More

    ದಾಖಲೆಗಾಗಿ ಮುಗಿಬಿದ್ದ ಆಕಾಂಕ್ಷಿಗಳು

    ಜಮಖಂಡಿ: ಗ್ರಾಪಂ ಚುನಾವಣೆ ಸೋಮವಾರದಿಂದ ಆರಂಭಗೊಂಡಿದ್ದು, ಸ್ಪರ್ಧಿಗಳು ಅಗತ್ಯ ದಾಖಲೆಗಾಗಿ ತಾಲೂಕು ಕಚೇರಿಗೆ ಮುಗಿಬೀಳುತ್ತಿದ್ದಾರೆ. ತಾಲೂಕಿನ 26 ಗ್ರಾಪಂನ ಒಟ್ಟು 496 ಸ್ಥಾನಕ್ಕೆ 211 ಮತಗಟ್ಟೆಗಳಲ್ಲಿ ಮತದಾನ ಜರುಗಲಿದೆ. 78477 ಪುರುಷರು, 76900 ಮಹಿಳೆಯರು, 4 ಇತರ ಮತದಾರರು ಸೇರಿ ಒಟ್ಟು 155476 ಮತದಾರರಿದ್ದಾರೆ.

    ಆಲಗೂರ 17, ಬಿದರಿ 27, ಚಿಕ್ಕಪಡಸಲಗಿ 18, ಗೋಠೆ 20, ಹಿರೇಪಡಸಲಗಿ 24, ಹುಲ್ಯಾಳ 16, ಹುನ್ನೂರ 25, ಜಂಬಗಿ ಬಿಕೆ 20, ಕಡಪಟ್ಟಿ 10, ಕಂಕನವಾಡಿ 16, ಕನ್ನೊಳ್ಳಿ 21, ಕೊಣ್ಣೂರ 23, ಕುಂಬಾರಹಳ್ಳ 18, ಕುಂಚನೂರ 19, ಲಿಂಗನೂರ 19, ಮದರಖಂಡಿ 22, ಮೈಗೂರ 21, ಮುತ್ತೂರ 16, ಸಾವಳಗಿ 32, ಶೂರಪಾಲಿ 19, ತೊದಲಬಾಗಿ 22, ತುಂಗಳ 19, ಖಾಜಿಬೀಳಗಿ 10, ಸಿದ್ದಾಪುರ 13, ಮರೇಗುದ್ದಿ 15, ಅಡಿಹುಡಿ 14 ಸ್ಥಾನಗಳಿಗೆ ಚುನಾವಣೆ ಜರುಗಲಿದೆ.

    ಯುವಕರು ಆಕಾಂಕ್ಷಿಗಳು
    ಇತ್ತೀಚೆಗೆ ಯುವಕರು ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡು ಚುನಾವಣೆಗಳಲ್ಲಿ ಸ್ಪರ್ಧಿಸಲು ಆಕಾಂಕ್ಷಿಗಳಾಗಿದ್ದಾರೆ. ತಾಲೂಕಿನಲ್ಲಿ ಶಾಸಕ ಆನಂದ ನ್ಯಾಮಗೌಡ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಹೆಚ್ಚಿನ ಪ್ರಾಬಲ್ಯ ಹೊಂದಿದ್ದು, ಪಕ್ಷ ಬಲಪಡಿಸುವ ಜತೆಗೆ ಚುನಾವಣೆಗೆ ಸ್ಪರ್ಧಿಸಲು ಯುವ ಸಮೂಹಕ್ಕೆ ಆದ್ಯತೆ ನೀಡಿದ ಹಿನ್ನೆಲೆಯಲ್ಲಿ ಯುವಕರು ಸ್ಪರ್ಧಿಸಲು ಉತ್ಸುಕರಾಗಿದ್ದು, ಅಗತ್ಯ ದಾಖಲೆ ಪಡೆಯಲು ತಾಲೂಕು ಕಚೇರಿಗೆ ಮುಗಿಬಿದ್ದಿದ್ದಾರೆ.

    ಜಮಖಂಡಿ ಕೇಂದ್ರ ಕಚೇರಿ ಹೊರತುಪಡಿಸಿ ಹೋಬಳಿ ಕೇಂದ್ರಗಳಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ಲಭ್ಯವಿಲ್ಲ. ಹೀಗಾಗಿ ಚುನಾವಣೆಗೆ ಸ್ಪರ್ಧಿಸಲು ಗುರುತಿನ ಚೀಟಿ, ಜಾತಿ-ಆದಾಯ ಪ್ರಮಾಣ ಪತ್ರ ಹಾಗೂ ಅಗತ್ಯ ದಾಖಲೆಗಳಿಗಾಗಿ ನಗರದ ಮಿನಿ ವಿಧಾನಸೌಧಕ್ಕೆ ಬರುವಂತಾಗಿದೆ. ಸಕಲ ಸಿದ್ಧತೆ ಮಾಡಿಕೊಳ್ಳುತ್ತಿರುವ ತಾಲೂಕು ಆಡಳಿತ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸುವ ಕಚೇರಿಗೂ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿದೆ.

    ದಾಖಲೆಗಾಗಿ ಮುಗಿಬಿದ್ದ ಆಕಾಂಕ್ಷಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts