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts