More

    ವಾಜಪೇಯಿ ಅಭಿವೃದ್ಧಿ ಹರಿಕಾರ

    ಜಮಖಂಡಿ: ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜಪೇಯಿ ಅವರು ಮಹಾತಪಸ್ವಿ ಹಾಗೂ ದೇಶದ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಿದ ಮಹಾನ್ ನಾಯಕರಾಗಿದ್ದಾರೆ ಎಂದು ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೇಳಿದರು.

    ನಗರದ ಸುವರ್ಣ ಚಿತ್ರಮಂದಿರದಲ್ಲಿ ಬಿಜೆಪಿ, ಒಬಿಸಿ ಮೋರ್ಚಾ ಆಶ್ರಯದಲ್ಲಿ ಆಯೋಜಿಸಿದ್ದ ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಹಂತ ಹಂತವಾಗಿ ಬಿಜೆಪಿ ಪಕ್ಷವನ್ನು ದೇಶದಲ್ಲಿ ಬೃಹದಾಕಾರವಾಗಿ ಬೆಳೆಸಲು ಶ್ರಮಿಸಿದ ಮಹಾನ್ ನಾಯಕ. ದೇಶಕ್ಕಾಗಿ ಹಗಲಿರುಳು ಶ್ರಮಿಸಿ ಎನ್‌ಡಿಎ ನೇತೃತ್ವದ ಆಡಳಿತಾವಧಿಯಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಿ ತತ್ವ ಸಿದ್ಧಾಂತದ ಆಡಳಿತ ನೀಡಿ ಮೌಲ್ಯಾಧಾರಿತ ರಾಜಕಾರಣಿಯಾಗಿ ಜನಜನಿತರಾಗಿದ್ದಾರೆ ಎಂದರು.

    ರೈತರಿಗೆ ಬೆಂಬಲ ಬೆಲೆ ದೊರೆಯಬೇಕು ಎಂಬ ನಿಟ್ಟಿನಲ್ಲಿ ಎಪಿಎಂಸಿ ಕಾಯ್ದೆ ಬದಲಾವಣೆಗೆ ಕಾಂಗ್ರೆಸಿಗರು ತಪ್ಪು ಕಲ್ಪನೆಯಿಂದ ವಿರೋಧಿಸುತ್ತಿದ್ದಾರೆ. ವಾಜಪೇಯಿ ಅವರ ಕನಸಿನ ಯೋಜನೆಯಾದ ಪಂಚ ನದಿಗಳ ಜೋಡಣೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಯತ್ನ ನಡೆಸಿದ್ದಾರೆ ಎಂದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಟಿ. ಉಪಾಧ್ಯ ಮಾತನಾಡಿ, ಅಟಲ್‌ಜಿ ಅವರು ಕೇವಲ ರಾಜಕಾರಣಿಯಾಗದೆ ಎಲ್ಲರೊಂದಿಗೆ ಭಾವನಾತ್ಮಕ, ವೈಚಾರಿಕವಾಗಿ ಸಂಬಂಧಗಳನ್ನು ಹೊಂದಿದವರಾಗಿದ್ದರು ಎಂದರು.

    ಜಿಲ್ಲಾ ಉಪಾಧ್ಯಕ್ಷೆ ಡಾ.ವಿಜಯಲಕ್ಷ್ಮೀ ತುಂಗಳ ಮಾತನಾಡಿ, ಅಟಲ್‌ಜಿ ಅವರು ಎಲ್ಲರನ್ನು ಒಗ್ಗೂಡಿಸಿಕೊಂಡು ಎನ್‌ಡಿಎ ಸರ್ಕಾರವನ್ನು ಸಮರ್ಥವಾಗಿ ನಿಭಾಯಿಸಿ ದೇಶದ ನೆಚ್ಚಿನ ಪ್ರಧಾನಿಯಾದವರು. ಎಲ್ಲ ಪಕ್ಷದ ನಾಯಕರಿಗೆ ರಾಜನೀತಿ ಗುರುಗಳಾಗಿ ಅಜಾತ ಶತ್ರುಗಳಾಗಿದ್ದರು ಎಂದರು.

    ನಗರ ಮಂಡಲ ಅಧ್ಯಕ್ಷ ಅಜಯ ಕಡಪಟ್ಟಿ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಪ್ರಕಾಶ ಕಾಳೆ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಯಮನೂರ ಮೂಲಂಗಿ, ಶಶಿಕಾಂತ ವಿಶ್ವಬ್ರಾಹ್ಮಣ, ಸುರೇಶಗೌಡ ಪಾಟೀಲ, ಡಾ.ರಾಕೇಶ ಲಾಡ, ಶ್ರೀಶೈಲ ಪಾಟೀಲ, ಬಸವರಾಜ ಕಲೂತಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ಸೂರ್ಯವಂಶಿ, ಯುವ ಮೋರ್ಚಾ ಅಧ್ಯಕ್ಷ ವಿನಾಯಕ ಗವಳಿ, ಮಹಾದೇವ ಸಾಬು ಗಲಗಲಿ, ಶಾಮ ಗಣಾಚಾರಿ, ಜೀವಪ್ಪ ಮಾಳಿ, ರಾಯಬಾ ಜಾಧವ, ದೀಪಕ ಕದಮ್, ಪ್ರದೀಪ ನಂದೆಪ್ಪನವರ, ಶಂಕರ ಕಾಳೆ, ಸಿದ್ದಾರ್ಥ ಶಿಂಧೆ, ಮಲ್ಲು ಗಲಗಲಿ, ವೆಂಕಟೇಶ ಕಮ್ಮಾರ, ವೀರಣ್ಣ ಕಲೂತಿ, ಅನೀಲ ಬಾಗಿಮನಿ, ಪ್ರಕಾಶ ಅರಕೇರಿ, ನರೇಂದ್ರ ಮಾನೆ, ಸಚಿನ್ ಪಟ್ಟಣಶೆಟ್ಟಿ, ಸುನೀಲ ಹಿರೇಮಠ, ಆನಂದ ಗುಳೇದ, ಸಾವಿತ್ರಿ ಗೊರನಾಳ, ಶ್ರೀಶೈಲ ದೇಬಿಡಿ, ಪ್ರದೀಪ ಹಿರೇಮಠ ಇತರರು ಇದ್ದರು.

    ಮಲ್ಲು ದಾನಗೊಂಡ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಗಣೇಶ ಶಿರಗಣ್ಣನವರ ನಿರೂಪಿಸಿದರು. ಸಿದ್ದು ನ್ಯಾಮಗೌಡ ವಂದಿಸಿದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts